Home Articles posted by v4team (Page 429)

ಮೂಡುಬಿದರೆ: ಮಣಿಪುರ ಘಟನೆಯನ್ನು ಖಂಡಿಸಿ ಪ್ರತಿಭಟನೆ

  ಮೂಡುಬಿದಿರೆ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಯನ್ನು  ಖಂಡಿಸಿ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ಹಾಗೂ ಸೌಹಾರ್ದ ಫ್ರೆಂಡ್ಸ್ ಶಿರ್ತಾಡಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಶಿರ್ತಾಡಿ ಬಸ್ ಸ್ಟ್ಯಾಂಡ್ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.  ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ರಾಜಕೀಯ ಸಂಚಾಲಕ ರಾಜೇಶ್ ಕಡಲಕೆರೆ ದಿಕ್ಸೂಚಿ ಭಾಷಣ

ಉಳ್ಳಾಲ : ನೇತ್ರಾವತಿ ನದಿತಟದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಉಳ್ಳಾಲ: ನೇತ್ರಾವತಿ ನದಿತಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಹಾಸನ ಬೇಳೂರು ನಿವಾಸಿ ಮೊಹಮ್ಮದ್ ಝಾಕಿರ್ (50) ಎಂದು ಉಳ್ಳಾಲ ಠಾಣೆಗೆ ಆಗಮಿಸಿದ ಮನೆಮಂದಿ ತಿಳಿಸಿದ್ದಾರೆ. ಕೆಲ ತಿಂಗಳುಗಳಿಂದ ಅಸೌಖ್ಯಕ್ಕೀಡಾಗಿದ್ದ ಝಾಕೀರ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಿದ್ದರು. ಎರಡು ದಿನಗಳ ಹಿಂದೆಯೂ ಊರುಬಿಟ್ಟು ಔಷಧಿಗೆಂದು ಬಂದಿದ್ದವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಮಂದಿ ಎಲ್ಲೆಡೆ ಎರಡು ದಿನಗಳ ಕಾಲ

ಜಲಪಾತದಲ್ಲಿ ಕೊಚ್ಚಿಹೋಗಿದ್ದ ಶರತ್ ಮೃತದೇಹ ಪತ್ತೆ

ಕೊಲ್ಲೂರಿನ ಅರಶಿನ ಗುಂಡಿ ಜಲಪಾತ ವೀಕ್ಷಣೆ ಮಾಡಲು ಹೋಗಿ ಜಾರಿ ಬಿದ್ದು ನೀರುಪಾಲಾಗಿದ್ದ ಭದ್ರಾವತಿ ಮೂಲದ ಯುವಕ ಶರತ್ ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.   ಜುಲೈ 23ರಂದು ಕೊಲ್ಲೂರು ಸಮೀಪದ ಅರಣ್ಯ ಪ್ರದೇಶದಲ್ಲಿರುವ ಅರಶಿನ ಗುಂಡಿ ಜಲಪಾತ ವೀಕ್ಷಿಸಲು ೨೩ ವರ್ಷದ ಶರತ್ ಕುಮಾರ್ ಸ್ನೇಹಿತನೊಂದಿಗೆ ಹೋಗಿದ್ದರು. ಜಲಪಾತದ ಪಕ್ಕದ ಬಂಡೆ ಕಲ್ಲಿನ ಮೇಲೆ ನಿಂತಿದ್ದು ಅವರು ಜಾರಿ ನೀರಿಗೆ ಬಿದ್ದಿದ್ದರು.   ಶರತ್ ಹುಡುಕಾಟಕ್ಕೆ ಹಲವು ತಂಡಗಳು ವಾರಗಳ ಕಾಲ ಶ್ರಮ

  ಸಿಎಂ ಸಿದ್ದರಾಮಯ್ಯ ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 1ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.   ಆಗಸ್ಟ್ 1ರಂದು ಬೆಳಿಗ್ಗೆ 11ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಉಡುಪಿಗೆ ತೆರಳುವರು. 12.30ಕ್ಕೆ ಉಡುಪಿ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಸಂಜೆ 4.15ಕ್ಕೆ ದ.ಕ. ಜಿಲ್ಲೆಯ ಪ್ರಗತಿ ಪರಿಶೀಲನೆಯನ್ನು ದ.ಕ.ಜಿಪಂ ಸಭಾಂಗಣದಲ್ಲಿ ನಡೆಸಲಿದ್ದಾರೆ. ರಾತ್ರಿ 9.50ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ

ವಿಟ್ಲ: ಆಟೋ ರಿಕ್ಷಾಕ್ಕೆ ಢಿಕ್ಕಿಯಾದ ಕಾರು: ರಿಕ್ಷಾ ಚಾಲಕನಿಗೆ ಗಾಯ

ಆಟೋ ರಿಕ್ಷಾವೊಂದಕ್ಕೆ ಹಿಂದಿನಿಂದ ಬಂದ ಕಾರು ಢಿಕ್ಕಿಯಾದ ಘಟನೆ ವಿಟ್ಲದ ಸೂರಿಕುಮೇರು ಜಂಕ್ಷನ್‌ನಲ್ಲಿ ನಡೆದಿದೆ. ಆಟೋಲ ಚಾಲಕ ಸೂರಿಕುಮೇರ್ ನಿವಾಸಿ ಹನೀಪ್ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ರಿಕ್ಷಾ ಸೂರಿಕುಮೇರ್‌ನಿಂದ ಮಾಣಿ ಕಡೆಗೆ ತೆರಳುತ್ತಿತ್ತು. ಮಂಗಳೂರು ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕಾರು ರಿಕ್ಷಾಕ್ಕೆ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾ ಮತ್ತು ಕಾರು ನಜ್ಜುಗುಜ್ಜಾಗಿದೆ.  

ಮಂಜೇಶ್ವರದಲ್ಲಿ ತಿಮಿಂಗಲದ ಅಸ್ತಿಪಂಜರ ಪತ್ತೆ

ಮಂಜೇಶ್ವರದಲ್ಲಿ 16 ವರ್ಷ ಹಳೆಯದಾಗಿರುವ ತಿಮಿಂಗಿಲ ಮೀನಿನ ಅಸ್ತಿಪಂಜರವನ್ನು ಕಾಸರಗೋಡು ಡಿ ಎಫ್ ಒ ಪತ್ತೆ ಹಚ್ಚಿದೆ. ಕುಂಜತ್ತೂರು ಸಮೀಪದ ಕಣ್ಣತೀರ್ಥ ಕಡಪ್ಪುರದಲ್ಲಿ ಕರ್ನಾಟಕ ನಿವಾಸಿಯ ಮಾಲಕತ್ವದಲ್ಲಿರುವ ಸುಮಾರು ಹದಿನೈದು ಎಕ್ರೆಯ ಸ್ಥಳದಲ್ಲಿರುವ ಶೆಡ್ಡೊಂದರಲ್ಲಿ ತಿಮಿಂಗಿಲದ ಅಸ್ತಿಪಂಜರ ಪತ್ತೆಯಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಮಾಲಿಕರನ್ನು ಸಂಪರ್ಕಿಸಿದಾಗ 2007 ರಲ್ಲಿ ಕಣ್ಣತೀರ್ಥ ಕಡಪ್ಪುರದಲ್ಲಿ ತೀರಕ್ಕೆ ಬಂದ ಸತ್ತ

ಶಾಸಕ ಯಶ್‍ಪಾಲ್ ಸುವರ್ಣ ಹೇಳಿಕೆಗೆ ಕಾಂಗ್ರೆಸ್‍ನಿಂದ ಖಂಡನೆ

ಬಿಜೆಪಿ ಪ್ರತಿಭಟನೆ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗೃಹ ಸಚಿವರ ಕೌಟುಂಬಿಕ ವಿಚಾರಗಳ ಬಗ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಪ್ರಸಾದ ರಾಜ್ ಕಾಂಚನ್ ಅವರು, ಕಾಲೇಜಿನಲ್ಲಿ ನಡೆದಿರುವ ವಿಡಿಯೊ ಪ್ರಕರಣದಲ್ಲಿ ಪೆÇಲೀಸರು ನಿಷ್ಪಕ್ಷಪಾತ ತನಿಖೆಯನ್ನ ನಡೆಸಿದ್ದಾರೆ. ಕಾಲೇಜಿನ ಅಡಳಿತ ಮಂಡಳಿ ಕೂಡ ಪೊಲೀಸ್ರ ತನಿಖೆಗಳಿಗೆ ಸಹಕರಿಸಿದ್ದಾರೆ. ಅದರೂ ಕೂಡ

ಮಣಿಪುರ ಜನಾಂಗೀಯ ಸಂಘರ್ಷ ನಿಯಂತ್ರಿಸಲು ಕೇಂದ್ರ ಸರಕಾರ ವಿಫಲ : ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಹೇಳಿಕೆ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಮತ್ತು ಒಂದು ನಿರ್ದಿಷ್ಟ ಪಂಗಡದ ಮಹಿಳೆಯರ ಮೇಲಿನ ಅಮಾನವೀಯ ಲೈಂಗಿಕ ದೌರ್ಜನ್ಯ ವಿಶ್ವದ ಎದುರು ದೇಶ ತಲೆ ತಗ್ಗಿಸುವಂತೆ ಮಾಡಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅಲ್ಲಿನ ರಾಜ್ಯ ಸರಕಾರದ ಬೇಜವಾಬ್ಧಾರಿ ನಡೆಯೇ ನೇರ ಕಾರಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಹೇಳಿದ್ದಾರೆ. ಅವರು ಕಾರ್ಕಳದ ಕೇಂದ್ರ ಬಸ್ ನಿಲ್ದಾಣದ ಬಳಿ, ಮಣಿಪುರದಲ್ಲಿ ಮಹಿಳೆಯರ ಮೇಲೆ

ಮಣಿಪುರದ ಹಿಂಸಾಚಾರ ಖಂಡಿಸಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ರಹ್ಮಾವರದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು, ಕೇಂದ್ರದ ಬಿಜೆಪಿ ಸರಕಾರ ಬೇಟಿ ಬಚಾವೋ ಎಂದು ಹೇಳಿ ಅಧಿಕಾರಕ್ಕೆ ಬಂದು, ಇದೀಗ ಬೇಟಿಕೋ ಮಾರ್‍ಡಾಲೋ ಮಾಡುತ್ತಿದೆ. ಬಿಜೆಪಿಯವರು ಮುಂದಿನ ಲೋಕಸಭಾ ಚುನಾವಣೆಯ ಸಿದ್ದತೆಗೆ ಮಣಿಪುರದಲ್ಲಿ ಮತ ರಾಜಕೀಯ

ಮೂಡುಬಿದರೆ : 60ನೇ ಶ್ರೀ ಸಾರ್ವಜನಿಕ ಗಣೇಶೋತ್ಸವ : ಡಾ.ಎಂ. ಮೋಹನ್ ಅಳ್ವಾರಿಂದ ಲೋಗೋ ಅನಾವರಣ

ಮೂಡುಬಿದಿರೆ: 1964ರಲ್ಲಿ ಆರಂಭಗೊಂಡಿರುವ ಇಲ್ಲಿನ ಶ್ರೀ ಸಾರ್ವಜನಿಕ ಗಣೇಶೋತ್ಸವವು 60ನೇ ವರ್ಷದ ಸಂಭ್ರಮದಲ್ಲಿದ್ದು ಅದಕ್ಕಾಗಿ ಈ ವರ್ಷ ಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಶನಿವಾರ ಲೋಗೋವನ್ನು ಅನಾವರಣಗೊಳಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಲೋಗೋ ಅನಾವರಣಗೊಳಿಸಿ ಮಾತನಾಡಿ ಮೂಡುಬಿದಿರೆಯು ಹಲವು ವಿಚಾರಗಳಲ್ಲಿ ಸಾಧನೆ ಮಾಡಿದೆ. ಇಲ್ಲಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಅದರದ್ದೇ ಆದ