ಬಾಗೇಪಲ್ಲಿ : CPIM ರಾಜಕೀಯ ಸಮಾವೇಶ ಸಾಂಸ್ಕೃತಿಕ ಜಾಥಾ ಉಧ್ಘಾಟನೆ
ಆಗಸ್ಟ್ 28 ರಂದು ಬಾಗೇಪಲ್ಲಿಯಲ್ಲಿ ನಡೆಯಲಿರುವ CPIM ರಾಜ್ಯಮಟ್ಟದ ರಾಜಕೀಯ ಸಮಾವೇಶದ ಪೂರ್ವಭಾವಿಯಾಗಿ ಇಂದು ಭಾಗೇಪಲ್ಲಿಯಲ್ಲಿ ಸಾಂಸ್ಕೃತಿಕ ಜಾಥಾವನ್ನು ಉಧ್ಘಾಟಿಸಲಾಯಿತು.
ಜಾಥಾವನ್ನ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕವಿ, ಕಲಾವಿದರಾದ ಗೊಲ್ಲಳ್ಳಿ ಶಿವಪ್ರಸಾದ್, ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿಗಳು ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯರಾದ ಎಂ.ಪಿ.ಮುನಿವೆಂಕಟಪ್ಪ, ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿ ಮೊಹಮ್ಮದ್ ಅಕ್ರಂ, ಮುಖಂಡರಾದ ಡಾ.ಅನಿಲ್ ಕುಮಾರ್, ಮಂಜುನಾಥ್ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.