ಗೋವಿಂದ ಪೈ-ಕೆದಂಬಾಡಿ ರಸ್ತೆ ತ್ವರಿತ ಕಾಮಗಾರಿಗೆ ಆಗ್ರಹ
ಮಂಜೇಶ್ವರ ಗೋವಿಂದ ಪೈ -ಕೆದಂಬಾಡಿ ರಸ್ತೆ ಗ್ರಾಮೀಣ ಸಡಕ್ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುತುವರ್ಜಿಯಲ್ಲಿ 6 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡ ಮರು ಡಾಮರೀಕರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದು ನಾಗರಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಕಾಮಗಾರಿ ಪರಿಸರವನ್ನು ಶೋಚನೀಯ ಸ್ಥಿತಿಗೆ ತಳ್ಳಿದ್ದು, ವ್ಯಾಪಾರಿಗಳು, ಗ್ರಾಹಕರು, ಜನಸಾಮಾನ್ಯರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡು ತಿಂಗಳೇ ಕಳೆಯಿತು. ಹಾದು ಹೋಗುವ ರಸ್ತೆಯನ್ನು ಅಗೆದು, ಜಲ್ಲಿ ಹಾಕಿ ಹಾಗೇ ಬಿಡಲಾಗಿದೆ. ಈ ರಸ್ತೆ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರಿಗೆ ಕಾಳಜಿ ಇದ್ದಂಗೆ ಕಾಣುತಿಲ್ಲ. ಒಂದು ದಿನ ಸ್ವಲ್ಪ ಕೆಲಸ ಮಾಡಿದರೆ ಮತ್ತೆ ವಾರ ಕಳೆದರೂ ಇತ್ತ ತಿರುಗಿ ನೋಡುತ್ತಿಲ್ಲವೆಂದು ಸ್ಥಳೀಯರು ಆರೋಪಿಸುತಿದ್ದಾರೆ.