ಬಹರೈನ್: ಡಿ.29ರಂದು “ಮಿಸ್ಟರ್ ಮದಿಮಯೆ” ತುಳು ಸಿನಿಮಾದ ಪ್ರೀಮಿಯರ್ ಪ್ರದರ್ಶನ
ಬಹರೈನ್ ; ಎಂ.ಎಂ.ಎಂ ಗ್ರೂಫ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡು ಮೊದಲ ಬಾರಿಗೆ ನಟ ಸಾಯಿಕೃಷ್ಣರವರು ಪೂರ್ಣಪ್ರಮಾಣದ ನಾಯಕ ನಟನಾಗಿ ಅಭಿನಯಿಸಿರುವ “ಮಿಸ್ಟರ್ ಮದಿಮಯೆ ” ಚಿತ್ರದ ಪೆÇೀಸ್ಟರ್ ಹಾಗು ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಸಮಾರಂಭವು ಕನ್ನಡ ಭವನದ ಸಭಾಂಗಣದಲ್ಲಿ ಜರುಗಿತು.
ದ್ವೀಪದ ಕನ್ನಡಿಗ ಉದ್ಯಮಿ ರೊಯ್ಸ್ಟಾನ್ ಫೆರ್ನಾಂಡಿಸ್ ಒಡೆತನದ “ಆರ್ ಆಂಡ್ ಆರ್ ಸ್ಕ್ವಾರ್ ” ಸಂಸ್ಥೆಯು ಈ ಚಿತ್ರವನ್ನು ಬಹರೈನ್ ನ ತುಳುಚಿತ್ರ ಪ್ರೇಮಿಗಳಿಗಾಗಿ ಸಾದರಪಡಿಸುತಿದ್ದು ಚಿತ್ರವು ಬರುವ ಡಿಸೆಂಬರ್ 29ರಂದು ಜುಫೇರ್ ಪರಿಸರದಲ್ಲಿರುವ “ಮುಖ್ತಾ ” ಸಿನಿಮಾ ಮಂದಿರದಲ್ಲಿ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.
ದ್ವೀಪಕ್ಕೆ ಪಂದ್ಯಾಟಕ್ಕಾಗಿ ಆಗಮಿಸಿದ್ದ ಖ್ಯಾತ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ ಯವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆರ್ ಆಂಡ್ ಆರ್ ಸ್ಕ್ವಾರ್‍ನ ಆಡಳಿತ ನಿರ್ದೇಶಕರಾದ ರೊಯ್ ಸ್ಟನ್ ಫೆರ್ನಾಂಡಿಸ್ ರವರು ನೆರೆದವರನ್ನು ಸ್ವಾಗತಿಸಿ “ನಮ್ಮ ತುಳು ಭಾಷೆ ,ಕಲೆ ,ಸಂಸ್ಕ್ರತಿಯನ್ನು ದ್ವೀಪದಲ್ಲಿ ಉಳಿಸಿ ಬೆಳೆಸುವ ಸಣ್ಣ ಪ್ರಯತ್ನವೇ ಈ ತುಳು ಚಿತ್ರದ ಪ್ರದರ್ಶನ ಎಂದರು. ಗಣ್ಯರೆಲ್ಲರೂ ಚಿತ್ರದ ಪೆÇೀಸ್ಟರನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ದಿನೇಶ್ ಪೂಜಾರಿ, ಮನೋಜ್ ಶೆಟ್ಟಿ, ಧನುಷ್ ಕುಲಾಲ್, ದೀಕ್ಷಿತ್ ಸಾಲಿಯಾನ್, ಭಾಸ್ಕರ್ ನಾಯಕ್, ರತೀಶ್ ಭಂಡಾರಿ, ಚೇತನ್ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದರು.
ನವೀನ್ ಜಿ.ಪಿ ಅವರ ನಿರ್ದೇಶನದ ಈ ಸಿನಿಮಾದ ನಾಯಕನಾಗಿ ಸಾಯಿ ಕೃಷ್ಣ ಕುಡ್ಲ ಅವರು ನಟಿಸುತ್ತಿದ್ದು, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಜ್ಯೋತಿಷ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ, ರವಿ ರಾಮಕುಂಜ ಕಾಮಿಡಿ ಗ್ಯಾಂಗ್ ಖ್ಯಾತಿಯ ಮನೀಷ್ ಶೆಟ್ಟಿ ಉಪ್ಪಿರ, ಅಕ್ಷಯ್ ಸರಿಪಲ್ಲ, ಸಂದೀಪ್ ಶೆಟ್ಟಿ ರಾಯಿ, ಶರಣ್ ಕೈಕಂಬ, ಪ್ರವೀಣ್ ಮರ್ಕಮೆ, ಸವ್ಯರಾಜ್, ಪೃಥ್ವಿ ಕುಂದರ್ ಪೆÇಳಲಿ, ಮುಂತಾದವರು ಬಣ್ಣ ಹಚ್ಚಿದ್ದಾರೆ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಸಿನಿಮಾದ ಕತೆ ಹೆಣೆಯಲಾಗಿದೆ. ಕ್ಲೈಮಾಕ್ಸ್ ವಿಭಿನ್ನತೆಯಿಂದ ಹೊಂದಿದ್ದು, ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸುತ್ತದೆ ಎಂದು ಸಿನಿಮಾದ ನಿರ್ದೇಶಕ ನವೀನ್ ಪೂಜಾರಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಕನ್ನಡ ಸಂಘದ ಪ್ರಭಾರ ಅಧ್ಯಕ್ಷರಾದ ಮಹೇಶ್ ಕುಮಾರ್, ಸಂಘದ ಮಾಜಿ ಅಧ್ಯಕ್ಷರುಗಳಾದ ಆಸ್ಟೀನ್ ಸಂತೋಷ್, ಪ್ರದೀಪ್ ಶೆಟ್ಟಿ, ರಾಜೇಶ್ ಶೆಟ್ಟಿ, ಇಂಡಿಯನ್ ಕ್ಲಬ್ಬಿನ ಮಾಜಿ ಅಧ್ಯಕ್ಷರುಗಳಾದ ಆನಂದ್ ಲೋಬೋ, ವಿಶ್ವಕರ್ಮ ಸೇವಾ ಬಳಗದ ಅಧ್ಯಕ್ಷರಾದ ಸತೀಶ್ ಆಚಾರ್ಯ, ಅಮ್ಮ ಕಲಾವಿದರು ತಂಡದ ರೂವಾರಿ ಮೋಹನ್ ದಾಸ್ ರೈ, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ, ಇಂಡಿಯನ್ ಕ್ಲಬ್ಬಿನ ಮಾಜಿ ಕ್ರೀಡಾ ಕಾರ್ಯದರ್ಶಿ ರೆಮಿ ಪಿಂಟೋ, ಕನ್ನಡ ಸಂಘದ ಕ್ರೀಡಾ ಕಾರ್ಯದರ್ಶಿ ಜೋನ್ ದೀಪಕ್ ,ಆರ್ ಆಂಡ್ ಆರ್ ಸ್ಕ್ವಾರ್ ನ ಸ್ಥಾಪಕರಾದ ರೊಜಿಟಾ ಮಥಾಯಸ್ ಮೊದಲಾದವರು ಉಪಸ್ಥಿತರಿದ್ದರು. ದ್ವೀಪದ ಖ್ಯಾತ ನಿರೂಪಕ ಕಮಲಾಕ್ಷ ಅಮೀನ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು.
ಚಿತ್ರದ ಬಹರೈನ್ ಪ್ರದರ್ಶನದ ಬಗ್ಗೆ ಹೆಚ್ಚಿನ ವಿವರಗಳಿಗೆ ಹಾಗು ಮುಂಗಡ ಸೀಟುಗಳನ್ನು ಕಾದಿರಿಸಲು ದಿನೇಶ್ ಪೂಜಾರಿಯವರನ್ನು ದೂರವಾಣಿ ಸಂಖ್ಯೆ 00973-33967187 ಮೂಲಕ ಸಂಪರ್ಕಿಸಬಹುದಾಗಿದೆ.