Home Blog Left SidebarPage 220

ಹಲ್ಲಿನ ಬಣ್ಣ ಬದಲಾಗುವುದೇಕೆ?

ಹಲ್ಲಿನ ಬಣ್ಣ ಬದಲಾಗುವುದೇಕೆ? ಮುತ್ತಿನಂತೆ ಪಳಪಳ ಹೊಳೆಯುವ ಬಿಳುಪಾದ ಹಲ್ಲುಗಳು ಇರಬೇಕೆಂದು ಪ್ರತಿಯೊಬ್ಬರೂ ಆಶಿಸುತ್ತಾರೆ. ಆದರೆ ಎಲ್ಲರ ಹಲ್ಲುಗಳ ಬಣ್ಣ ಬೇರೆ ಬೇರೆ ಇರುತ್ತದೆ. 90 ಶೇಕಡಾ ಮಂದಿಗೆ ಬಿಳಿಯಾದ ಹಲ್ಲುಗಳು ಇರುತ್ತವೆ. ಇನ್ನುಳಿದ 10 ಶೇಕಡಾ ಮಂದಿಗೆ ತೆಳು ಹಳದಿ, ಹಳದಿ, ಗುಲಾಬಿ ಬಣ್ಣ, ಕಪ್ಪಾಗಿರುವ ಹಲ್ಲು ಹೀಗೆ ಬೇರೆ ಬೇರೆ ಬಣ್ಣದ ಹಲ್ಲುಗಳು

ಮೂಡುಬಿದಿರೆ: ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ

ಮೂಡುಬಿದಿರೆ: ಬಹು ವಿರಳವಾದ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರು ತಮಗೆ ಅನಿಸಿದ್ದನ್ನು, ಮನಸ್ಸಿಗೆ ಬಂದದನ್ನು ನೇರವಾಗಿ ಹೇಳುತ್ತಿದ್ದರಲ್ಲದೆ ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಬಿಟ್ಟು ಹೋದವರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಅವರು ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ನಡೆದ 2023ನೇ

ಪುತ್ತೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಚಿತ – ಪ್ರತಾಪ ಸಿಂಹ ನಾಯಕ್ ವಿಶ್ವಾಸ

ಪುತ್ತೂರು: ರಾಜ್ಯ ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಜೂನ್ 3ರಂದು ನಡೆಯುವ ಚುನಾವಣೆಯಲ್ಲಿ ಎಲ್ಲ ಆರು ಸ್ಥಾನಗಳಲ್ಲೂ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸಲಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯವಿದ್ದರೂ, ಬಿಜೆಪಿಯಂಥ ರಾಷ್ಟ್ರೀಯ ಪಕ್ಷದ ಸಂಘಟನಾ ಸಾಮರ್ಥ್ಯದ ಎದುರು ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎಂದು ಹಿರಿಯ ಬಿಜೆಪಿ ಮುಖಂಡರೂ, ವಿಧಾನ ಪರಿಷತ್ ಸದಸ್ಯರೂ ಆದ ಪ್ರತಾಪ ಸಿಂಹ ನಾಯಕ್ ಹೇಳಿದರು.

ಸೂರಿಕುಮೇರು ಚರ್ಚ್‌ಗೆ ನೂತನ ಧರ್ಮಗುರುವಾಗಿ ನವೀನ್ ಪ್ರಕಾಶ್ ಡಿಸೋಜ ಅಧಿಕಾರ ಸ್ವೀಕಾರ

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಬೊರಿಮಾರ್ ಸೈಂಟ್ ಜೋಸೆಫ್ ಧರ್ಮಕೇಂದ್ರಕ್ಕೆ ೨೬ ನೇ ನೂತನ ಧರ್ಮಗುರು ಆಗಿ ವಂದನೀಯ ನವೀನ್ ಪ್ರಕಾಶ್ ಡಿಸೋಜರವರು ಬಿಷಪ್ ಪ್ರತಿನಿಧಿಯಾಗಿ ಆಗಮಿಸಿದ ವಿಟ್ಲ ವಲಯದ ಶ್ರೇಷ್ಟ ಗುರು ಅತೀ ವಂದನೀಯ ಐವನ್ ಮೈಕಲ್ ರೊಡ್ರಿಗಸ್ ರವರಿಂದ ಅಧಿಕಾರ ಸ್ವೀಕರಿಸಿದರು. ಕಿನ್ನಿಗೋಳಿ ಧರ್ಮಕೇಂದ್ರದಲ್ಲಿ ಹುಟ್ಟಿ ಬೆಳೆದ ಇವರು 2005ನೇ ವರ್ಷದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್

ಹೊಳೆಯುವ ಹಲ್ಲುಗಳಿಗಾಗಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಹಲ್ಲು ತಕ್ಷಣ ಬಿಳುಪಾಗಿಸಲು ಹಲವಾರು ಸುಲಭ ವಾಮ ಮಾರ್ಗಗಳನ್ನು ಯಾವುದೇ ವೈಜ್ಞಾನಿಕ ಪುರಾವೇ ಇಲ್ಲದೆ ಹತ್ತು ನಿಮಿಷಗಳಲ್ಲಿ ಹಲ್ಲು ಬಿಳಿಯಾಗುತ್ತದೆ ಎಂದೆಲ್ಲಾ ಜಾಹೀರಾತು ನೀಡಿ ದಾರಿ ತಪ್ಪಿಸುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ಇಂತಹಾ ದಿಢೀರ್ ಬಿಳುಪೀಕರಣದಿಂದಾಗುವ ಅಪಾಯದ ಅರಿವು ಇಲ್ಲದ ಜನರು ಹಲ್ಲು ಬಿಳುಪಾಗಿಸಲು ಸುಲಭವಾದ ಅವೈಜ್ಞಾನಿಕವಾದ ದಾರಿ ಹಿಡಿದು ಹಲ್ಲನ್ನು ಹಾಳು ಮಾಡಿಕೊಂಡ ನಿದರ್ಶನಗಳು

ಈ ಸಿಗರೇಟು ಬೇಡ…..ಆ ಸಿಗರೇಟು ಬೇಡವೇ ಬೇಡ

ಧೂಮಪಾನ ವಿಷಪಾನ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸಾಂಪ್ರದಾಯಿಕ ಧೂಮಪಾನದಲ್ಲಿ ಬೀಡಿ, ಸಿಗರೇಟು ಮುಂತಾದವುಗಳ ಮುಖಾಂತರ ತಂಬಾಕು ಉತ್ಪನ್ನಗಳನ್ನು ಉರಿಸಿ ಅದರಿಂದ ಬಂದ ನಿಕೋಟಿನ್ ಸ್ವಾದಯುಕ್ತ ಹೊಗೆಯನ್ನು ಜನರು ಆಸ್ವಾದಿಸುತ್ತಾ ಏನೋ ವಿಚಿತ್ರವಾದ ಸುಖವನ್ನು ಅನುಭವಿಸುತ್ತಾರೆ. ಧೂಮಪಾನದ ಹೊಗೆಯಲ್ಲಿ ಸಾವಿರಾರು ಕ್ಯಾನ್ಸರ್ ಕಾರಕ ವಿಷಾನಿಲಗಳು ಇದೆಯೆಂದು ತಿಳಿದಿದ್ದರೂ ಜನರು ಅಲ್ಪ ಸಮಯದ ಸಂತಸಕ್ಕಾಗಿಯೋ, ಮೋಜಿಗಾಗಿಯೋ ಅಥವಾ ಇನ್ನಾವುದೇ ಕಾರಣಕ್ಕಾಗಿಯೋ

ಡಾ. ನರೇಶ್ಚಂದ್ ಹೆಗ್ಡೆ ಪರ ಉಡುಪಿಯಲ್ಲಿ ನಟ ಅರವಿಂದ ಬೋಳಾರ್ ಪ್ರಚಾರ

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದು ಅವರ ಪರವಾಗಿ ಉಡುಪಿಯಲ್ಲಿ ನಟ ಅರವಿಂದ ಬೋಳಾರ್ ಅವರು ಮತಪ್ರಚಾರ ಮಾಡಿದರು. ಶಿಕ್ಷಕರ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲೆಂದು ವೈದ್ಯರಾದ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ. ಅವರನ್ನು ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಹಲವಾರು ಮಂದಿ ಪಣತೊಟ್ಟಿದ್ದಾರೆ. ಡಾ.

ಕಾಂಗ್ರೆಸ್ ಪ್ರಚಾರ ಪುಸ್ತಕದಲ್ಲಿ ಬಿಜೆಪಿ ನಾಯಕನ ಪೋಟೋ!?

ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಭಾವಚಿತ್ರದ ಬದಲು ಬಿಜೆಪಿ ಮುಖಂಡನ ಭಾವಚಿತ್ರ ಮುದ್ರಿಸಲ್ಪಟ್ಟಿದೆ! ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಕೆ.ಕೆ.ಮಂಜುನಾಥ್ ಕುಮಾರ್ ಅವರ ಚುನಾವಣಾ ಪ್ರಚಾರ ಪತ್ರದಲ್ಲಿ ಈ ಎಡವಟ್ಟು ಕಂಡು ಬಂದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿಯ ಬದಲು ಬಿಜೆಪಿ

ಉಡುಪಿಯಲ್ಲಿ ಝರಾ ಹೋಟೆಲ್ ಕಟ್ಟಡ ತೆರವು ವಿಚಾರ:ಉಡುಪಿ ಶಾಸಕರ ವಿರುದ್ಧ ಹರಿಹಾಯ್ದ ಎಸ್‌ಡಿಪಿಐ

ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಅಕ್ರಮ ಕಟ್ಟಡಗಳಿವೆ, ಅಕ್ರಮ ಮಳಿಗೆಗಳಿವೆ ಎಂಬುದನ್ನು ಪಟ್ಟಿ ಮಾಡಿ ಕೊಡುತ್ತೇವೆ. ಇದನ್ನೇಲ್ಲಾ ಕೆಡವಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಯಶ್‌ಪಾಲ್ ಸುವರ್ಣ ಅವರು ತಯಾರಿದ್ದಾರೆಯೇ. ಈ ಬಗ್ಗೆ ಅವರು ಬಹಿರಂಗ ಚರ್ಚೆಗೆ ಸಿದ್ಧರಿದ್ದಾರೆಯೇ ಎಂದು ಎಸ್.ಡಿ.ಪಿ.ಐ ವಕ್ತಾರ ರಿಯಾಝ್ ಕಡಂಬು ಅವರು ಸವಾಲು ಹಾಕಿದ್ದಾರೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಂತವಾಗಿರುವ

ಒಣ ಅಡಿಕೆ ಸುಲಿಯುವ ಯಾಂತ್ರೀಕೃತ ಘಟಕದಿಂದ ಸಮಸ್ಯೆ:ಗ್ರಾಮಸ್ಥರಾದ ಜಯಚಂದ್ರ ಪೂಜಾರಿ ಆರೋಪ

ಬಂಟ್ವಾಳ: ಇರ್ವತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡುಪಡುಕೋಡಿ ಗ್ರಾಮದ ಕುಕ್ಕೆರೋಡಿ ಎಂಬಲ್ಲಿ ಒಣ ಅಡಿಕೆ ಸುಲಿಯುವ ಯಾಂತ್ರೀಕೃತ ಘಟಕ ನಡೆಸುತ್ತಿರುವುದರಿಂದ ಸ್ಥಳೀಯ ಜನವಸತಿ ಪ್ರದೇಶದ ಜನರಿಗೆ ವಿಷಪೂರಿತ ಧೂಳು ಮತ್ತು ಶಬ್ದಮಾಲಿನ್ಯದಿಂದ ಜನರ ಜೀವನಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರಾದ ಜಯಚಂದ್ರ ಪೂಜಾರಿ ಆರೋಪಿಸಿದರು. ಅವರು ಮಂಗಳವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿ ನಡೆಸಿ ಕುಕ್ಕೆರೋಡಿಯಲ್ಲಿ ಕಳೆದ ಹಲವು ಸಮಯಗಳಿಂದ ಅಡಿಕೆ ಸುಲಿಯುವ ಫ್ಯಾಕ್ಟರಿ