Home Articles posted by v4team (Page 431)

ಪಡುಬಿದ್ರಿ : ಗಾಳಿಗೆ ಟ್ರಾನ್ಸ್ ಫಾರ್ಮರ್ ಧರೆಗೆ

ರಾತ್ರಿ ಬೀಸಿದ ಬಾರೀ ಮಳೆಗಾಳಿಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರೆಗುರುಳಿ ಮೆಸ್ಕಾಂಗೆ ಸುಮಾರು ಐದು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಎರ್ಮಾಳು ಪೊಂದಾಡು ಆಲಡೆ ಬೆಟ್ಟು ಎಂಬಲ್ಲಿ ರಾತ್ರಿ ಹೊತ್ತು ಈ ಘಟನೆ ನಡೆದಿದ್ದು, ಹಗಲು ಹೊತ್ತು ನಡೆದಿದ್ದರೆ ಬಾರೀ ಅನಾಹುತ ನಡೆಯುವ ಸಾಧ್ಯತೆ ಇತ್ತು ಎನ್ನುತ್ತಾರೆ ಸ್ಥಳೀಯರು, ವಿದ್ಯುತ್

ಅವ್ಯವಸ್ಥೆಯ ಆಗರವಾದ ಮೂಡುಬಿದರೆ ಕರಿಂಜೆಯ ಘನತ್ಯಾಜ್ಯ ವಿಲೇವಾರಿ ಘಟಕ

ಎಲ್ಲೆಲ್ಲೂ ಪ್ಲಾಸ್ಟಿಕ್, ಕೊಳೆತ ತ್ಯಾಜ್ಯಗಳ ರಾಶಿ, ವಿಲೇವಾರಿ ಆಗದೆ ಉಳಿದಿರುವ ಗೊಬ್ಬರದ ರಾಶಿ, ಸಿಯಾಳದ ಚಿಪ್ಪುಗಳ ರಾಶಿ, ಕೊಳೆತ ಪದಾರ್ಥಗಳಿಂದ ಹರಿಯುತ್ತಿರುವ ನೀರು, ಅದರ ಮೇಲಿನಿಂದ ಗುಂಯ್ ಎಂದು ಹಾರುತ್ತಾ ಡೆಂಗ್ಯೂ, ಮಲೇರಿಯಾ ರೋಗಕ್ಕೆ ಆಹ್ವಾನ ನೀಡುತ್ತಿರುವ ಸೊಳ್ಳೆಗಳು. ಇಂತಹ ಸನ್ನಿವೇಶ ಕಂಡು ಬಂದದ್ದು ಮೂಡುಬಿದಿರೆ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ. ಪರಿಸರದ ಜನರ ವಿರೋಧದ ಮಧ್ಯೆ 2013 ರಲ್ಲಿ ದಿ. ರತ್ನಾಕರ ದೇವಾಡಿಗ ಅವರು ಪುರಸಭಾ

ಉಳ್ಳಾಲ: ಪೋಕ್ಸೊ ಕಾಯಿದೆಯಡಿ ದಾಖಲಾದ ಪ್ರಕರಣದ ಆರೋಪಿ ಪರಾರಿ

ಉಳ್ಳಾಲ: ಅಪ್ರಾಪ್ತ ವಿದ್ಯಾರ್ಥಿನಿ ವಿರುದ್ಧ ಕಿರುಕುಳ ನೀಡಿದ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.ಅಂಬ್ಲಮೊಗರು ನಿವಾಸಿ ಇಕ್ಬಾಲ್ ಎಂಬಾತ ನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಸ್ಸಿಗಾಗಿ ಕಾಯುವ ಸಂದರ್ಭ ಮಾತನಾಡಿಸಲು ಯತ್ನಿಸಿದ್ದ ರಿಕ್ಷಾ ಚಾಲಕ ವಿದ್ಯಾರ್ಥಿನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದನು. ಜೂನ್ ತಿಂಗಳಲ್ಲಿ ನಡೆದ ಘಟನೆ ಕುರಿತು ಅಪ್ರಾಪ್ತೆ ಹೆತ್ತವರಲ್ಲಿ

ಉಡುಪಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಇಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ “ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ” ಸಭೆ ನಡೆಸಿದರು.   ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯ ಬಳಿಯಿಂದ ಹೊರಟ ಉಡುಪಿ ಸಿಟಿ ಬಸ್ ನಿಲ್ದಾಣದ ಮೂಲಕ ಬನ್ನಂಜೆ ಎಸ್.ಪಿ. ಕಛೇರಿಯ ಬಳಿ ಸಮಾಗಮಗೊಂಡಿತು. ನಂತರ ಪ್ರತಿಭಟನಾ ಸಭೆ

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಲಾರಿ

ಉಳ್ಳಾಲ: ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದ್ದು, ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ ತಿರುವಿನಲ್ಲಿ  ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ. ಲಾರಿಯಲ್ಲಿ ಓವರ್ ಲೋಡ್ ಇದ್ದ

ಭದ್ರಾವತಿಯ ಯುವಕನ ಪತ್ತೆಗಾಗಿ ತೀವ್ರ ಹುಡುಕಾಟ: ಡ್ರೋನ್ ಕ್ಯಾಮರಾದಿಂದ ಶೋಧ ಕಾರ್ಯ

ಬೈಂದೂರು ಸಮೀಪದ ಕೊಲ್ಲೂರಿನ ಅರಶಿನಗುಂಡಿ ಎಂಬಲ್ಲಿ ಜಲಪಾತದ ಹರಿಯುವ ನೀರಿನಲ್ಲಿ ನಾಪತ್ತೆಯಾದ ಭದ್ರಾವತಿಯ ಯುವಕನ ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಮೂಲಕ ಶೋಧ ಕಾರ್ಯ ನಡೆಯುತ್ತಿದೆ.   ಭಾನುವಾರ ಮಧ್ಯಾಹ್ನ ಕೊಲ್ಲೂರು ಸಮೀಪದ ಅರಸಿನಗುಂಡಿ ಜಲಪಾತದಲ್ಲಿ ಕಾಲುಜಾರಿ ಬಿದ್ದು ನಾಪತ್ತೆಯಾಗಿರುವ ಭದ್ರಾವತಿ ತಾಲ್ಲೂಕಿನ ಸುಣ್ಣದ ಹಳ್ಳಿಯ ಕೆ.ಎಚ್.ನಗರದ ಯುವ ಉದ್ಯಮಿ ಶರತ್ ಕುಮಾರ್ ಅವರ ಪತ್ತೆ ಕಾರ್ಯ ನಿನ್ನ ಮತ್ತು ಇವತ್ತು ಡ್ರೋನ್ ಕ್ಯಾಮೆರಾದ ಮೂಲಕ ಹುಡುಕಾಟ ಬರದಿಂದ

ಪಡುಬಿದ್ರಿ: ಶಾಲಾ ಸೆಕ್ಯೂರಿಟಿ ಗಾರ್ಡ್ ಬಾವಿಗೆ ಹಾರಿ ಆತ್ಮಹತ್ಯೆ

ಎರ್ಮಾಳು ಬಡಾ ದೇವಸ್ಥಾನ ಬಳಿಯ ನಿವಾಸಿ ಅದಮಾರು ವಿದ್ಯಾಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಾಹಿಸುತ್ತಿದ್ದ ವ್ಯಕ್ತಿ ಇಂದು ಮುಂಜಾನೆ ಕುಂಜೂರಿನ ಮನೆಯೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಆತ್ಮಹತ್ಯೆ ಮಾಡಿಕೊಂಡವರು ನವೀನ್ ಬಂಗೇರ (53), ಅವಿವಾಹಿತರಾಗಿದ್ದ ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು ಕಳೆದ ಸುಮಾರು ಮೂರು ವರ್ಷಗಳಿಂದ ಅದಮಾರು ವಿದ್ಯಾಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಾಹಿಸುತ್ತಿದ್ದು,

V4 ನ್ಯೂಸ್ ಸನ್ ಪ್ರೀಮಿಯಮ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 4: ಸಂತ ಆಲೋಶಿಯಸ್ ಕಾಲೇಜಿನಲ್ಲಿ ಚಾಲನೆ

V4 ನ್ಯೂಸ್ ಸನ್ ಪ್ರೀಮಿಯಮ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 4 ಗೆ ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಸಂಭ್ರಮದ ಚಾಲನೆ ದೊರೆತಿದೆ.    V4 ನ್ಯೂಸ್ ಮತ್ತು ಮಂಗಳೂರಿನ ಸಂತ ಆಲೋಸಿಯಸ್ ಕಾಲೇಜಿನ ಪತ್ತಿಕೋಧ್ಯಮ, ಸಮೂಹ ಸಂವಹನ ಹಾಗೂ ದೃಶ್ಯ ಸಂವಹನ ವಿಭಾಗದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪತ್ರಿಕಾ ಕ್ಷೇತ್ರದ ಸಾಧಕರಾದ ಮನೋಹರ್ ಪ್ರಸಾದ್, ಕ್ರೀಡಾಕ್ಷೇತ್ರದ ಸಾಧಕರಾದ ದಿನೇಶ್ ಕುಂದರ್, ವ್ಯಂಗಚಿತ್ರ ಸಾಧಕರಾದ

ಪುತ್ತೂರು : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

ಪುತ್ತೂರು: ನಗರದ ಪಾಂಗ್ಲಾಯಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊದೆಯೊಂದರ ಬಳಿ ಈ ಅಪರಿಚಿತ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಮಾಹಿತ ಆಧಾರದಲ್ಲಿ ಸ್ಥಳಕ್ಕೆ ಬಂದ ಪೊಲೀಸ್ರು ಪರಶೀಲನೆ ನಡೆಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತದೇಹವನ್ನು ಸಾಗಿಸುವಲ್ಲಿ ನಗರದ ಆದರ್ಶ ಆಸ್ಪತ್ರೆ ಅಂಬ್ಯುಲೆನ್ಸ್ ಚಾಲಕ ದಯಾನಂದ್ ಮತ್ತು ಸ್ಥಳೀಯರು ಸಹಕರಿಸಿದ್ದಾರೆ. ಮೃತದೇಹ ಯಾರದೆನ್ನುವ ಬಗ್ಗೆ

ಬೈಂದೂರು : ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿತ, ಶಾಲೆಗೆ ರಜೆಯಿದ್ದ ಕಾರಣ ತಪ್ಪಿದ ದೊಡ್ಡ ದುರಂತ

ಬೈಂದೂರು ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಡುವರಿ ಗ್ರಾ.ಪಂ ವ್ಯಾಪ್ತಿಯ ತಾರಾಪತಿ ಶಾಲೆಯ ಮೇಲ್ಚಾವಣೆ ಕುಸಿದು ಬಿದ್ದಿದೆ. ಶಾಲೆಗೆ ರಜೆ ಇದ್ದ ಕಾರಣದಿಂದ ಪ್ರಾಣಹಾನಿ ಸಂಭವಿಸಿಲ್ಲ. ಕನ್ನಡ ಮಾಧ್ಯಮ ಶಾಲೆಯ ಅಭಿವೃದ್ದಿಗೆ ಸರಕಾರ ಹಲವು ಯೋಜನೆಗಳನ್ನು ನೀಡುವ ಭರವಸೆ ನೀಡಿದರೂ ಕೂಡ ಅಧಿಕಾರಿಗಳ ನಿರ್ಲಕ್ಷತನದಿಂದ ಇಂತಹ ಘಟನೆಗಳು ನಡೆಯುತ್ತಿರುವುದು ಪಾಲಕರಿಗೆ ಆತಂಕ ಉಂಟು ಮಾಡುತ್ತಿದೆ. ಕುಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ