Home Blog Left SidebarPage 228

ಕನ್ನಾಂಗಾರು : ಮನೆಗೆ ನುಗ್ಗಿ ನಗ ನಗದು ಕಳವು

ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತ ಪಡಿಸಿಕೊಂಡ ಕದೀಮರು ಮನೆಯ ಬಾಗಿಲು ಹೊಡೆದು ಲಕ್ಷಾಂತರ ಮೌಲ್ಯದ ನಗ ಹಾಗೂ ಸಹಸ್ರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಹೆಜಮಾಡಿಯ ಕನ್ನಾಂಗಾರಿನ ಅಶ್ರಫ್ ಎಂಬರ ಮನೆಯಲ್ಲಿ ಅವರ ಪತ್ನಿ ಇದ್ದು, ಭಾನುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೂಗಳತೆ ದೂರದಲ್ಲಿರುವ ತನ್ನ ತಾಯಿಮನೆಗೆ ಹೋಗಿದ್ದು ರಾತ್ರಿ ಅಲ್ಲಿಯೆ ಉಳಿದಿದ್ದರು.

ನಾಮಪತ್ರ ಸಲ್ಲಿಕೆಗೆ ವಾರಣಾಸಿಯಲ್ಲಿ ಅಡ್ಡಿ : ನೋವು ತೋಡಿಕೊಂಡ ಶ್ಯಾಮ್ ರಂಗೀಲಾ

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ಹೋಗಿದ್ದೆ. ಕುಳಿತುಕೊಳ್ಳಲು ಹೇಳಿ, ಆಮೇಲೆ ಸಮಯವಾಯಿತು ಹೊರಡಿ ಎಂದು ಅಧಿಕಾರಿಗಳು ಚಮಚಾಗಿರಿ ಮಾಡಿದ್ದಾರೆ ಎಂದು ಕಮೆಡಿಯನ್ ಶ್ಯಾಮ್ ರಂಗೀಲಾ ಹೇಳಿದ್ದಾರೆ. ಶ್ಯಾಮ್ ರಂಗೀಲಾ ಅವರು ಈ ಬಗೆಗೆ ಜಾಲ ತಾಣಗಳಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ. ನನ್ನ ನಾಮಪತ್ರ ಸಲ್ಲಿಸಲಾಗದ್ದಕ್ಕೆ ನೋವಾಗಿದೆ ಎಂದಿದ್ದಾರೆ. ಪ್ರಧಾನಿ ಮೋದಿಯವರು ಸ್ಪರ್ಧಿಸುವ ವಾರಣಾಸಿಯಲ್ಲಿ ಸಾಕಷ್ಟು ಜನರು ಸ್ಪರ್ಧಿಸದಂತೆ ಮೊದಲೇ ನಿರ್ಣಯಿಸಿದಂತೆ ಕಾಣುತ್ತದೆ.

ಮುಂಬೈಯಲ್ಲಿ ಮೂರು ದಿನದಿಂದ ಮಳೆ : ಪೆಟ್ರೋಲ್ ಬಂಕ್ ಮೇಲೆ ಬಿದ್ದ ಕಬ್ಬಿಣದ ಹೋರ್ಡಿಂಗ್

ಮುಂಬಯಿ ನಗರದಲ್ಲಿ ಮೂರು ದಿನದಿಂದ ಮಳೆ ಸುರಿಯುತ್ತಿದ್ದು, ಈ ಮಳೆಗಾಲದ ಮೊದಲ ನರಬಲಿಯನ್ನು ಮಳೆ ಪಡೆದಾಯಿತು. ಘಾಟ್ಕೋಪರ್‍ನ ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೆಯ ಪೊಲೀಸ್ ಗ್ರೌಂಡ್ ಪೆಟ್ರೋಲ್ ಬಂಕ್ ಮೇಲೆ ಭಾರೀ ಕಬ್ಬಿಣದ ಹೋರ್ಡಿಂಗ್ ಉರುಳಿ ಬಿದ್ದು ಮೂವರು ಸಾವಿಗೀಡಾದರು. ಅಲ್ಲದೆ 54 ಮಂದಿ ಗಾಯಗೊಂಡರು. ಇನ್ನೂ ಕೆಲವರು ಭಾರೀ ಹೋರ್ಡಿಂಗ್‍ನಡಿ ಸಿಲುಕಿದ್ದಾಗಿ ಹೇಳಲಾಗಿದೆ. ಮುಂಬಯಿಯ ವಡಾಲದಲ್ಲಿ ಕಟ್ಟುಗೆಯ ಉದ್ಯಾನ ಗೋಪುರ ಬಿದ್ದು ಮೂವರು ತೀವ್ರ ಗಾಯಗೊಂಡರು. ಹಲವು

ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ, ಪೂಜೆ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್ ಚುನವಣೆಗೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಚುನಾವಣೆ ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಸ್ಪರ್ಧಿಸಲಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿರುವ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ಆಶೀರ್ವಾದ ಪಡೆದರು. ನಂತರ ಶ್ರೀ ಹರಿ ನಾರಾಯಣ ಅಸ್ರಣ್ಣ ಅವರನ್ನು ಭೇಟಿ ಮಾಡಿ ಅವರಿಂದಲೂ ಆಶೀರ್ವಾದ

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕ್ರೀಡಾ ವಾರ್ಷಿಕೋತ್ಸವ 2023-24

ಬ್ರಹ್ಮಾವರ : “ಕ್ರೀಡೆಗಳಿಂದ ಕೇವಲ ಮನೋರಂಜನೆ ಮಾತ್ರ ದೊರೆಯಲಾರದು ಅವುಗಳಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ ,ವೃದ್ಧಿಯಾಗುವುದು” ಎಂಬ ಉದ್ದೇಶ ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡೋತ್ಸವ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡು ಇಲ್ಲಿ ಜರುಗಿತು.ಕ್ರೀಡೋತ್ಸವಕ್ಕೆ ಅತಿಥಿಗಳಾಗಿ ಶ್ರೀ ಸಂತೋಷ್ ಪ್ರಾಂಶುಪಾಲರು ಜ್ಞಾನಸುಧಾ ಪದವಿಪೂರ್ವ ಕಾಲೇಜು ಉಡುಪಿ ಇವರು ವಿದ್ಯಾರ್ಥಿಗಳಿಗೆ ” ವಿದ್ಯೆ ಎಂಬುವುದು

ಸುಳ್ಯ: ಯುವಕ ನೇಣು ಬಿಗಿದು ಆತ್ಮಹತ್ಯೆ

ನೇಣು ಬಿಗಿದು ಆತ್ಮಹತ್ಯೆ ಸುಳ್ಯ. ಬೆಳ್ಳಾರೆ ನೆಟ್ಟಾರು ನವಗ್ರಾಮ ನಿವಾಸಿ ಚರಣ್ ಎಂಬ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮನೆಯ ಹಿತ್ತಲಿನಲ್ಲಿರುವ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಲು ಕಾರಣ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ವಿಶ್ವ ದಾದಿಯರ ದಿನ ಮೇ – 12

ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿಪ್ಲಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ “ವಿಶ್ವ ದಾದಿಯರ ದಿನ” ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 2018ರ ಆಚರಣೆಯ ಧ್ಯೇಯ ವಾಕ್ಯವೆಂದರೆ “ಆರೋಗ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕು” ಎಂಬುದಾಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ

ಮತ್ತೆ ನಾಲ್ಕನೆ ಹಂತದಲ್ಲಿ ಗ್ಯಾರಂಟಿಗಳ ಕದನ ಕುತೂಹಲ

ಏಳು ಹಂತಗಳ ಲೋಕ ಸಭಾ ಚುನಾವಣೆಯ ಮೂರು ಹಂತಗಳು ಮುಗಿದಿದ್ದು, ನಾಲ್ಕನೆಯ ಹಂತವೂ ಮುಗಿಯುತ್ತಿದೆ. ಮತ್ತೂ ಮೂರು ಹಂತಗಳು ಮುಂದಿವೆ. ನಾಲ್ಕನೆಯ ಹಂತದಲ್ಲಿ 96 ಕ್ಷೇತ್ರಗಳಿಗೆ ಮತದಾನ ನಡೆಯಿತು. 17.70 ಕೋಟಿ ಮತದಾರರು ಈ ಹಂತದಲ್ಲಿ 1,717 ಅಭ್ಯರ್ಥಿಗಳಲ್ಲಿ 96 ಜನರನ್ನು ಆಯ್ಕೆ ಮಾಡಲು ಮತ ಚಲಾಯಿಸಿದರು. ಏಪ್ರಿಲ್ 19ರಂದು ಮೊದಲ ಹಂತದಲ್ಲಿ 102 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಏಪ್ರಿಲ್ 26ರ ಎರಡನೆಯ ಹಂತದ ಮತದಾನದಲ್ಲಿ 89 ಲೋಕ ಸಭಾ ಕ್ಷೇತ್ರಗಳಿಗೆ

ಪುತ್ತೂರು ನಗರ ವ್ಯಾಪ್ತಿಯಲ್ಲಿ ಗಾಳಿಮಳೆ- ಮರ ಬಿದ್ದು ಮನೆಗೆ ಹಾನಿ

ಪುತ್ತೂರು: ಭಾನುವಾರ ಸಂಜೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದ್ದು, ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಬಪ್ಪಳಿಗೆಯ ಸಿಂಗಾಣಿಯ ಕಮಲ ಎಂಬaವರ ಮನೆಯ ಮಾಡಿನ ಶೀಟು ಗಾಳಿಗೆ ಹಾರಿ ಹೋಗಿದ್ದು, ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿದು ತಕ್ಷಣ

ಎರ್ಮಾಳ್: ಸೂಚನಾ ಫಲಕಕ್ಕೆ ಬುಲೆಟ್  ಬೈಕ್  ಡಿಕ್ಕಿ : ಸವಾರರಿಬ್ಬರಿಗೆ ಗಂಭೀರ ಗಾಯ

 ಅತೀ ವೇಗವಾಗಿ ಬಂದ ಬುಲೆಟ್ ಎರ್ಮಾಳು ಸಿಎ ಬ್ಯಾಂಕ್ ಮುಂಭಾಗ ರಸ್ತೆಯಂಚಿನ ಉಕ್ಕಿನ ಸೂಚನಾ ಫಲಕಕ್ಕೆ ಡಿಕ್ಕಿಯಾಗಿ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರು ಮಂಡ್ಯ ಪಾಂಡವಪುರ ನಿವಾಸಿಗಳಾಗದ ನೂತನ್ (24) ಹಾಗೂ ಸಹ ಸವಾರ ಸೃಜನ್(23) ಎಂದು ತಿಳಿದು ಬಂದಿದೆ. ಇವರು ಬೆಂಗಳೂರಿನ ಬಿಡದಿಯ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ರಜೆ ನಿಮಿತ್ತ ಸಹಪಾಠಿಗಳೊಂದಿಗೆ ಒಟ್ಟು ಆರು ಮಂದಿ ಮೂರು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ