ಅರುಣ್ ಕುಮಾರ್ ಪುತ್ತಿಲ-ಡಾ. ಪ್ರಭಾಕರ್ ಭಟ್ ಪರಸ್ಪರ ಮುಖಾಮುಖಿ

ಪುತ್ತೂರು: ಮದುವೆ ಕಾರ್ಯಕ್ರಮವೊಂದರಲ್ಲಿ ಪುತ್ತೂರು ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಪರಸ್ಪರ ಮುಖಾಮುಖಿಯಾದ ಪ್ರಸಂಗ ನಡೆದಿದೆ.
ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಕೈ ಮುಗಿದು ನಮಸ್ಕರಿಸಿದ ಪುತ್ತಿಲ ಪ್ರಭಾಕರ್ ಭಟ್ ಅವರ ಕಾಲಿಗೆರಗಿ ಆಶೀರ್ವಾದ ಪಡೆದು ಕುತೂಹಲ ಮೂಡಿಸಿದ್ದಾರೆ.