Home Blog Left SidebarPage 221

ರೆಮಲ್ ಚಂಡಮಾರುತದ ಕಾರಣದಿಂದಾಗಿ ಮಿಜೋರಾಂ, ಅಸ್ಸಾಂಗಳಲ್ಲೂ ಭಾರೀ ಮಳೆ ಹಾಗೂ ಭೂಕುಸಿತದಿಂದ 31 ಮಂದಿ ಮರಣ

ರೆಮಲ್ ಚಂಡಮಾರುತದ ಕಾರಣದಿಂದಾಗಿ ಮಿಜೋರಾಂ, ಅಸ್ಸಾಂಗಳಲ್ಲೂ ಭಾರೀ ಮಳೆ ಹಾಗೂ ಭೂಕುಸಿತದಿಂದ 31 ಮಂದಿ ಮರಣ ಹೊಂದಿದ್ದಾರೆ. ಮಿಝೋರಾಂನಲ್ಲಿ 27 ಮತ್ತು ಅಸ್ಸಾಂನಲ್ಲಿ ನಾಲ್ವರು ಮೃತರಾಗಿದ್ದಾರೆ. ಐಜ್ವಾಲ್ ಹೊರವಲಯದ ಗಣಿ ಕುಸಿತದಲ್ಲಿ ಹದಿನಾಲ್ಕು ಜನರು ಸತ್ತಿದ್ದಾರೆ. ಲಿಮೆನ್, ಸಲೇ, ಫ್ಯಾಲಗ್, ಬಬಾಲ್ ಮೊದಲಾದ ಕಡೆ 13 ಜನ ಎಂದು 27 ಮಂದಿ ಮರಣಿಸಿದ್ದಾರೆ.

22 ಮಂದಿಯ 16 ಲಕ್ಷ ಕೋಟಿ ರೂಪಾಯಿ ಸಾಲ:ಮೋದಿಯವರನ್ನು ಟೀಕಿಸಿದ ರಾಹುಲ್ ಗಾಂಧಿ

ಪ್ರಧಾನಿ ಮೋದಿಯವರ ಸರಕಾರವು 22 ಮಂದಿ ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ, ಹಿಮಾಚಲ ಪ್ರದೇಶಕ್ಕೆ 9,000 ಕೋಟಿ ರೂಪಾಯಿ ನೆರೆ ಪರಿಹಾರ ನೀಡದೆ ತಾರತಮ್ಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದರು. ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿಯವರು ಪ್ರವಾಹ ಪರಿಹಾರ ನೀಡದೆಯೇ ಮೋದಿಯವರು ನೆರೆ ಪರಿಹಾರ ನೀಡಿದ್ದು ಬೇರೆಯದಕ್ಕೆ ಬಳಕೆ ಮಾಡಿದ್ದಾರೆ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ. ಅಷ್ಟೇ

ಎನ್‌ಎನ್‌ಒ ಪರ್ಯಾವರಣ ಸಂರಕ್ಷಣಾ ಸಮಿತಿಯಿಂದ ಪರಿಸರ ಉಳಿಸಿ-ಬೆಳೆಸುವ ಅಭಿಯಾನ

ಕಾಪುವಿನ ಕ್ರೆಸೆಂಟ್ ಇಂಟರ್ನಾ್ಯಷನಲ್ ಸ್ಕೂಲ್ ಎನ್‌ಎನ್‌ಒ ಪರ್ಯಾವರಣ ಸಂರಕ್ಷಣಾ ಸಮಿತಿ ವತಿಯಿಂದ ಪರಿಸರ ಉಳಿಸಿ – ಬೆಳೆಸುವ ಅಭಿಯಾನ ಪ್ರಯುಕ್ತ ಪರಿಸರ ಪ್ರಜ್ಞೆ ಬೆಳೆಸುವುದರ ಜತೆಗೆ ಪ್ರಕೃತಿ ಸಮತೋಲನ ಕಾಯ್ದುಕೊಂಡು ಉತ್ತಮ ಮಳೆ ಬೆಳೆ ಬರಲು ಸಹಾಯವಾಗುವಂತೆ ರಾಜ್ಯಾಧ್ಯಕ್ಷರಾದ ಶೈಖ್ ಅಬ್ದುಲ್ ವಾಹಿದ್ ಉಡುಪಿಯವರ ನೇತೃತ್ವದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು. ಕೇಂದ್ರ

ಉದ್ಯಾವರದಿಂದ ಕುಂದಾಪುರ ತನಕ ಚತುಷ್ಪಥ ರಸ್ತೆಗೆ ಡಾಮರು :ವಿ4ನ್ಯೂಸ್‌ನ ವರದಿಗೆ ಎಚ್ಚೆತ್ತ ಹೆದ್ದಾರಿ ಇಲಾಖೆ ಅಧಿಕಾರಿಗಳು

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಉಡುಪಿಯ ಉದ್ಯಾವರದಿಂದ ಕುಂದಾಪುರ ತನಕ ಚತುಷ್ಪಥ ರಸ್ತೆಗೆ ಡಾಮರೀಕರಣ ಮಾಡಲಾಗಿತ್ತು. ಆ ಸಂದರ್ಭದಲ್ಲಿ ರಸ್ತೆಗೆ ಬಿಳಿ ಬಣ್ಣದ ಗುರುತುಗಳಿಲ್ಲದೆ ರಸ್ತೆಯಲ್ಲಿ ಅಪಘಾತಗಳ ಹೆಚ್ಚಳ ಕಾರಣವಾಗಿತ್ತು. ಈ ಬಗ್ಗೆ ವಿ4 ನ್ಯೂಸ್‌ನಲ್ಲಿ ಸಮಗ್ರ ವರದಿ ಬಿತ್ತರಿಸಲಾಗಿತ್ತು. ವರದಿಗೆ ಎಚ್ಚೆತ್ತುಕೊಂಡ ಹೆದ್ದಾರಿ ಇಲಾಖೆ ರಸ್ತೆಗೆ ಬಿಳಿ ಬಣ್ಣದ ಗುರುತುಗಳನ್ನು ಹಾಕುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೬೬ ಉಡುಪಿ ಜಿಲ್ಲೆಯ ಉದ್ಯಾವರದಿಂದ

ಮಂಗಳೂರಿನ ಎಂ.ಜಿ. ರೋಡ್‌ ರಸ್ತೆ ಬದಿಯಲ್ಲಿ ಮತ್ತೆ ಹರಿಯುತ್ತಿರುವ ಕೊಳಚೆ ನೀರು

ಮಂಗಳೂರಿನ ಹೃದಯ ಭಾಗವಾದ ಎಂ.ಜಿ. ರಸ್ತೆಯಲ್ಲಿ ಮತ್ತೆ ಕೊಳಚೆ ನೀರು ಹರಿಯುತ್ತಿದೆ. ಬೆಸೆಂಟ್ ಕಾoಪ್ಲೇಸ್ನ ಡ್ರೈನೇಜ್ನೀರನ್ನು ರಸ್ತೆಗೆ ಬಿಡುತ್ತಿದ್ದು, ಇದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಂ. ಜಿ. ರಸ್ತೆಯಲ್ಲಿ ಡ್ರೈನೇಜ್ ನೀರು ಮತ್ತೆ ಹರಿಯಲಾರಂಬಿಸಿದೆ. ಈ ಹಿಂದೆ ಡ್ರೈನೇಜ್ ನೀರು ಹರಿಯುವ ಬಗ್ಗೆ ವಿ4 ನ್ಯೂಸ್‌ನಲ್ಲಿ ಸಮಗ್ರವಾದ ವರದಿ ಬಿತ್ತಿರಿಸಿ, ಪಾಲಿಕೆ

ಪೆರುವಾಜೆ: ಮಲಗಿದ್ದ ಸ್ಥಿತಿಯಲ್ಲಿ ಶ್ರೀನಿವಾಸ್- ಧರ್ಮಸ್ಥಳ ಸಂಘದಿಂದ ವಾಟರ್ ಬೆಡ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸುಳ್ಯ ಪೆರುವಾಜೆ ಗ್ರಾಮದ ಸದಸ್ಯರಾದ ಶ್ರೀನಿವಾಸ ನಾಯ್ಕ ಇವರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೇಲ್ಚಾವಣಿಯಿಂದ ಕೆಳಗಡೆ ಬಿದ್ದು ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದು ಮಲಗಿದ ಸ್ಥಿತಿಯಲ್ಲಿರುತ್ತಾರೆ ಇವರಿಗೆ ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ಸಿಗುವಂತಹ ವಾಟರ್ ಬೆಡ್ ನ್ನು ವಿತರಿಸಲಾಗಿದೆ ಈ ಸಂದರ್ಭದಲ್ಲಿ ಶ್ರೀ ಜಲದುರ್ಗ ದೇವಿ ದೇವಸ್ಥಾನ ಪೆರುವಾಜೆ ಮಾಜಿ

ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ ಕಿರುಚಿತ್ರಕ್ಕೆ ಪ್ರಶಸ್ತಿ

ಚಲನಚಿತ್ರೋತ್ಸವದಲ್ಲಿ ಭಾರತದ ಪಾಯಲ್ ಕಪಾಡಿಯಾರ ಕಿರು ಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಚಿತ್ರವು ಅತ್ಯುತ್ತಮ ಪ್ರಶಸ್ತಿ ಪಡೆದಿದೆ. ಕಿರುಚಿತ್ರ ವಿಭಾಗದಲ್ಲಿ ಪಾಯಲ್‌ರ ಈ ಚಿತ್ರವು ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬಯಿ ಮೂಲದ ಪಾಯಲ್‌ರಿಗೆ ಕಿರುಚಿತ್ರ ತಯಾರಿಕೆ ಮತ್ತು ಪ್ರಶಸ್ತಿ ಹೊಸತಲ್ಲ. 2021ರ ಕಾನ್ ಚಿತ್ರೋತ್ಸವದಲ್ಲಿ ಅವರ ‘ನೈಟ್ ಆಫ್ ನೋಯಿಂಗ್ ನತಿಂಗ್’ ಗೋಲ್ಡನ್ ಐ ಪ್ರಶಸ್ತಿ ಪಡೆದಿತ್ತು.

ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಮಹಾಸಭೆ

ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ಮುಂದಿನ ಎರಡು ವರ್ಷ ಅವಧಿಗೆ ನೂತನ ಅದ್ಯಕ್ಷ ಕಾರ್ಯದರ್ಶಿ ಕಾರ್ಯಕಾರಿ ಸಮೀತಿ ರಚಿಸಲಾಯಿತು. ಶಿಕ್ಷಣ ಸಂಪನ್ಮೂಲ ಒಕ್ಕೂಟದ ಪ್ರತಿನಿಧಿಯಾಗಿ ನಾರಾಯಣ ಕಿಲಂಗೊಡಿ ಆಗಮಿಸಿದ್ದರು. ಸಲಹಾ ಸಮೀತಿಗೆ ಕಸ್ತೂರಿ ಬೊಳುವಾರ್ ಮತ್ತು ನಯನಾ ರೈ, ಪತ್ರಕರ್ತ ಸಂಶುದ್ದೀನ್ ಸಂಪ್ಯ, ನೋಟರಿ ಸಾಹಿರಾ ಜುಬೈರ್ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಅದ್ಯಕ್ಷರಾಗಿ ಮೊಹಮ್ಮದ್ ರಫೀಕ್ ದರ್ಬೆ, ಉಪಾದ್ಯಕ್ಷರಾಗಿ ರೋಹಿಣಿ ರಾಘವ,

ಪುಲ್ವಾಮದಲ್ಲಿ ಸೈನಿಕರ ಸಾವು ಆಕಸ್ಮಿಕವೇ, ಕೊಲೆಯೇ?

ಸತ್ಯಪಾಲ್ ಮಲಿಕ್ ಅವರ ಕಚೇರಿಗಳ ಮೇಲೆ ಆರು ತಿಂಗಳ ಹಿಂದೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳ ದಾಳಿಯೋ ದಾಳಿಗೆ ಕಾರಣ ಪುಲ್ವಾಮಾದ ಕೊಲೆಗಳು ಎಂಬುದು ಒಂದು ಮಾತು. 2019ರಲ್ಲಿ 40 ಸಿಆರ್‌ಪಿಎಫ್ ಸೈನಿಕರು ಪುಲ್ವಾಮಾದಲ್ಲಿ ಸ್ಫೋಟಕ್ಕೆ ಸಿಕ್ಕಿ ಸತ್ತರು. ಇದನ್ನು ಚುನಾವಣಾ ವಿಷಯ ಮಾಡಿ ಬಿಜೆಪಿಯು ಅದೇ ವರುಷ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತು ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ಕಳೆದ ವರುಷ

ಸುಳ್ಯ : ಸಹಾಯದ ನಿರೀಕ್ಷೆಯಲ್ಲಿ ‘ಪ್ರದೀಪ್ ಅಡ್ಕ’

ನಮ್ಮ ಯುವ ತೇಜಸ್ಸಿನ ಆಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ‘ಪ್ರದೀಪ್ ಅಡ್ಕ’ ಎಂಬುವವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು, ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವ ತೇಜಸ್ಸು ಆಂಬುಲೆನ್ಸ್‌ನಲ್ಲಿ ಬಹಳಷ್ಟು ಬಾರಿ ಬಡವರಿಗೆ (ಕಷ್ಟದಲ್ಲಿರುವವರಿಗೆ) ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪರು ಯುವ ತೇಜಸ್ಸಿನ ನಲ್ಮೆಯ