ಕೆವಿಜಿ ಮಾತೃ ಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 76ನೇ ಗಣರಾಜ್ಯ ದಿನಾಚರಣೆ ಕಾರ್ಯಕ್ರಮ ಜನವರಿ 26 ಆದಿತ್ಯವಾರದಂದು ನೆರವೇರಿತು.ಅಕಾಡೆಮಿ ಆಪ್ ಲಿಬರಲ್ ಎಜುಕೇಷನ್ (ರಿ.) ಸುಳ್ಯದ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ದ್ವಜಾರೋಹಣ ನೆರವೇರಿಸಿದರು. ಗಣ್ಯರಿಗೆ ಕಾಲೇಜು ಎನ್.ಸಿ.ಸಿ ಘಟಕದಿಂದ ಗೌರವ ವಂದನೆ ನೀಡಲಾಯಿತು. ಈ ಸಂದರ್ಭದಲ್ಲಿ ನೆಹರೂ
ಬೈಂದೂರು: ಸರ್ಕಾರಿ ಶಾಲೆಗಳ ಬಿಸಿಯೂಟ ನೌಕರರಿಗೆ ಕನಿಷ್ಠ (3700)ಗೌರವ ಧನ ನೀಡುತ್ತಿದ್ದು,ರಜೆ ನೀಡುವುದಿಲ್ಲ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ವಿಶೇಷ ಗೌರವಧನ ಕೂಡ ನೀಡುವುದಿಲ್ಲ. ಹೀಗಾಗಿ ಬಿಸಿಯೂಟ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೈಂದೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಟನೆ ನಡೆಸಿದರು. ರಜಾ ದಿನದ ಕೆಲಸಕ್ಕೆ ವಿಶೇಷ ಗೌರವಧನ ನೀಡಬೇಕು. ಅನಿವಾರ್ಯ
ವಿಶ್ವ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ತಿಂಗಳ ಅಂಗವಾಗಿ ಕೆ.ಎಂ.ಸಿ. ಆಸ್ಪತ್ರೆಯು ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮವನ್ನು ಜನವರಿ 27 ರಿಂದ 31ರವರೆಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದೆ. ಈ ಶಿಬಿರವನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಆಂಕಾಲಜಿ ಕೇಂದ್ರವು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಇವರ
ಕಾಸರಗೋಡಿನ ಬದಿಯಡ್ಕ ನಿವಾಸಿ ಪ್ರಶಾಂತ್ ರೈ ಅವರು, ಲಿಂಪೋಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ಇದೀಗ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಪ್ರಶಾಂತ್ ರೈ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಇವರು ಹಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದವರಿಗೆ 35ರಿಂದ 40 ಲಕ್ಷ ಖರ್ಚು ತಗುಲಿದೆ. ಇನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದು, 70ರಿಂದ 75 ಲಕ್ಷ
ಪುತ್ತೂರು: ಎವಿಜಿ ಅಸೋಸಿಯೇಷನ್ ನ ಬೆಳ್ಳಿ ಹಬ್ಬದ ಪ್ರಯುಕ್ತ ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 19 ಆದಿತ್ಯವಾರದಂದು ತಾಲೂಕು ಮಟ್ಟದ ಚಿತ್ರೋತ್ಸವ ಸ್ಪರ್ಧೆಯು ನಡೆಯಿತು. ಸಮಾರೋಪ ಸಮಾರಂಭದ ಮೊದಲಿಗೆ ಒಂದು ಗಂಟೆಯ ಕಾಲಾವಧಿಯೊಂದಿಗೆ ವಿವಿಧ ಶಾಲೆಗಳಿಂದ ಪಾಲ್ಗೊಂಡಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರ 5 ವಿಭಾಗಗಳ ಚಿತ್ರರಚನಾ ಸ್ಪರ್ಧೆಯು ನಡೆಯಿತು. ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕದಿಂದ 10 ನೇ ತರಗತಿವರೆಗಿನ 175 ಮಂದಿ ವಿದ್ಯಾರ್ಥಿ
ಕಡಬ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸುವ ಹೈಯರ್ ಗ್ರೇಡ್ ಮತ್ತು ಲೋಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ ಬಂದಿರುತ್ತದೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅಂಜನಾ ಜೇಮ್ಸ್ 491 ಅಂಕ ಪಡೆದು ಕಡಬ ತಾಲೂಕಿಗೆ ಪ್ರಥಮ, ಲವ್ಯಶ್ರೀ 475 ಅಂಕ ಪಡೆದು ತಾಲೂಕಿಗೆ ದ್ವಿತೀಯ, ಶಿವಾನಿ ಡಿ ಎ 463
ಕಾರ್ಕಳದ ಅನಂತಶಯನ ರಸ್ತೆಯ ಧರ್ಮಶ್ರೀ ಜೆರಾಕ್ಸ್ ಬಳಿ ಇರುವ ಕಟ್ಟಡದ ಹತ್ತಿರ ಬೈದೆರ್ಲೆ ನೈಸರ್ಗಿಕ ಗಿಡಮೂಲಿಕಾ ಕೇಂದ್ರದ ಶುಭಾರಂಭವು ಜ.24ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಶುಭಕೋರುವಂತೆ ಶ್ರೀಮತಿ ಮತ್ತು ಶ್ರೀ ಸುಧಾಕರ್ ಎಂ. ಪೂಜಾರಿ ಹಾಗೂ ಮಕ್ಕಳು ರೆಂಜಾಳ ಕಾರ್ಕಳ ಅವರು ವಿನಂತಿಸಿಕೊಂಡಿದ್ದಾರೆ.
ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎಂ ಬಿ ಫೌಂಡೇಶನ್‌ನ ಎಂ.ಬಿ. ಸದಾಶಿವರವರ ಸಹಯೋಗದಲ್ಲಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ “ಅರೆಭಾಷೆ ಕಾಮಿಡಿ “(ಹಾಸ್ಯ) ಆಡಿಷನ್ ಕಾರ್ಯಕ್ರಮವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಫೆ.16ರಂದು ನಡೆಯಲಿದೆ ಈ ಬಗ್ಗೆ ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಕರ್ನಾಟಕ
ಮಂಗಳೂರು ಪ್ರೆಸ್ ಕ್ಲಬ್‌ನ 2024ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಐವರು ಹಿರಿಯ ಪತ್ರಕರ್ತರು ಆಯ್ಕೆಯಾಗಿದ್ದಾರೆ.ಮುಹಮ್ಮದ್ ಆರೀಫ್ ಪಡುಬಿದಿರೆ (ವಿಜಯ ಕರ್ನಾಟಕ), ಜಿತೇಂದ್ರ ಕುಂದೇಶ್ವರ (ವಿಶ್ವವಾಣಿ), ಭಾಸ್ಕರ ರೈ ಕಟ್ಟ ( ಸುದ್ದಿ ಬಿಡುಗಡೆ) , ರಘರಾಮ ನಾಯಕ್ (ಹೊಸದಿಗಂತ) ಹಾಗೂ ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ ( ಉದಯವಾಣಿ ) ಇವರು ಗೌರವ ಸನ್ಮಾನಕ್ಕೆ ಆಯ್ಕೆಯಾದವರು. ಗೌರವ ಪುರಸ್ಕಾರ 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ,
ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮುಂದಿನ ಅವಧಿಗೆ ದೇವಳದ ಮಾತೃ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಪಾರ್ವತಿ ಶೇಖರ್.ಬಿ.ಕೆ ಶಕ್ತಿನಗರ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷೆಯಾಗಿ ನಾಗವೇಣಿ ಮಾಧವ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಕಿಶೋರ್, ಜತೆ ಕಾರ್ಯದರ್ಶಿಯಾಗಿ ಮಮತಾ ದೇವದಾಸ್, ಕೋಶಾಧಿಕಾರಿಗಳಾಗಿ ಪುಷ್ಪ ಸುಂದರ್ ಹಾಗೂ ಭಾರತಿ.ವಿ, ಜತೆ ಕೋಶಾಧಿಕಾರಿಗಳಾಗಿ ಮೋಹಿನಿ ಮೋನಪ್ಪ ಹಾಗು ಸುಕನ್ಯ ಪ್ರಜ್ವಲ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ




























