Home Blog Left SidebarPage 164

ಆಧಾರ್ ತಿದ್ದುಪಡಿ ಮತ್ತು ನೋಂದಣಿಯನ್ನು ಗ್ರಾಮೀಣ ಭಾಗದ ಜನತೆಯ ಬಳಿ ತಲುಪಿಸುವ ಯುವ ಸಂಘಟನೆಗಳ ಸೇವೆ ಶ್ಲಾಘನೀಯ – ರೊ. ಗಣೇಶ್ ಎಂ

ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಗ್ರಾಮ ಪಂಚಾಯತ್ ಪಡುಪಣಂಬೂರು ಜಂಟಿ ಆಶ್ರಯದಲ್ಲಿ ಆಧಾರ್ ಸೇವಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ, ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು, ಹಳೆಯಂಗಡಿ ಪ್ರಾಯೋಜಕತ್ವದಲ್ಲಿ

ಬೈಂದೂರು ಉತ್ಸವ-2024 ಕ್ರೀಡಾಕೂಟಕ್ಕೆ ಚಾಲನೆ

ಬೈಂದೂರು: ಬೈಂದೂರು ಉತ್ಸವ ಕ್ಷೇತ್ರದ ಅಭಿವೃದ್ಧಿ ಅವಕಾಶಗಳ ಕಲ್ಪನೆಯಲ್ಲಿ ಕಂಡ ಕನಸು. ಒಂದೆ ಬಾರಿ ಎಲ್ಲವು ಸಾಕಾರಗೊಳಿಸುವ ತರಾತುರಿ ನಮ್ಮದಲ್ಲ ಬದಲಾಗಿ ಈ ವರ್ಷ ಆರಂಭವಾದರೆ ಹಂತ ಹಂತವಾಗಿ ಅವಕಾಶಗಳನ್ನು ಜೋಡಿಸುವ ಮೂಲಕ ನಿರಂತರ ಸಂಭ್ರಮಿಸಬೇಕೆನ್ನುವುದೇ ಬೈಂದೂರು ಉತ್ಸವದ ಮೂಲ ಧೈಯವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.  ಅವರು ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಬೈಂದೂರು ಉತ್ಸವದ

ಜಾರ್ಖಂಡ್ ಚುನಾವಣೆ: ಎಐಸಿಸಿ ಸಮನ್ವಯಕಾರರಾಗಿ ಬಿ.ಕೆ.ಹರಿಪ್ರಸಾದ್

ಮಂಗಳೂರು: ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಐಸಿಸಿಯ ಹಿರಿಯ ಸಮನ್ವಯಕಾರರನ್ನಾಗಿ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಆದೇಶಿಸಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ ಬಿ.ಕೆ. ಹರಿಪ್ರಸಾದ್, ಗೌರವ್ ಗೊಗಾಯ್, ಮೋಹನ್ ಮರ್ಕಮ್ ಅವರನ್ನು ನೇಮಕಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.

ನಾಟೆಕಲ್ :ಬಸ್-ಕಾರು ಅಪಘಾತ , ನಾಲ್ವರಿಗೆ ಗಾಯ

ನಾಟೆಕಲ್ : ಬಸ್ -ಕಾರು ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕಲ್ಕಟ್ಟ ಸಮೀಪದ ತಿರುವಿನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಆಸೀಫ್ ಕಲ್ಕಟ್ಟ ಇವರ ಬಲಗೈ, ಭುಜದ ಮೂಲೆಗಳು ಮುರಿತಕ್ಕೊಳಗಾಗಿದ್ದರೆ, ಅರಾಫತ್ ಇನೋಳಿ ಎಂಬವರ ಕಾಲಿನ ಮೂಳೆಗಳು ಮುರಿತಕ್ಕೊಳಗಾಗಿದೆ. ಉಳಿದಂತೆ ಚಾಲಕ ಅಝ್ಮಾನ್, ಹ್ಯಾರೀಸ್ ಕಲ್ಕಟ್ಟ ಗಾಯಗೊಂಡಿದ್ದಾರೆ. ಮುಡಿಪುವಿನಿಂದ ಮಂಗಳೂರಿಗೆ ತೆರಳುವ ಎನ್ .ಎಸ್ ಟ್ರಾವೆಲ್ಸ್ ಬಸ್ಸು ವಿರುದ್ಧ

ಕುತ್ತಾರು ಕೊರಗಜ್ಜನ ಕಟ್ಟೆಗೆ ನಟ ಡಾ| ಶಿವರಾಜ್ ಕುಮಾರ್ ಭೇಟಿ

ಉಳ್ಳಾಲ: ಕುತ್ತಾರು ಅಜ್ಜನ ಕಟ್ಟೆಗೆ ಬಂದಾಗ ನೆಮ್ಮದಿಯಿದೆ, ನಂಬಿಕೆಯೂ ಇರುವುದರಿಂದ ಮಂಗಳೂರು ವ್ಯಾಪ್ತಿಗೆ ಬರುವಾಗ ಈ ಭಾಗಕ್ಕೆ ಭೇಟಿ ನೀಡುತ್ತಲಿರುವೆೆಂದು ಹ್ಯಾಟ್ರಿಕ್ ಹೀರೋ ಡಾ| ಶಿವರಾಜ್ ಕುಮಾರ್ ಹೇಳಿದ್ದಾರೆ.ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿ ಅಜ್ಜನ ಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು. ಶೃಂಗೇರಿ ಮಠ, ಶ್ರೀ ಕೃಷ್ಣ ಮಠ, ಕುದ್ರೋಳಿ ಗೋಕರ್ಣನಾಥೇಶ್ವರ, ವನದೇವತೆ, ಕೊರಗಜ್ಜನ

ಉಡುಪಿ: ಹಿರಿಯ ನಟ ಮಂಡ್ಯ ರಮೇಶ್ ಅವರಿಗೆ ‘ಪಂಚಮಿ ಪುರಸ್ಕಾರ -2025’

ಉಡುಪಿ: ಪಂಚಮಿ ಟ್ರಸ್ಟ್, ಉಡುಪಿ ಪ್ರಾಯೋಜಿತ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಕೊಡಮಾಡುವ ‘ಪಂಚಮಿ ಪುರಸ್ಕಾರ- 2025’ಕ್ಕೆ ಕನ್ನಡ ರಂಗಭೂಮಿಯ ಹಿರಿಯ ನಟ ಮಂಡ್ಯ ರಮೇಶ್ ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಹೇಳಿದರು.ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪುರಸ್ಕಾರವು 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಒಳಗೊಂಡಿದೆ. ಜನವರಿ ತಿಂಗಳಲ್ಲಿ

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2023-24ನೇ ಸಾಲಿನ ಪ್ರಶಸ್ತಿ ಪ್ರಕಟ

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ನೀಡಲಾಗುವ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಐಎಎಸ್ ಅಧಿಕಾರಿ ಹಾಗೂ ತಿರುವಳ್ಳೂರು ಸಂಸದ ಸಸಿಕಾಂತ ಸೆಂಥಿಲ್, ‘ಸೇವಾ ರತ್ನ’ ಪ್ರಶಸ್ತಿಗೆ ಉದ್ಯಮಿ ಕೆ.ಎಸ್. ನಿಸಾರ್ ಅಹ್ಮದ್ ಹಾಗೂ ‘ಸೌಹಾರ್ದ ರತ್ನ’ ಪ್ರಶಸ್ತಿಗೆ ಸಾಮಾಜಿಕ ಹೋರಾಟಗಾರ ವಿಲಿಯಮ್ ಮಾರ್ಟಿಸ್ ಅವರು ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್

ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ ” ಕನ್ನಡ ವೀಡಿಯೋ ಅಲ್ಬಮ್ ಸಾಂಗ್ ಬಿಡುಗಡೆ

ಪಡುಬಿದ್ರಿ : ಪುರಾತನ ದೇವಸ್ಥಾನದ ಹಿನ್ನೆಲೆಯನ್ನು ಇಂದಿನ ಜನತೆಗೆ ತಿಳಿಯ ಪಡಿಸುವ ಕಾರ್ಯಗಳು ನಡೆಯಬೇಕಾಗಿದೆ. ಇಂದಿನ ಯುವ ಜನತೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಊಳಿಸುವ ಕಾರ್ಯ ಮಾಡಬೇಕಾಗಿದೆ….ಇಂತಹ ಅಲ್ಬಮ್ ಸಾಂಗ್ ನ ಜೊತೆ ಚಲನಚಿತ್ರ ಕೂಡಾ ನಿರ್ಮಾಣವಾಗಲಿ ” ಎಂದು‌ ಮಾಜಿ.ತಾ.ಪಂ‌.ಸದಸ್ಯ ನವೀನಚಂದ್ರ ಶೆಟ್ಟಿ ‌ ಹೇಳಿದರು. ಅವರು ಪಡುಬಿದ್ರಿ ಭಾರತ್ ಸಿನಿಮಾದಲ್ಲಿ ನಡೆದ “ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ” ಕನ್ನಡ ವಿಡಿಯೋ ಅಲ್ಬಮ್ ಸಾಂಗ್

ಬೈಂದೂರು : ಸರಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ – ರಂಗಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಸರಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ 60ರ ಸಂಭ್ರಮದ ರಂಗಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಅದ್ದೂರಿಯಿಂದ ಜರಗಿತು. ಕೊಡುಗೆ ದಾನಿ ಯಶಸ್ವಿ ಉದ್ಯಮಿ ಹೇರಂಜಾಲು ಜಯಶೀಲ ಶೆಟ್ಟಿ ಅವರು ರಂಗಮಂದಿರಕ್ಕೆ ಅಡಿಗಲ್ಲು ಹಾಕುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಸರಕಾರಿ ಶಾಲೆಗಳ ಉಳಿವಿಕೆಗೆ ಹಳೆ ವಿದ್ಯಾರ್ಥಿಗಳ ಸಹಭಾಗಿತ್ವವು ಪ್ರಮುಖವಾದದ್ದು. ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಸಂಕಲ್ಪ ನಮ್ಮಿಂದಾಗಬೇಕು ಎಂದರು. 60 ಸಂಭ್ರಮದ

ಬೆಳ್ತಂಗಡಿ : ನೀರಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

ಬೆಳ್ತಂಗಡಿ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.ತಾಲೂಕಿನ ನೆರಿಯ ಗ್ರಾಮದ ಮುನ್ನೂರು ಎಕ್ರೆ ಎಂಬಲ್ಲಿ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಈಜು ಬಾರದೆಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ ಇವರು ಮೂಲತಃ ಮೂಡಿಗೆರೆ ನಿವಾಸಿಯಾಗಿದ್ದು ಮದುವೆಯಾಗಿ ನೆರಿಯದಲ್ಲಿ ಹಲವಾರು ವರ್ಷದಿಂದ ವಾಸವಾಗಿದ್ದಾರೆ. ಈ ಬಗ್ಗೆ ಮೃತರ ಮನೆಯವರು ದೂರು ನೀಡಿದ್ದು .ಧರ್ಮಸ್ಥಳದ ಪೊಲೀಸರು