ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ “ಬಾಬ್ ಕಿ ಸಂಗ್, ತ್ಯೋಹಾರ್ ಕಿ ಉಮಂಗ್” ಹಬ್ಬದ ಅಂಗವಾಗಿ ಬಾಬ್ ಲೈಟ್ ಉಳಿತಾಯ ಖಾತೆ- ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಬ್ಯಾಂಕ್ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲದ ಬ್ಯಾಂಕಿಂಗ್ ಅನುಭವವನ್ನು
ಪ್ರಧಾನಿ ಮೋದಿಯವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸಿಗರು ನೀಡಿದ ಅವಹೇಳನಕಾರಿ ಹೇಳಿಕೆಗಳಿಗೆಲ್ಲಾ ನಾವು ದೂರು ನೀಡುತ್ತಾ ಹೋಗಿದ್ದರೆ ಅವರೆಲ್ಲರ ವಿರುದ್ಧ ಹಲವು ಪ್ರಕರಣಗಳಿರುತ್ತಿದ್ದವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೆÇೀಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಕೇಸ್ ಹಾಕಿರುವ ಬಗ್ಗೆ ಅವರು
ಮೂಡುಬಿದಿರೆ : ಉತ್ತರ ಕನ್ನಡ ಜಿಲ್ಲೆ ಮತ್ತು ದ.ಕ.ದ ಮೂಡುಬಿದಿರೆಯಿಂದ ಬೈಕ್ ಕಳವು ಮಾಡಿರುವ ಅಂತರ್ ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಶುಕ್ರವಾರ ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಅಂಜನೇಯ ದೇವಸ್ಥಾನದ ಬಳಿ ಕೊಡವತಿ ಗ್ರಾಮದ ಆಕಾಶ್ ಕಲ್ಕಿ ಹಾಗೂ ಅಂಜನೇಯ ದೇವಸ್ಥಾನದ ಹತ್ತಿರ, ಬೀರ್ಗನಹಳ್ಳಿಯವೀರೇಂದ್ರ ಬಂಧಿತರು. ಮುಂಜಾನೆಯ ಜಾವ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಂತ ಗ್ರಾಮದ
ಹಲವು ಸಮಯದಿಂದ ಬಾಕಿ ಇರುವ ನಿಗಮ ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಗೃಹ ಸಚಿವ ಜಿ. ಪರಮೇಶ್ವರ ಅವರು ಮನೆಗೆ ಊಟಕ್ಕೆ ಕರೆದಿದ್ದರು. ನಾನು ಮತ್ತು ಕೆಲವು ಸಚಿವರು ಹೋಗಿದ್ದೆವು. ಅಲ್ಲಿ
ಮಂಗಳೂರು ಪಾಲಿಕೆ ವ್ಯಾಪ್ತಿಯ 66 ತಳ್ಳುಗಾಡಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ನಿರ್ಧರಿಸಿದ್ದು, ನ. 1ರಂದು ವಿತರಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು. ಮಂಗಳೂರು ಪಾಲಿಕೆಯಲ್ಲಿ ನಡೆದ ಸಾರ್ವಜನಿಕ ಫೆÇೀನ್-ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಮೇಯರ್ ಅವರು, ಒಟ್ಟಾರೆ ಸುಮಾರು 900 ಅರ್ಜಿಗಳು ಬಂದಿದ್ದು, ಮೊದಲ ಹಂತದಲ್ಲಿ ಹೊಸತಾಗಿ 66 ಮಂದಿಗೆ ಗುರುತಿನ ಚೀಟಿ ನೀಡುತ್ತೇವೆ. ತಳ್ಳುಗಾಡಿ ಗುರುತಿನ ಚೀಟಿ ಹೊಂದಿದವರು ನಿಂತು
ಉಡುಪಿಯ ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯ ಶಾರಾದ ವಿಸರ್ಜನಾ ವೈಭವದ ಮೆರವಣಿಗೆಯು ನಡೆಯಿತು.ವಿಸರ್ಜನಾ ಮೆರವಣಿಗೆಯಲ್ಲಿ ಹತ್ತಾರು ಟ್ಯಾಬ್ಲೋಗಳು, ಚಂಡೆ ವಾದ್ಯ ಮೇಳಗಳು ಭಾಗವಹಿಸಿದ್ದವು. ಉದ್ಯಾವರ, ಮೇಲ್ಪೇಟೆ ಮಾರ್ಗವಾಗಿ ಪಿತ್ರೋಡಿ ವರೆಗೆ ವೈಭವ ಮೆರವಣಿಗೆಯಲ್ಲಿ ಸಾಗಿ ಬಂದ ಶಾರದೆಯನ್ನು ಕಂಡು ಜನ ಭಕ್ತಿ ಪರವಶರಾದರು.ಇನ್ನೂ ವಿಶೇಷವಾಗಿ ಮೆರವಣಿಗೆಯಲ್ಲಿ ಚಂಡೆ ಹಾಗೂ ವಾಯಿಲಿನ್ ಫ್ಯೂಶನ್ ಸಂಗೀತದ ನಾದಕ್ಕೆ ಜನ ಮೈಮರೆತರು.
ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ.ತನಿಖೆ ನಡೆಸುವಂತೆ ಲೋಕಾಯುಕ್ತರಿಂದ ಆದೇಶ. ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ ಹಾಗೂ ಚರಂಡಿಗಳ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಕುರಿತು ನಗರಸಭೆ ಹಿಂದಿನ ಪೌರಾಯುಕ್ತೆ ರೂಪಾ ಶೆಟ್ಟಿ, ಇಂಜಿನಿಯರ್ ದಿವಾಕರ್ ಹಾಗೂ ಅಕೌಂಟೆಂಟ್ ಚಂದ್ರರಾಮ ದೇವಾಡಿಗ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು,
ಕಟೀಲು ದೇವಸ್ಥಾನ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರಿಗೆ ದೇವಿಯ ದರ್ಶನ ಸಮಯ ಬದಲಾವಣೆ ಇಲ್ಲ. ರಾತ್ರಿಯ ಮಹಾಪೂಜೆ ಸಾಯಂಕಾಲ ಆರೂವರೆ ಒಳಗೆ ಮುಗಿಯುತ್ತದೆ. ಗ್ರಹಣದ ಸಮಯ ವಿಶೇಷ ಅಭಿಷೇಕ, ಮಧ್ಯಕಾಲದಲ್ಲಿ ವಿಶೇಷ ಅಭಿಷೇಕ ಇರುತ್ತದೆ. ಗ್ರಹಣ ಸಮಯಕ್ಕೆ ದೇವಿಯ ದರ್ಶನಕ್ಕೆ ತುಪ್ಪ, ಎಣ್ಣೆ ಸಮರ್ಪಣೆಗೆ ಅವಕಾಶ ಇದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.28ರಂದು ಶನಿವಾರ ಚಂದ್ರಗ್ರಹಣ ಇರುವುದರಿಂದ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತಾಧಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅ.28ರಂದು ಶನಿವಾರ ರಾತ್ರಿ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯಗೊಳ್ಳಲಿದೆ.ಆ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ಅಂದು ಸಾಯಂಕಾಲ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ
ಬ್ರಾಂಡೆಡ್ ರೆಡಿಮೇಡ್ ವಸ್ತ್ರ ಪ್ರಿಯರಿಗೆ ಶುಭ ಸುದ್ದಿ. ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ 4 ದಿನಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನ ನಡೆಯುತ್ತಿದೆ. ಅ.27 ರಿಂದ ಅ.30ರವರೆಗೆ ಆಯೋಜಿಸಿದ್ದು, ವಿವಿಧ ಶೈಲಿಯ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. 4 ದಿನಗಳ ಕಾಲ ನಡೆಯಲಿರುವ ಈ




























