ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ, ನಡೆಯುತ್ತಿರುವ ದ್ವಿತೀಯ ವರ್ಷದ “ಕುಡ್ಲದ ಪಿಲಿ ಪರ್ಬ-2023” ಸ್ಪರ್ಧಾಕೂಟವನ್ನು ಇಂದು ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳನ್ವಯ ಗಣಹೋಮದ ನಂತರ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕುಡ್ಲ ಪಿಲಿಪರ್ಬದ ರೂವಾರಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಅವರ ತಂಡದ
ಪಣಂಬೂರಿನ ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಅ.22 ರಂದು ಪಣಂಬೂರು ಎನ್‍ಎಂಪಿಎ ಆಫೀಸರ್ಸ್ ಕ್ಲಬ್‍ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಈ ಶಿಬಿರ ಪ್ರಾರಂಭಗೊಳ್ಳಲಿದ್ದು, ರಕ್ತದಾನ ಮಾಡುವ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9901722647,
ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಮೂಡುಬಿದಿರೆ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಾಲ್ಕನೇ ದಿನದಂದು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆಯ ಖ್ಯಾತ ತಜ್ಞ ವೈದ್ಯ ಡಾ.ಹರೀಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಯಕ್ಷಗಾನ-ಸ್ವರೂಪ ಮತ್ತು ನಾವೀನ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜೋಶಿ ಅವರು, ಜಗತ್ತಿನ ಶ್ರೇಷ್ಠ ಕಲೆಗಳಲ್ಲಿ ಯಕ್ಷಗಾನವೂ ಒಂದು.
ನೆಲ್ಯಾಡಿ: ಶಿರಾಡಿ ಘಾಟ್‍ನ ಡಬಲ್ ಟರ್ನ್‍ನಲ್ಲಿ ಹಾಸನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಅಕ್ಕಿ ಸಾಗಾಟದ ಲಾರಿಯೊಂದು ಬೆಂಕಿಗಾಹುತಿ ಆಗಿರುವ ಘಟನೆ ನಡೆದಿದೆ. ಶಿರಾಡಿ ಘಾಟ್‍ನ ಡಬಲ್ ಟರ್ನ್‍ನಲ್ಲಿ ಹಾಸನ ಕಡೆಯಿಂದ ಮಂಗಳೂರಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಾರಿ ಚಾಲಕ ಹಾಗೂ ಕ್ಲೀನರ್‍ಗೆ ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು, ಅಪಾಯದಿಂದ
ಮಂಗಳೂರಿನಲ್ಲಿ ದಸರಾ ಸಂಭ್ರಮದ ಕಳೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಿಳಾ ಮಣಿಗಳು ಬಣ್ಣ ಬಣ್ಣದ ಬಟ್ಟೆಗಳೊಂದಿಗೆ ಮಿಂಚುತ್ತಿದ್ದಾರೆ. ಅಂತೆಯೇ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಮಂಗಳೂರಿನ ಕಾವೂರಿನಲ್ಲಿರುವ ಕೆಪಿಟಿಸಿಎಲ್‌ನ ಟಿಎಲ್ ಮತ್ತು ಎಸ್‌ಎಸ್ ವಿಭಾಗದ ಮಹಿಳಾ ಉದ್ಯೋಗಿಗಳಾದ ಸ್ಮಿತಾ, ಮೇಘಾ, ಜೀನಾ, ಸೌಮ್ಯ ಮತ್ತು ನಿಶ್ತಾ ಅವರು ಅ.೧೮ರಂದು ನೀಲಿ ಬಣ್ಣದ ವಸ್ತ್ರಗಳನ್ನು ತೊಟ್ಟು ಸಂಭ್ರಮಿಸಿದರು.
ಮಂಗಳೂರು: ಟೋನಿ ಅಂಡ್ ಗೈ ಎಸ್ಸೆನ್ಸುಯಲ್ಸ್ ಕೇಶ ವಿನ್ಯಾಸದ ಎರಡನೆಯ ನೂತನ ಸುಸಜ್ಜಿತ ಮಳಿಗೆ ಮಂಗಳೂರಿನ ಯೆಯ್ಯಾಡಿಯಲ್ಲಿ ಶುಭಾರಂಭಗೊಂಡಿದೆ. ದೇಶದ ಹೆಸರಾಂತ ಕೇಶ ವಿನ್ಯಾಸ ಕಂಪನಿಯಲ್ಲಿ ಒಂದಾದ ಟೋನಿ ಅಂಡ್ ಗೈ ನೂತನ ಎರಡನೇ ಶಾಖೆ ನಗರದ ಯೆಯ್ಯಾಡಿಯಲ್ಲಿರುವ ಸುಸಜ್ಜಿತ ಮಳಿಗೆಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರೊಂದಿಗೆ ಹೆಸರಾಂತ ಹೇರ್ ಡ್ರೆಸ್ಸಿಂಗ್ ಔಟ್‍ಲೆಟ್ ಟೋನಿ ಮತ್ತು ಗೈ
ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಬೈಂದೂರು ದಸರಾ-2023ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಬೈಂದೂರು ದಸರಾ ಮಹೋತ್ಸವಕ್ಕೆ ಅಪ್ಪಣ್ಣ ಹೆಗ್ಡೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಪ್ರಗತಿಯಾದರು ಸಹ ಮನಃಶಾಂತಿ ಹಾಗೂ ನೆಮ್ಮದಿಯನ್ನು ಹಣ ಹಾಗೂ ಪ್ರಗತಿಯಿಂದ ಪಡೆಯಲು ಸಾದ್ಯವಿಲ್ಲ,ಮದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸುಖಃ ಸಮೃದ್ದಿ ದೊರೆಯುತ್ತದೆ
ಮಂಜೇಶ್ವರದ ಉಪಜಿಲ್ಲಾ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಶಾಲೆಗಳ ಶೌಚಾಲಯಗಳಲ್ಲಿ ಶುಚಿತ್ವ ಇಲ್ಲದೇ ಇರುವುದು ಪೋಷಕರಲ್ಲಿ ಸಾಂಕ್ರಾಮಿಕ ರೋಗದ ಭೀತಿಯನ್ನು ಹೆಚ್ಚಿಸಿದೆ. ಮಂಜೇಶ್ವರ ಉಪಜಿಲ್ಲೆಯ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ಶೌಚಾಲಯದಲ್ಲಿ ಮಾಲಿನ್ಯ ಕಟ್ಟಿ ನಿಂತು ದುರ್ವಾಸನೆಯಿಂದ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಆದರೂ ಶಾಲೆಯ ಉಸ್ತುವಾರಿ ವಹಿಸಿಕೊಂಡಿರುವವರು ಈ ಬಗ್ಗೆ ಗಮನ ಹರಿಸುತ್ತಿಲ್ಲ
ಪುತ್ತೂರು: ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅ. 22ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಪುತ್ತೂರುದ ಪಿಲಿಗೊಬ್ಬು -2023 ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರುದ ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಪುತ್ತೂರು: ಹುಲಿ ಕುಣಿತದಂತಹ ಸಾಂಸ್ಕೃತಿಕ ಕಲೆ ನಮ್ಮ ಊರಿಗೂ ಬರಲಿ ಎಂಬ ಉದ್ದೇಶದಿಂದ ಆರಂಭಗೊಂಡಿರುವ ಪುತ್ತೂರುದ ಪಿಲಿರಂಗ್‍ನ ಸೀಸನ್ -2 ಪುತ್ತೂರು ಕಿಲ್ಲೆ ಮೈದಾನದಲ್ಲಿ ಅ. 22ರಂದು ನಡೆಯಲಿದೆ ಎಂದು ಪಿಲಿರಂಗ್ ಸಾರಥ್ಯ ವಹಿಸಿರುವ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪುತ್ತೂರಿಗೆ ಹೆಸರು ಬರಬೇಕು ಎಂಬ ನಿಟ್ಟಿನಲ್ಲಿ ಪಿಲಿರಂಗ್ ಆರಂಭ ಮಾಡಿದ್ದೇವೆ. ಜಾತ್ಯಾತೀತ, ಪಕ್ಷಾತೀತ



























