Home Articles posted by v4team (Page 464)

Bantwala : ನಾಗರಹಾವಿನ ಹೊಟ್ಟೆಗೆ ಸೇರಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬ – ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು

ನಾಗರಹಾವಿನ ಹೊಟ್ಟೆ ಸೇರಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದು 15 ದಿನಗಳ ಆರೈಕೆಯ ಬಳಿಕ ಯಶಸ್ವಿಯಾಗಿ ಅರಣ್ಯ ಬಿಡಲಾಗಿದೆ. ಉರಗ ತಜ್ಞ ಸ್ನೇಕ್ ಕಿರಣ್ ಹಾಗೂ ಪಶುವೈದ್ಯ ಡಾ. ಯಶಸ್ವಿ ನಾರಾವಿ ಹಾಗೂ ಅರಣ್ಯ ಇಲಾಖೆಯ ಸಕಾಲಿಕ ಕಾರ್ಯಚರಣೆಯಿಂದ ಪಾಣ ಸಂಕಟದಲ್ಲಿ ನರಳುತ್ತಿದ್ದ ನಾಗರ ಹಾವು ಬದುಕುಳಿದಿದೆ. ಕಾವಳಪಡೂರು

ಬ್ರಹ್ಮಾವರ : ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮ

ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್, ಬ್ರಹ್ಮಾವರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮ ಬ್ರಹ್ಮಾವರ ಕ್ರಾಸ್‍ಲ್ಯಾಂಡ್ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಾಜಶೇಖರ ವಂದಲಿ ಮಾತನಾಡಿ, ನಾನಾ ಮಾದಕ ವಸ್ತುಗಳ ಜಾಲಕ್ಕೆ ಯುವಜನರನ್ನೆ ಟಾರ್ಗೆಟ್ ಮಾಡಲಾಗುತ್ತಿರುವ ಕಾರಣ ಯುವಸಮೂಹ ಜಾಗೃತರಾಗ ಬೇಕಾಗಿದೆ. ಮೋಜು

ಮೂಡುಬಿದಿರೆ : ಮುರುಕು ಮನೆಯಲ್ಲಿ ಜೀವಿಸುತ್ತಿರುವ ಅಸಹಾಯಕ ಕುಟುಂಬಕ್ಕೆ ಬೇಕಾಗಿದೆ ನೆರವು

ಮೂಡುಬಿದಿರೆ: ಮಳೆಗಾಲ ಬಂತೆಂದರೆ ಸಾಕು “ಉಳ್ಳವರು” ತಮಗೆ ಮನೆಗೆ ಬೇಕಾದ ವ್ಯವಸ್ಥೆಯನ್ನು ಬೇಗನೇ ಮಾಡಿ ಮುಗಿಸುತ್ತಾರೆ. ಆದರೆ ಒಂದು ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿಯಲ್ಲಿರುವ ಬಡವರು ಮಾತ್ರ ಹೊಟ್ಟೆ ತುಂಬಿಸುವುದು ಹೇಗೆ ಎಂಬುದೇ ಚಿಂತೆ ಇರುವಾಗ ಮನೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಇರುವೈಲಿನಲ್ಲೊಂದು ಅಸಹಾಯಕ ಕುಟುಂಬವು ಇಂದೋ, ನಾಳೆಯೋ ಬಿದ್ದು ಹೋಗಲಿರುವ ಮನೆಯಲ್ಲಿ ಜೀವನ

‘ಎಕೊ-ವಿಶನ್ 2023’ ಅಂತರ್ ವಿಭಾಗೀಯ ಹಾಗೂ ಅಂತರ್ ತರಗತಿ ಸ್ಪರ್ಧೆ ಉದ್ಘಾಟನೆ

ಉಜಿರೆ, ಜೂ.16: ಯಾವುದೇ ಸ್ಪರ್ಧೆಯಲ್ಲಿ ಸೋಲು- ಗೆಲುವಿಗಿಂತಲೂ ಭಾಗವಹಿಸುವಿಕೆ ಮುಖ್ಯವಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ. ವಸತಿ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಡಾ. ಟಿ. ಕೃಷ್ಣಮೂರ್ತಿ ಹೇಳಿದರು. ಇಲ್ಲಿನ ಶ್ರೀ ಧ.ಮಂ. ಕಾಲೇಜಿನಲ್ಲಿ ಜೂ.15ರಂದು ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ಆಯೋಜಿಸಲಾದ ‘ಎಕೊ-ವಿಶನ್ 2023’ ಅಂತರ್ ವಿಭಾಗೀಯ ಹಾಗೂ ಅಂತರ್ ತರಗತಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. “ಎಕೊ-ವಿಶನ್ ನಂತಹ ಸ್ಪರ್ಧೆಗಳು

ಸಹಾಯಕ ಪ್ರಾಧ್ಯಾಪಕಿ ಗೀತಾ ಏ.ಜೆಗೆ ಪಿಎಚ್ ಡಿ ಪದವಿ

ಉಜಿರೆಯ ಎಸ್ ಡಿ ಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗೀತಾಏ.ಜೆ.ಇವರು ಮಂಡಿಸಿದ  “ಇನ್ಸ್ಟಿಟ್ಯೂಷನಲ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಆ್ಯಸ್ ಎ ಪಿಆರ್ ಟೂಲ್ ಇನ್ ಹೈಯರ್ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್: ಎ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪುವಿಶ್ವವಿದ್ಯಾಲಯ ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿದೆ. ಗೀತಾ ಏ.ಜೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯಬಿಳಿನೆಲೆ

 ಬಲಿಷ್ಠ ಸಮಾಜ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರಮುಖ್ಯ : ಶ್ರೀಮತಿ ಸೋನಿಯಾ ಯಶೋವರ್ಮ

ಉಜಿರೆ :ಬಲಿಷ್ಠ ಸಮಾಜದ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಉಜಿರೆ ಧೀಮತಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಲ್ಲಿ ಧೀಮತಿ ಮಹಿಳಾಸಮಾಜದ ಗೌರವಾಧ್ಯಕ್ಷರಾದ ಸೋನಿಯಾ ಯಶೋವರ್ಮ ಅಭಿಪ್ರಾಯಪಟ್ಟರು. ಎಲ್ಲರೂ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಸಮುದಾಯವನ್ನು ಬಲಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು  ಸಂಘದ ನಿಕಟಪೂರ್ವ ಅಧ್ಯಕ್ಷರಾದ ರೇಖಾ .ಡಿ.ಚೌಟ ಸಂಘದ ಕಾರ್ಯಚಟುವಟಿಕೆಗಳಿಗೆ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಇ-ಲಿಟ್ ಫೆಸ್ಟ್

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿರುವ ವಿಮರ್ಶಕರ ಪೈಕಿ ಹೆಚ್ಚಿನವರು ಇಂಗ್ಲಿಷ್ ಭಾಷೆಯಿಂದ ಬಂದವರು, ಇವರೆಲ್ಲಾ ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಎಸ್. ಡಿ.ಎಂ. ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕÀ ಡಾ. ರಾಜಶೇಖರ ಹಳೆಮನೆ ಅಭಿಪ್ರಾಯ ವ್ಯಕ್ತಪಡಿಸಿದರು. ಉಜಿರೆ ಶ್ರೀ. ಧ. ಮಂ. ಸ್ನಾತಕೊತ್ತರ ಕೇಂದ್ರದ ಇಂಗ್ಲಿಷ್ ವಿಭಾಗದಿಂದ ಆಯೋಜಿಸಿದ್ದ ಇ-ಲಿಟ್ ಫೆಸ್ಟ್‍ನ ಮುಖ್ಯ ಅತಿಥಿಗಳಾಗಿ ಅವರು

ಎಸ್.ಡಿ.ಎಂ ವಿಜ್ಞಾನ ವಿದ್ಯಾರ್ಥಿಗಳು ಐಡಿಇಎ ಪ್ರಯೋಗಾಲಯಕ್ಕೆ ಭೇಟಿ

ಉಜಿರೆ: ಶ್ರೀ ಧ.ಮಂ. ಕಾಲೇಜಿನ ವಿಜ್ಞಾನ ವಿಭಾಗದ ಇಪ್ಪತ್ತಾರು ವಿದ್ಯಾರ್ಥಿಗಳು ವಾಮಂಜೂರು ಸೈಂಟ್ ಜೋಸೆಫ್ ತಾಂತ್ರಿಕ ಕಾಲೇಜಿನ ಐಡಿಇಎ ಪ್ರಯೋಗಾಲಯಕ್ಕೆ ಇತ್ತೀಚಿಗೆ ಭೇಟಿನೀಡಿದರು. ವಿದ್ಯಾರ್ಥಿಗಳಿಗೆ 3ಡಿ ಪ್ರಿಂಟಿಂಗ್, ಲೇಝರ್ ಡಿಸೈನ್ ಪ್ರಿಂಟಿಂಗ್, ಪಿಸಿಬಿ ಪ್ರಿಂಟಿಂಗ್, ವುಡ್ ಡಿಸೈನ್ ಪ್ರಿಂಟಿಂಗ್ ಮುಂತಾದ ವಿಷಯಗಳ ಬಗ್ಗೆ ವಿವರಣೆ ನೀಡಲಾಯಿತು. ಸ್ವತಃ ವಿದ್ಯಾರ್ಥಿಗಳೇ ಪ್ರಯೋಗಗಳನ್ನು ಮಾಡುವ ಮೂಲಕ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರು. ಇಂತಹ

‘ಸ್ವಯಂ ಅಧ್ಯಯನದಿಂದ ಜೀವನದಲ್ಲಿ ಯಶಸ್ಸು’

ಉಜಿರೆ: ವಿದ್ಯಾರ್ಥಿಗಳು ಗುರು ಕಲಿಸಿಕೊಟ್ಟದ್ದನಷ್ಟೇ ಕಲಿಯುವುದಕ್ಕೆ ಸೀಮಿತರಾಗದೆ, ಸ್ವಯಂ ಅಧ್ಯಯನವನ್ನು ನಡೆಸುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಎಸ್.ಕೆ.ಡಿ.ಆರ್.ಡಿ.ಪಿ.ಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್ ನುಡಿದರು.ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಧ. ಮಂ. ಕಾಲೇಜಿನ ಬಿ.ವೊಕ್ ವಿಭಾಗವು ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಎಜು ಕಲ್ಚರಲ್ ಫೆಸ್ಟ್ ಉದ್ಘಾಟಿಸಿ

ಜಲ್ಲಿಗುಡ್ಡೆ ಜಯನಗರದ ಹದಗೆಟ್ಟ ರಸ್ತೆಯ ಕೂಡಲೇ ಕಾಂಕ್ರಿಟೀಕರಣಕ್ಕೆ ಒತ್ತಾಯಿಸಿ ಮನವಿ

ಮಂಗಳೂರು ನಗರ ಹೊರವಲಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯಿಂದ ಜಯನಗರ ಪ್ರದೇಶಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಸ್ಥಳೀಯ ನಿವಾಸಿಗಳ ಸುಗಮ ಸಂಚಾರಕ್ಕೆ ಬಹಳ ಅಡಚಣೆಯುಂಟಾಗಿದೆ. ರಸ್ತೆಯುದ್ದಕ್ಕೂ ಇರುವ ಗುಂಡಿಗಳಿಗೆ ಮಣ್ಣು ಮತ್ತು ಜಲ್ಲಿ ಮಿಶ್ರಣ ಮಾಡಿದ ಪರಿಣಾಮ ರಸ್ತೆಯಲ್ಲೆಲ್ಲ ಕೆಸರುಮಯವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಉರುಳಿ ಬೀಳುವಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು