Home Blog Left SidebarPage 141

ನಾಪತ್ತೆಯಾದ ಮೀನುಗಾರನನ್ನು ಹುಡುಕುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಖಂಡನೀಯ: ಶಾಸಕ ಗುರುರಾಜ್‌ ಗಂಟಿಹೊಳೆ

ಬೈಂದೂರು: ಇತ್ತೀಚಿಗೆ ಮೀನುಗಾರಿಕೆ ವೇಳೆ ನಾಪತ್ತೆಯಾಗಿರುವ ನಾರಾಯಣ ಮೋಗವೀರ ಅವರ ಕುಟುಂಬಕ್ಕೆ ಮೀನುಗಾರ ಸಂಕಷ್ಟ ಪರಿಹಾರ ನಿಧಿಯಡಿ ತಕ್ಷಣವೇ ಪರಿಹಾರ ಒದಗಿಸಬೇಕು ಹಾಗೂ ಅಧಿಕಾರಿಗಳು ಯಜಮಾನನನ್ನು ಕಳೆದುಕೊಂಡ ಆ ಕುಟುಂಬದ ನೋವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್‌ ಗಂಟಿಹೊಳೆ ಆಕ್ರೋಶ ಹೊರ ಹಾಕಿದ್ದಾರೆ.ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕ್ಷೇತ್ರದ

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನ ,
ಆಡಳಿತ ಮೊತ್ತೇಸರರಾಗಿ ಸುಂದರ್ ಕುಲಾಲ್ ಶಕ್ತಿನಗರ ಆಯ್ಕೆ

ಮಂಗಳೂರು : ಇತಿಹಾಸ ಪ್ರಸಿದ್ಧ ಇತ್ತೀಚಿಗಷ್ಟೇ ವೈಭವದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಂಡ ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನದ ಮುಂದಿನ ಅವಧಿಗೆ ಕ್ಷೇತ್ರದ ಆಡಳಿತ ಮೊತ್ತೇಸರರಾಗಿ ಕೆ ಸುಂದರ್ ಕುಲಾಲ್ ಶಕ್ತಿನಗರ ಆಯ್ಕೆಗೊಂಡಿದ್ದಾರೆ,ಪ್ರಧಾನ ಕಾರ್ಯದರ್ಶಿಯಾಗಿ ಗಿರಿಧರ್ ಜೆ ಮೂಲ್ಯ, ಕೋಶಾಧಿಕಾರಿಯಾಗಿ ದಯಾನಂದ್ ಪಿ ಎಸ್ ಕುತ್ತಾರ್ ಮತ್ತು ಮೊತ್ತೇಸರರಾಗಿ ಮೋಹನ್‌ದಾಸ್ ಅಳಪೆ, ರಾಜೇಶ್ ಕುಲಾಲ್ ಶಕ್ತಿನಗರ, ಸದಾನಂದ ಬಂಗೇರ ಕೆ ಮುಡಿಪು, ಆನಂದ ಪಿ ಉರ್ವ,

ಮಂಗಳೂರು: ರಾಜೀವ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯರಿಂದ ಶಂಕುಸ್ಥಾಪನೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಗಳೂರಿನಲ್ಲಿ ಇಂದು ರಾಜೀವ ಗಾಂಧಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಕ್ಕೆ ಶಂಕುಸ್ಥಾಪನ ನೆರವೇರಿಸಿದರು. ಸ್ಪೀಕರ್ ಯು.ಟಿ. ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವ ಶರಣಪ್ರಕಾಶ್ ಪಾಟೀಲ್, ಶಾಸಕ ಭರತ್ ಶೆಟ್ಟಿ ಉಪಸ್ಥಿತರಿದ್ದರು.

ಕಡಬ: ಮನೆಗೆ ನುಗ್ಗಿ ಕಳವು ಪ್ರಕರಣ: ಆರೋಪಿಯ ಬಂಧನ

ಕಡಬ ಠಾಣಾ ವ್ಯಾಪ್ತಿಯ ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ ಬಾಗಿಲು ಮುರಿದು ಒಳ‌ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿರುವ ಕಳ್ಳನನ್ನು ಪೋಲೀಸರು ಗುರುವಾರ ಕರ್ಮಾಯಿ ನಿವಾಸಿ ಸಿನು ಕುರಿಯನ್ ಎಂಬಾತನನ್ನು ಬಂಧಿಸಿದ್ದಾರೆ.ಕ್ಷಿಪ್ರ ಕಾರ್ಯಾಚನೆ ನಡೆಸಿರುವ ಕಡಬ ಪೊಲೀಸರು ಐದೇ ದಿನದಲ್ಲಿ ಕಳ್ಳನನ್ನು ಪತ್ತೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಕೆರ್ಮಯಿ ಚರ್ಚ್ ಸಮೀಪದ, ಅಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್ ಅವರು

ಕಡಬ: ನಿಯಂತ್ರಣ ತಪ್ಪಿ ಬೈಕ್ ಮೋರಿಗೆ ಢಿಕ್ಕೆ: ವಿದ್ಯಾರ್ಥಿ ಮೃತ್ಯು

ಕಡಬ: ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ. ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎಂದು ಗುರುತಿಸಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ

ಮಂಗಳೂರು: CFM ಕ್ರಿಕೆಟ್ ಕಾರ್ನಿವಲ್ 2025 : ಟ್ರೋಫಿ, ಜೆರ್ಸಿ ಅನಾವರಣ

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆ ಆಯೋಜಿಸಿರುವ 5ನೇ ವರ್ಷದ ಕ್ರಿಕೆಟ್ ಕಾರ್ನಿವಲ್ ಜನವರಿ 18 ಮತ್ತು 19ರಂದು ನಗರದ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ನಡೆಯಲಿದೆ.ಪಂದ್ಯಾಕೂಟದ ಟ್ರೋಫಿ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ಮಂಗಳವಾರ ಸಂಜೆ ನಗರದ ಫಿಝಾ ನೆಕ್ಸಸ್ ಮಾಲ್ ಆವರಣದಲ್ಲಿ ನೆರವೇರಿತು. ನಗರ ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಟ್ರೋಫಿ ಅನಾವರಣಗೊಳಿಸಿದರು. ಇದೇ ವೇಳೆ ಕ್ರಿಕೆಟ್ ಕಾರ್ನಿವಲ್

ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಕಛೇರಿ ಉದ್ಘಾಟನೆ

ಶ್ರೀ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಯಲಿರುವ ಬಹು ನಿರೀಕ್ಷಿತ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ಯ ಕಛೇರಿಯು ಮಣ್ಣಗುಡ್ಡೆಯ ಎಸ್.ಎಲ್ ಶೇಟ್ ಜುವೆಲ್ಲರ್ಸ್ & ಡೈಮಂಡ್ ಹೌಸ್ ಬಳಿ ಉದ್ಘಾಟನೆಗೊಂಡಿತು. ನಂತರ ಮಾತನಾಡಿದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಶ್ರೀ

ಕಡಬ ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ಜಾಗ ಗುರುತಿಸಲು ತಹಶಿಲ್ದಾರರಿಗೆ ಸಂಸದ ಕ್ಯಾ. ಚೌಟ ಸೂಚನೆ

ಕಡಬ ತಾಲೂಕಿನ ಸವಣೂರು, ಸುಬ್ರಮಣ್ಯ, ನೆಲ್ಯಾಡಿ ಮತ್ತು ಕಡಬದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವುದಕ್ಕೆ ಜಾಗ ಗುರುತಿಸುವಂತೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಪತ್ರ ಬಂದಿರುವ ಹಿನ್ನಲೆಯಲ್ಲಿ ಒಂದು ವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು ಕಡಬ ತಾಲೂಕು ತಹಶಿಲ್ದಾರರಿಗೆ ಸೂಚನೆ ನೀಡಿದ್ದಾರೆ. ಕಡಬ ತಾಲೂಕು ಕಚೇರಿಯಲ್ಲಿ ನಡೆದ ಸಾರ್ವಜನಿಕರ ಭೇಟಿ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ ರವರು, ಪ್ರಧಾನಮಂತ್ರಿ

ಹೃದಯಾಫಾತ ಸೂಚಕ ಕಿಣ್ವಗಳು

ಹೃದಯ ಎನ್ನುವುದು ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗವಾಗಿದ್ದು, ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಇಂತಹಾ ಹೃದಯಕ್ಕೆ ಆಫಾತವಾಗಿ ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆ ನಿಂತು ಹಾನಿಯಾದಾಗ, ರಕ್ತದಲ್ಲಿ ಕೆಲವೊಂದು ಕಿಣ್ವಗಳು ಏರಿಕೆಯಾಗುತ್ತದೆ. ಹೃದಯದ ಘಾಸಿಗೊಂಡ ಸ್ನಾಯುಗಳಿಂದ ಬಿಡುಗಡೆಯಿಂದ ಈ ಕಿಣ್ವಗಳನ್ನು ಕಾರ್ಡಿಯಾಕ್ ಮಾರ್ಕರ್ ಅಥವಾ ಹೃದಯಾಘಾತ ಸೂಚಕ ಕಿಣ್ವಗಳು ಎಂದೂ ಕರೆಯುತ್ತಾರೆ. ಹೃದಯಾಫಾತ ಆದ ಕೂಡಲೇ ಈ ಕಿಣ್ವಗಳು

ಕುಕ್ಕೆ:ಮಾ.24ರಂದು ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ:ಅರ್ಜಿಆಹ್ವಾನ

ಕಡಬ : ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಮತ್ತು ರಾಜ್ಯದ ನಂಬರ್ ವನ್ ಆದಾಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24ರಂದು ಜನಸಾಮಾನ್ಯರ ಅನುಕೂಲಕ್ಕಾಗಿ ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಸಾಮೂಹಿಕ ವಿವಾಹವಾಗಲು ಬಯಸುವವರು ಶ್ರೀ ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ಫೆ.20ರ ಒಳಗೆ ತಮ್ಮ ಅರ್ಜಿಯನ್ನು ಶ್ರೀ ದೇವಳಕ್ಕೆ ಸಲ್ಲಿಸಬಹುದು ಎಂದು ಶ್ರೀ ದೇವಳದ ಪ್ರಕಟಣೆ