ಮಂಗಳೂರು: ರಾಜ್ಯ ಸರಕಾರದಿಂದ ಶಾಸಕರ ಹಕ್ಕನ್ನು ಕಸಿಯುವ ಯತ್ನ : ನಳಿನ್

ಪ್ರಧಾನಿ ಮೋದಿಯವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸಿಗರು ನೀಡಿದ ಅವಹೇಳನಕಾರಿ ಹೇಳಿಕೆಗಳಿಗೆಲ್ಲಾ ನಾವು ದೂರು ನೀಡುತ್ತಾ ಹೋಗಿದ್ದರೆ ಅವರೆಲ್ಲರ ವಿರುದ್ಧ ಹಲವು ಪ್ರಕರಣಗಳಿರುತ್ತಿದ್ದವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೆÇೀಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಕೇಸ್ ಹಾಕಿರುವ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ,”ನಮ್ಮ ವಿರುದ್ಧ ಹಿಂದೆ ಅವರೂ ಏನೇನೋ ಹೇಳಿಕೆ ಕೊಡ್ತಾ ಇದ್ದರು, ಹಿಂದೆ ಬೊಮ್ಮಾಯಿ ಅವರ ವಿರುದ್ಧ ಪೇಸಿಎಂ ಎಂಬ ಅಭಿಯಾನ ಮಾಡಿದ್ದರು, ಅದು ಬಿಡಿ, ಮೋದಿಯವರನ್ನೇ ನರಹಂತಕ ಎಂದು ಹೇಳಿಕೆ ಕೊಟ್ಟಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದನ್ನೆಲ್ಲಾ ಕೇಸ್ ಹಾಕುವುದಾದರೆ ಎಲ್ಲರೂ ಜೈಲಿನೊಳಗಿರಬೇಕಾಗಬಹುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಬಂದ ಬಳಿಕ ಬಿಜೆಪಿಯ ಜನಪ್ರತಿನಿಧಿಗಳನ್ನು ಗುರಿಯಾಗಿಸಿ ಕೇಸ್ ಹಾಕಲಾಗುತ್ತಿದೆ, ಕ್ಷುಲ್ಲಕ ಕಾರಣ ಕೊಟ್ಟು ಕೇಸ್ ಹಾಕುವ ಅಭ್ಯಾಸ ಬೆಳೆಯುತ್ತಿದೆ, ಅದೇ ಸಮಾಜದ್ರೋಹಿಗಳು, ಪಾಕ್ ಧ್ವಜ ಹಾಕಿದವರು, ತಲವಾರು ಝಳಪಿಸಿದವರನ್ನು ಪೆÇ್ರೀತ್ಸಾಹಿಸುತ್ತಿದ್ದಾರೆ. ಈ ಚಾಳಿ ಮುಂದುವರಿದರೆ ಬಿಜೆಪಿಯಿಂದ ರಾಜ್ಯವ್ಯಾಪಿಯಾಗಿ ತೀವ್ರ ಸ್ವರೂಪದ ಆಂದೋಲನ ನಡೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ಡಾ. ವೈ ಭರತ್ ಶೆಟ್ಟಿ. ರಾಜೇಶ್ ನಾಯಕ್, ಪ್ರತಾಪ್ ಸಿಂಹ ನಾಯಕ್, ಸುದರ್ಶನ ಮೂಡುಬಿದಿರೆ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.