Home Blog Left SidebarPage 223

ಮಂಗಳೂರು: ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ: ಸಲೀಂ ಅಹ್ಮದ್

ಶಿಕ್ಷಕರ ಮತ್ತು ಪದವೀಧಕರ ಕ್ಷೇತ್ರದ ಚುನಾವಣೆಯಲ್ಲಿ ಆರು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ನಮ್ಮ ಅಭ್ಯರ್ಥಿಗಳಾದ ಅಯನೂರು ಮಂಜುನಾಥ್ ಮತ್ತು ಕೆಕೆ ಮಂಜುನಾಥ್ ಅವರು ಈ ಬಾರಿ ಗೆಲ್ಲಲಿದ್ದಾರೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಹಾಸನ:  ಭೀಕರ ಅಪಘಾತ: ಒಂದೇ ಕುಟುಂಬದ ಆರು ಮಂದಿ ಮೃತ್ಯು

ಕಾರು – ಕಂಟೇನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಹಾಸನ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಸಮೀಪದ ಇಂದು ಬೆಳಗಿನ ಜಾವ 6:30 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂರು ಪುರುಷರು, ಒಂದು ಮಗು ಸೇರಿ 6 ಮಂದಿ ಮೃತರಾಗಿದ್ದಾರೆ. ಒಂದೇ ಕುಟುಂಬದ ನಾರಾಯಣ ಸ್ವಾಮಿ, ಸುನಂದಾ, ರವಿಕುಮಾರ್, ನೇತ್ರ,ಚೇತನ್ (ಬಾಲಕ), ರಾಕೇಶ್ (ಡ್ರೈವರ್) ಮೃತರು. ಎಲ್ಲರೂ

ವಿಟ್ಲ: ವಿದೇಶದಲ್ಲಿರುವ ವ್ಯಕ್ತಿಯ ಮನೆಗೆ ನುಗ್ಗಿದ ಕಳ್ಳರು: ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕರಾಮತ್ತು ನಡೆದಿದೆ. ಮನೆ ಮಾಲೀಕ ವಿದೇಶದಲ್ಲಿದ್ದು, ಬೀಗ ಹಾಕಿದ ಮನೆಗೆ ನುಗ್ಗಿದ ಕಳ್ಳರು ಮನೆಯಿಡೀ ಜಾಲಾಡಿ ಡಿ.ವಿ.ಆರ್ ಹೊತ್ತೊಯ್ದ ಘಟನೆ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು. ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ

ಹೋಟೆಲ್ ಉದ್ಯಮದಲ್ಲಿ ಹೊಸತನ ಸೃಷ್ಟಿಸಿದ ರಾಜೇಂದ್ರ ಶೆಟ್ಟಿ: ಪುಣೆಗೆ ಲಗ್ಗೆ ಇಟ್ಟಿದೆ ಹೋಟೆಲ್ “ವಿಶ್ವನಾಥ್ ಪ್ಯಾಲೆಸ್” “ಪಂಜುರ್ಲಿ

ಜಗತ್ತಿನಲ್ಲೇ ಹೋಟೆಲ್ ಉದ್ಯಮದಲ್ಲಿ ಪ್ರಸಿದ್ಧಿಯನ್ನು ಪಡೆದವರು ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು.ಪುಣೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ   ಪಂಜುರ್ಲಿ ಗ್ರೂಪಿನ “ವಿಶ್ವನಾಥ್ ಪ್ಯಾಲೆಸ್”  ಹೋಟೆಲ್ ಬದುಕಿಗೊಂದು ಭರವಸೆಯ ಬೆಳಕಾಗಿದೆ.   ಉಪಹಾರ  ಸೇವಿಸುವುದಕ್ಕಾಗಿ  ಹೋಟೆಲ್ ಒಳಗಡೆ ಹೆಜ್ಜೆ ಇಟ್ಟಾಗ  ಪ್ರತೀ ಹೆಜ್ಜೆಗೂ ಇಲ್ಲಿನ ಗೋಡೆಗಳ ಮೇಲಿನ ಭಿತ್ತಿ ಪತ್ರಗಳು ಮೈ

ಮಂಗಳೂರು: ಡಾ. ನರೇಶ್ವಂದ್ ಹೆಗ್ಡೆ ಪರ ನಟ ಅರವಿಂದ ಬೋಳಾರ್ ಅಬ್ಬರದ ಪ್ರಚಾರ

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಸ್ಪರ್ಧಿಸುತ್ತಿದ್ದು, ಅವರ ಪರವಾಗಿ ನಟ ಅರವಿಂದ ಬೋಳಾರ್ ಅವರು ಎರಡನೇ ದಿನ ಕೂಡ ಪ್ರಚಾರದಲ್ಲಿ ತೊಡಗಿದರು. ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಪರವಾಗಿ ನಟ  ಅರವಿಂದ ಬೋಳಾರ್ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮಂಗಳೂರಿನ

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ವಿದ್ಯಾವಂತ, ಶಿಕ್ಷಕನೇ ಅಭ್ಯರ್ಥಿಯಾಗಿ ಪ್ರತಿನಿಧಿಸಬೇಕು: ಡಾ.ನರೇಶ್ಚಂದ್ ಹೆಗ್ಡೆ

ನೈಋತ್ಯ ಶಿಕ್ಷಕರ ಕ್ಷೇತ್ರ ಅತ್ಯಂತ ಸುಶಿಕ್ಷಿತ ಮತದಾರರ ಕ್ಷೇತ್ರವೆನಿಸಿದೆ.ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದವರು ಈ ಕ್ಷೇತ್ರವನ್ನು ವಿದ್ಯಾವಂತ ಮತ್ತು ಸ್ವತಃ ಶಿಕ್ಷಕನೇ ಆಗಿರುವ ಅಭ್ಯರ್ಥಿಯೇ ಪ್ರತಿನಿಧಿಸಬೇಕು ಎಂಬ ಪರಿಕಲ್ಪನೆಯಡಿ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ತಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವಹಿಸಿರುವುದಾಗಿ ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ

ದೇರಳಕಟ್ಟೆ: ಆವರಣ ಗೋಡೆ ಕುಸಿದು ಎರಡು ಕಾರಿಗೆ ಹಾನಿ

ದೇರಳಕಟ್ಟೆ ಯೇನೆಪೊಯ ಆಸ್ಪತ್ರೆ ಬಳಿ ಮರದ ಮಿಲ್ಲೊಂದರ ಆವರಣ ಗೋಡೆ ಕುಸಿದು ಎರಡು ಕಾರು ಮತ್ತು ಒಂದು ಕೈಗಾಡಿಗೆ ಹಾನಿಯಾದ ಘಟನೆ ನಡೆದಿದ್ದು, ಘಟನೆಯ ಸಂದರ್ಭದಲ್ಲಿ ವಾಹನದಲ್ಲಿ ಯಾರೂ ಇಲ್ಲದ ಕಾರಣ ಮತ್ತು ಆವರಣ ಗೋಡೆ ಬದಿಯಲ್ಲಿ ಎರಡೇ ವಾಹನಗಳು ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.   ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆವರಣಗೋಡೆ ಒದ್ದೆಯಾಗಿದ್ದು, ಎತ್ತರದ ಹಳೆ ಗೋಡೆಯಾಗಿದ್ದು, ಕುಸಿದು ಬಿದ್ದಿದೆ. ಯೇನೆಪೊಯ ವೈದ್ಯರಿಗೆ

ದಕ್ಷಿಣ ಭಾರತ ವಲಯ ಅಂತರ್ ಕಾಲೇಜು ಮಟ್ಟದ ಫುಟ್ಬಾಲ್ ಪಂದ್ಯಾಟ: ಕಣಚೂರು ತಂಡಕ್ಕೆ ಪ್ರಶಸ್ತಿ

ದಕ್ಷಿಣ ಭಾರತ ವಲಯ ಮಟ್ಟದ ಅಂತರ್ ಕಾಲೇಜು ಫುಟ್ಬಾಲ್ ’ಅಸ್ಟ್ರಾ -2024’ ಪಂದ್ಯಾಟವು ಇತ್ತೀಚೆಗೆ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ಮೈದಾನದಲ್ಲಿ ನಡೆದಿದ್ದು, ಪಂದ್ಯಾಟಲ್ಲಿ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈಯನ್ಸಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಒಟ್ಟು12 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ಪೈನಲ್ ನಲ್ಲಿ ಕಣಚೂರು ತಂಡವು 1:0 ಅಂತರದಿಂದ ಎದುರಾಳಿ ತಂಡವನ್ನು ಮಣಿಸಿ ಗೆಲುವನ್ನು ಸಾಧಿಸಿತು. ತಂಡದಲ್ಲಿ ಮಹಮ್ಮದ್ ಅಷ್ಪಾಕ್, ಹದಿ

ವಿಶ್ವ ಚಿತ್ತ ವಿಕಲತೆ ದಿನ (ವಿಶ್ವ ಸ್ಕಿಜೋಪ್ರಿನಿಯಾ ದಿನ) – ಮೇ 24

ಪ್ರತಿ ವರ್ಷ ವಿಶ್ವದಾದ್ಯಂತ ಮೇ 24ರಂದು “ವಿಶ್ವ ಚಿತ್ತವಿಕಲತೆ ದಿನ” ಎಂದು ಆಚರಿಸಿ, ಜನರಲ್ಲಿ ಚಿತ್ತವಿಕಲತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ರೋಗವನ್ನು ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಿ ರೋಗಿಗೆ ಮತ್ತು ರೋಗಿಯ ಕುಟುಂಬದವರಿಗೆ ಸರಿಯಾದ ಮಾರ್ಗದರ್ಶನವನ್ನು ಸಕಾಲದಲ್ಲಿ ನೀಡಿದ್ದಲ್ಲಿ ಖಂಡಿತವಾಗಿಯೂ ಚಿತ್ತವಿಕಲತೆ ಉಳ್ಳವರು ಎಲ್ಲರಂತೆ ಸುಖ ಜೀವನ ನಡೆಸಿ ಸಮಾಜದ ಒಳಿತಿಗೆ ಸರ್ವತೋಮುಖ ಸಹಕಾರ ನೀಡಬಲ್ಲದು ಎಂಬ

ಹೆಜಮಾಡಿ : ಟೋಲ್ ವಿನಾಯಿತಿ ಮುಂದುವರಿಸುವಂತೆ ಒತ್ತಾಯ- ವಿವಿಧ ಸಂಘಟನೆಗಳಿಂದ ಟೋಲ್ ಪ್ಲಾಜಾ ಅಧಿಕಾರಿಗೆ ಮನವಿ

ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡುತ್ತಿದ್ದ ವಿನಾಯಿತಿಯನ್ನು ಏಕಾಏಕಿಯಾಗಿ ರದ್ದುಗೊಳಿಸುವ ಹುನ್ನಾರ ನಡೆಸುತ್ತಿರುವುದನ್ನು ಮನಗಂಡ. ಹೆಜಮಾಡಿ ಟೋಲ್ ಹೋರಾಟ ಸಮಿತಿ, ವಿನಾಯಿತಿ ಮುಂದುವರಿಸುವಂತ್ತೆ ಒತ್ತಾಯಿಸಿ ವಿವಿಧ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಟೋಲ್ ಅಧಿಕಾರಿಗೆ ಮನವಿ ಹಸ್ತಾಂತರಿಸಿದ್ದು, ನಮ್ಮ ಮನವಿಗೆ ಮಾನ್ಯತೆ ನೀಡದೆ ಇದ್ದಲ್ಲಿ ಉಗ್ರಹೋರಾಟ ನಡೆಸುವ ಎಚ್ಚರಿಕೆನ್ನು ಹೋರಾಟ ಸಮಿತಿ ನೀಡಿದೆ.ನೂರಕ್ಕೂ ಅಧಿಕ ಮಂದಿ ಸೇರಿಕೊಂಡು