ಬನ್ನೇರುಘಟ್ಟ ಲಯನ್ಸ್ ಮಹಿಳೆಯರ 9 ಬಣ್ಣಗಳ ನವರಾತ್ರಿ ಸಂಭ್ರಮ – ದಾಸೋಹದ ಸೇವೆ

ಬೆಂಗಳೂರು : ಲಯನ್ಸ್ ಕ್ಲಬ್ ಆಫ್ ಬೆಂಗ್ಳೂರ್ ಗ್ರೇಟರ್ ಬನ್ನೇರುಘಟ್ಟ ಡಿಸ್ಟ್ರಿಕ್ಟ್ 317E ಮಹಿಳಾ ಸದಸ್ಯರು ನವರಾತ್ರಿ ಹಬ್ಬವನ್ನು ಬಹಳ ವಿಶಿಷ್ಟ ಮತ್ತು ಅರ್ಥಪೂರ್ಣವಾದ ರೀತಿಯಲ್ಲಿ ಆಚರಿಸಿದರು. ದೇವಿಯ ಒಂಬತ್ತು ಅವತಾರಗಳನ್ನು ಪ್ರತಿನಿಧಿಸುವ ಬಣ್ಣಗಳ ಮೂಲಕ ಲಯನ್ಸ್ ಸದಸ್ಯರು ನವರಾತ್ರಿ ಸಂಭ್ರಮವನ್ನು ಆಚರಿಸಿದರು.



ನಿರ್ಮಲ ಶ್ವೇತದಿಂದ ನಾಜೂಕಾದ ಗುಲಾಬಿ ಬಣ್ಣದವರೆಗೆ, ಪ್ರತಿಯೊಂದು ಛಾಯೆಯು ಶಕ್ತಿ, ದಯೆ, ಧೈರ್ಯ ಮತ್ತು ಜ್ಞಾನವನ್ನು ಪ್ರತಿಬಿಂಬಿಸಿತು .
ಈ ಬಣ್ಣಾಧಾರಿತ ಫೋಟೋಶೂಟ್ ಕೇವಲ ಹಬ್ಬದ ಝಲಕ್ ನೀಡುವುದಕ್ಕಲ್ಲ, ಒಬ್ಬರನ್ನೊಬ್ಬರು ಅರಿಯಲು, ಸಂಬಂಧಗಳನ್ನು ಗಾಢಗೊಳಿಸಲು, ಮತ್ತು ನಮ್ಮ ಸಂಸ್ಕೃತಿಯ ಮೂಲಗಳಿಗೆ ನಿಷ್ಠಾವಂತರಾಗಿರಲು ಕಾರಣವಾಯಿತು ಎಂದು ಲಯನ್ಸ್ ಚಾರ್ಟರ್ ಅಧ್ಯಕ್ಷೆ ರೇಣುಕಾ ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.


ದೇವಾಲಯದ ಹಿನ್ನೆಲೆ, ಕನಿಷ್ಠ ಅಲಂಕಾರ, ಮತ್ತು ವಿಂಟೇಜ್ ಥೀಮ್ ಮೂಲಕ ಈ ಫೋಟೋಶೂಟ್ ನಡೆಸಲಾಯಿತು.
ಇಲ್ಲಿನ ಫೋಟೋಗಳು ಕೇವಲ ಚಿತ್ರಗಳಲ್ಲ,ಅದು ನಮ್ಮ ಶಕ್ತಿ, ಸೌಂದರ್ಯ ಮತ್ತು ಒಗ್ಗಟ್ಟಿನ ಹಬ್ಬ!


ಈ ಫೋಟೋಶೂಟ್ ಕೇವಲ ಮೋಜಿಗೆ ಅಲ್ಲ ,
ಇದು ಮಹಿಳಾ ಸಬಲೀಕರಣದತ್ತ ಒಂದು ದೃಢ ಹೆಜ್ಜೆ ಎಂದು ಡಿಸೈನರ್ ಹಾಗೂ ಉದ್ಯಮಿ ಮತ್ತು ಸಮಾಜ ಸೇವಕಿಯಾಗಿರುವ ರೇಣುಕಾ ಪ್ರಕಾಶ್ ತಿಳಿಸಿದರು


ಲಯನಿಸಂನ ಆಶಯದಂತೆ ಹಬ್ಬವು ಸಂಭ್ರಮಕ್ಕೆ ಮಾತ್ರ ಮೀಸಲಾಗದೆ ದಾಸೋಹದ ಮೂಲಕ ಸಮಾಜ ಸೇವೆಯನ್ನೂ ಮಾಡಿದ ಸಂತೃಪ್ತ ಭಾವ ನಮ್ಮಲ್ಲಿ ಇದೆ ಎಂದು ರೇಣುಕಾ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.




ಇದು ಕೇವಲ ಒಂದು ಫೋಟೋ ಶೂಟ್ ಅಲ್ಲ,
ಇದು ಒಂದು ಘೋಷಣೆ!
ಒಗ್ಗಟ್ಟು, ಸಂಪ್ರದಾಯ, ಸೇವೆ ಮತ್ತು ಅಪ್ರತಿಮ ಶಕ್ತಿಯುಳ್ಳ ಮಹಿಳೆಯರ ಸಾಮರ್ಥ್ಯದ ಘೋಷಣೆ ಯಾಗಿದೆ ಇಂದು ರೇಣುಕಾ ಪ್ರಕಾಶ್ ಹೇಳಿದರು.
ಈ ಫೋಟೋಶೂಟ್ ನಲ್ಲಿ ಹಾಗೂ ದಾಸೋಹ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರೇಣುಕಾ ಪ್ರಕಾಶ್ ಅವರ ಜೊತೆಯಲ್ಲಿ ಲಯನ್ಸ್ ಸದಸ್ಯರಾದ ಹೇಮ ಪಲ್ಲವಿ, ಶಾಲಿನಿ .ಜೆ , ರಜನಿ ಗೌಡ, ದಕ್ಷ್ಯಾಯಿನಿ ಸುರೇಶ್ , ಪವಿತ್ರ, ರಾಣಿ ಶ್ರೀನಿವಾಸ್, ನವಿತಾ, ಗೀತಾ ರಾಜು ಪಾಲ್ಗೊಂಡರು.