ಮಂಗಳೂರು: ನೀಲಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಕೆಪಿಟಿಸಿಎಲ್‌ನ ಉದ್ಯೋಗಿಗಳು
ಮಂಗಳೂರಿನಲ್ಲಿ ದಸರಾ ಸಂಭ್ರಮದ ಕಳೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಿಳಾ ಮಣಿಗಳು ಬಣ್ಣ ಬಣ್ಣದ ಬಟ್ಟೆಗಳೊಂದಿಗೆ ಮಿಂಚುತ್ತಿದ್ದಾರೆ. ಅಂತೆಯೇ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಮಂಗಳೂರಿನ ಕಾವೂರಿನಲ್ಲಿರುವ ಕೆಪಿಟಿಸಿಎಲ್‌ನ ಟಿಎಲ್ ಮತ್ತು ಎಸ್‌ಎಸ್ ವಿಭಾಗದ ಮಹಿಳಾ ಉದ್ಯೋಗಿಗಳಾದ ಸ್ಮಿತಾ, ಮೇಘಾ, ಜೀನಾ, ಸೌಮ್ಯ ಮತ್ತು ನಿಶ್ತಾ ಅವರು ಅ.೧೮ರಂದು ನೀಲಿ ಬಣ್ಣದ ವಸ್ತ್ರಗಳನ್ನು ತೊಟ್ಟು ಸಂಭ್ರಮಿಸಿದರು.