Home Blog Left SidebarPage 342

ಬೆಳ್ತಂಗಡಿ : ಡಿ.17 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು 18ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಸಭೆಯು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಡಿ. ಯದುಪತಿ ಗೌಡರ ಅಧ್ಯಕ್ಷತೆಯಲ್ಲಿ ವಾಣಿ ಕಾಲೇಜಿನಲ್ಲಿ ಜರಗಿತು. ಸಭೆಯ ತೀರ್ಮಾನದಂತೆ ದಶಂಬರ 17 ಆದಿತ್ಯವಾರದಂದು ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಮ್ಮೇಳನ ಜರಗಲಿದೆ. ಸುವರ್ಣ ಕರ್ನಾಟಕ ವರ್ಷವಾದದ್ದರಿಂದ

ಪಡುಬಿದ್ರಿ: ಎರ್ಮಾಳಿನ ಕೋಳಿಯಂಕಕ್ಕೆ ದಾಳಿ ಮೂವರು ವಶಕ್ಕೆ

ತೆಂಕ ಎರ್ಮಾಳು ಎಂಬಲ್ಲಿ ಅಕ್ರಮವಾಗಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಮೂವರು ಸಹಿತ ಏಳು ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಪಣಿಯೂರು ನಿವಾಸಿಗಳಾದ ಸುರೇಶ್, ಸುಕೇಶ್ ಹಾಗೂ ಕಾಪು ನಿವಾಸಿ ನಾಗೇಶ್ ಬಂಧಿತರು. ಬಹಳಷ್ಟು ಮಂದಿ ಪೊಲೀಸ್ ದಾಳಿಯ ವಿಷಯ ತಿಳಿದು ಪಲಾಯನ ಮಾಡಿದ್ದು ಅವರ ಗುರುತು ಪತ್ತೆಯಾಗಿದೆ. ಅವರನ್ನು ಶೀಘ್ರವಾಗಿ ವಶಕ್ಕೆ ಪಡೆಯಲಾಗುವುದು ಎಂಬುದಾಗಿ ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ. ನಿಷೇಧವಿದ್ದರೂ ಎಲ್ಲೆಡೆ

ಬಹರೈನ್: ಡಿ.29ರಂದು “ಮಿಸ್ಟರ್ ಮದಿಮಯೆ” ತುಳು ಸಿನಿಮಾದ ಪ್ರೀಮಿಯರ್ ಪ್ರದರ್ಶನ

ಬಹರೈನ್ ; ಎಂ.ಎಂ.ಎಂ ಗ್ರೂಫ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡು ಮೊದಲ ಬಾರಿಗೆ ನಟ ಸಾಯಿಕೃಷ್ಣರವರು ಪೂರ್ಣಪ್ರಮಾಣದ ನಾಯಕ ನಟನಾಗಿ ಅಭಿನಯಿಸಿರುವ “ಮಿಸ್ಟರ್ ಮದಿಮಯೆ ” ಚಿತ್ರದ ಪೆÇೀಸ್ಟರ್ ಹಾಗು ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಸಮಾರಂಭವು ಕನ್ನಡ ಭವನದ ಸಭಾಂಗಣದಲ್ಲಿ ಜರುಗಿತು. ದ್ವೀಪದ ಕನ್ನಡಿಗ ಉದ್ಯಮಿ ರೊಯ್ಸ್ಟಾನ್ ಫೆರ್ನಾಂಡಿಸ್ ಒಡೆತನದ “ಆರ್ ಆಂಡ್ ಆರ್ ಸ್ಕ್ವಾರ್ ” ಸಂಸ್ಥೆಯು ಈ ಚಿತ್ರವನ್ನು ಬಹರೈನ್ ನ

ನೈತಿಕ ಮೌಲ್ಯವನ್ನು ಉಳಿಸುವುದು ಪತ್ರಕರ್ತನ ಮುಂದಿರುವ ದೊಡ್ಡ ಸವಾಲು- ಶಿವಾನಂದ ತಗಡೂರು

ಮಂಗಳೂರು: ಆಧುನಿಕ ಯುಗದಲ್ಲಿ ತನ್ನ ವೃತ್ತಿ ಬದ್ಧತೆ‌ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತನ ಮುಂದಿರುವ ದೊಡ್ಡ ಸವಾಲು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ಮಂಗಳೂರಿನಕುದ್ಮುಲ್ ರಂಗರಾವ್ ಪುರಭವನದಲ್ಲಿ ನ.21 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಂದು ವೃತ್ತಿ ಬದ್ಧತೆ ಇರುವ

ಮಂಗಳೂರು : ಪ್ರಜಾಪ್ರಭುತ್ವ ದಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು – ನಳಿನ್ ಕುಮಾರ್ ಕಟೀಲ್

ಮಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಅತ್ಯಂತ ಮಹತ್ವದ ಪಾತ್ರವಿದೆ. ವಸ್ತು ನಿಷ್ಠ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ಜನತೆಗೆ ತಿಳಿಸುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4 ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ದ.ಕ. ಜಿಲ್ಲೆಯ ಪತ್ರಕರ್ತರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ

ಗೋವಿಂದ ಪೈ-ಕೆದಂಬಾಡಿ ರಸ್ತೆ ತ್ವರಿತ ಕಾಮಗಾರಿಗೆ ಆಗ್ರಹ

ಮಂಜೇಶ್ವರ ಗೋವಿಂದ ಪೈ -ಕೆದಂಬಾಡಿ ರಸ್ತೆ ಗ್ರಾಮೀಣ ಸಡಕ್ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುತುವರ್ಜಿಯಲ್ಲಿ 6 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡ ಮರು ಡಾಮರೀಕರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದು ನಾಗರಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಕಾಮಗಾರಿ ಪರಿಸರವನ್ನು ಶೋಚನೀಯ ಸ್ಥಿತಿಗೆ ತಳ್ಳಿದ್ದು, ವ್ಯಾಪಾರಿಗಳು, ಗ್ರಾಹಕರು, ಜನಸಾಮಾನ್ಯರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡು

ಅಂಗವೈಕಲ್ಯ ಮೆಟ್ಟಿನಿಂತು ಇತರರಿಗೆ ಸ್ಫೂರ್ತಿಯಾದ ಅಣ್ಣ-ತಂಗಿ..!

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ, ಸಾಧಿಸಲು ಮನೋಬಲ ಆತ್ಮವಿಶ್ವಾಸ ದೃಢವಾದ ನಂಬಿಕೆ ಇರಬೇಕು ಎಂಬುದಕ್ಕೆ ಈ ಇಬ್ಬರು ಸಹೋದರ-ಸಹೋದರಿಯರು ಸಾಕ್ಷಿಯಾಗಿದ್ದು, ತಮ್ಮ ಸಾಧನೆ ಮೂಲಕ ಸ್ಫೂರ್ತಿ ನೀಡುತ್ತಿದ್ದಾರೆ. ಉಡುಪಿ ಮೂಲದ ಗಣೇಶ್ ಕುಲಾಲ್ ಪಂಜಿಮಾರ್ ಮತ್ತು ಅವರ ಸಹೋದರಿ ಸುಮಾ ಪಂಜಿಮಾರ್ ತಮ್ಮ ಪೇಟಿಂಗ್ ಮೂಲಕ ಸಾಧನೆ ಮಾಡುತ್ತಿದ್ದು, ಇತರರಿಗೆ ಪ್ರೇರಣೆ ನೀಡುತ್ತಿದ್ದಾರೆ. ಗಣೇಶ್ ಕುಲಾಲ್ ಪಂಜಿಮಾರ್ ಮತ್ತು ಸುಮಾ ಪಂಜಿಮಾರ್ ಇಬ್ಬರು ಮೂಳೆಗಳನ್ನು

ಕುಂದಾಪುರ: ನವಜಾತ ಶಿಶು ಸಾವಿನ ಪ್ರಕರಣ: ಜಿಲ್ಲಾಧಿಕಾರಿ ಭರವಸೆ ಬಳಿಕ ಅಹೋರಾತ್ರಿ ಧರಣಿ ತಾತ್ಕಾಲಿಕ ಅಂತ್ಯ

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ವೈದ್ಯರ ನಿರ್ಲಕ್ಷದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಸೋಮವಾರ ಸಂಜೆ ಆಸ್ಪತ್ರೆ ಎದುರು ಜಮಾಯಿಸಿದ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಡಿಎಚ್‍ಓ, ಡಿಸಿ ಬಾರದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರ ಜೊತೆ

ಮೂಡುಬಿದಿರೆ: ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾಟ, ದ.ಕ ಜಿಲ್ಲೆಗೆ ಪ್ರಥಮ ಸ್ಥಾನ

ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಇದರಲ್ಲಿ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವು ಇಲ್ಲಿನ ವಿದ್ಯಾರ್ಥಿಗಳಾದ ವಿನ್ಯಾಸ್ ವಿ ಪೂಜಾರಿ, ನಿಧೀಶಾ ಶೆಟ್ಟಿ, ಪ್ರಣಾಮ್ಯ ದೇವಾಡಿಗ ಇವರು ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಮುಡಿಪು: ನೇಣುಬಿಗಿದು ಯುವಕ ಆತ್ಮಹತ್ಯೆ

ಉಳ್ಳಾಲ: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಡಿಪು ಸಮೀಪದ ಕಾರಿನ ಗ್ಯಾರೇಜ್ ನಲ್ಲಿ ನಡೆದಿದೆ.ಕಂಕನಾಡಿಯ ಕಾಂಚನ ಷೋರೂಮಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು. ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡು ಕೃತ್ಯವೆಸಗಿದ್ದಾರೆ. ನ.20 ರಂದು ಕೆಲಸಕ್ಕೆ ಹೋದವರು ತಡರಾತ್ರಿಯಾದರೂ ಮನೆಗೆ ವಾಪಸ್ಸಾಗದೇ