ಮಂಜೇಶ್ವರದ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರೊಂದು ಢಿಕ್ಕಿಯಾಗಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟಿದ್ದು, ಘಟನೆಯನ್ನು ಖಂಡಿಸಿ ಇಂದು ನಾಗರಿಕರು ವಿದ್ಯಾರ್ಥಿ ಸುಮಂತ್‌ನ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು. ಉದ್ಯಾವರ ಮಾಡ ಕ್ಷೇತ್ರ ಸಮೀಪದ ರಘುನಾಥ ಆಳ್ವ ಎಂಬವರ ಪುತ್ರ ಮಂಗಳೂರು ಖಾಸಗಿ ಕಾಲೇಜಿನ ದ್ವಿತೀಯ
ಮಂಗಳೂರಿನ ಮೆರಿಹಿಲ್‌ನಲ್ಲಿರುವ ನೆಕ್ಸಾ ಮಾಂಡವಿ ಮೋಟಾರ್‍ಸ್‌ನಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ 100ಕ್ಕಿಂತಲೂ ಅಧಿಕ ಕಾರುಗಳು ಮಾರಾಟವಾಗಿದೆ. ಗ್ರಾಹಕರ ಅಚ್ಚುಮೆಚ್ಚಿನ ಕಾರುಗಳಾದ ಎಕ್ಸ್‌ಎಲ್ ೬, ಫೋನ್ಕ್ಸ್, ಬಲೆನೋ, ಗ್ರಾಂಡ್ ವಿಟಾರ, ಜಿಮ್ನಿ, ಇಗ್ನೀಸ್, ಇನ್ವಿಕ್ಟೋ, ಕಿಯಾಜ್ ಕಾರುಗಳು ಮಾರಾಟವಾಗಿದೆ. ಕಾರು ಮಾರಾಟ ಕ್ಷೇತ್ರದಲ್ಲಿ ಹೆಸರು ಪಡೆದುಕೊಂಡಿರುವ ನೆಕ್ಸಾ ಕಾರು ಶೋರೂಂ ದಾಖಲೆ ಮಟ್ಟದಲ್ಲಿ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿರುವ
ಸಾಂದರ್ಭಿಕ ಚಿತ್ರ ಉಳ್ಳಾಲ : ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಡಿಮೆ ಅಂಕ ಹಾಗೂ ಒಂದು ಮಾರ್ಕ್ ಕಡಿಮೆ ನೀಡಿದರೆಂಬ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯ ವಾಟರ್ ಬಾಟಲಿಗೆ ಎಕ್ಸ್ಪೈರಿ ಆದ ಮಾತ್ರೆ ಹಾಕಿದ ಪರಿಣಾಮ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಘಟನೆ ಸಂಬಂಧ ಇಂದು ಶಾಲೆಯಲ್ಲಿ ತುರ್ತು ಎಸ್‍ಡಿಎಂಸಿ ಸಭೆ ನಡೆಸಿ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ಶಾಲಾ
ಬೈಂದೂರು : ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಹಾಗೂ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರು ಇವರ ಸಹಯೋಗದಲ್ಲಿ ಬೈಂದೂರು ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಎರಡು ದಿನಗಳ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಕ್ರೀಡಾಪಟು ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಮಂಜುನಾಥ್ ಮರಾಠಿ ಅವರ ಸಾಧನೆ ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ
ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯಲ್ಲಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಸುಮಾರು 3.5 ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸುಸಜ್ಜಿತವಾದ ನೂತನ ಬಾಲ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಡಿಜಿಎಂ ಶ್ರೀಜೀತ್ ಬಾಲವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳ ಕಲಿಕಾ ಚಟುವಟಿಕೆಗೆ ಬಾಲ ಭವನ ಬಹಳಷ್ಟು ಸಹಕಾರಿ ಆಗಲಿದೆ ಎಂದು ಶುಭಹಾರೈಸಿದರು. ನಿವೃತ್ತ ಡಿಜಿಎಂ ಶಶಿಧರ ಐತಾಳ್ ಮಾತನಾಡಿ,
ಒಂದೆರಡು ವರ್ಷಗಳಿಂದ ಪುತ್ತೂರು ಮತ್ತು ಆಸುಪಾಸಿನ ನಾನಾ ಕಡೆ ಚಿರತೆ ಓಡಾಟದ ಹೆಜ್ಜೆಗುರುತುಗಳು ಗೋಚರವಾದ ನಡುವೆಯೇ, ಇದೇ ಮೊದಲ ಬಾರಿಗೆ ಚಿರತೆಯು ತನ್ನ ಬೇಟೆಯನ್ನು ಮರದ ಮೇಲಿಟ್ಟು ನಾಪತ್ತೆಯಾದ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ರಬ್ಬರ್ ಮರವೊಂದರ ಕೊಂಬೆಯಲ್ಲಿ ಸತ್ತ ದನದ ಕರುವಿನ ಕಳೇಬರ ಪತ್ತೆಯಾಗಿದ್ದು, ಇದು ಚಿರತೆಯದ್ದೇ ಕೆಲಸ ಎಂದು ಅರಣ್ಯ ಇಲಾಖೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣ ಅ. 7ರ ಶನಿವಾರದಿಂದ ಆರಂಭಗೊಳ್ಳಲಿದೆ. ಇದೀಗ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಚಾರಣಕ್ಕೆ ಅವಕಾಶ ಒದಗಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾದ್ಯಮಕ್ಕೆ ತಿಳಿಸಿದ್ದಾರೆ. ಈ ಹಿಂದೆ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಭಾರೀ ಮಳೆಯ ಕಾರಣ ಚಾರಣಿಗರ ಹಿತದೃಷ್ಟಿಯಿಂದ ಕುಮಾರಪರ್ವತ ಚಾರಣವನ್ನು ಅ. 3ರಿಂದ ನಿಷೇಧಿಸಲಾಗಿತ್ತು. ಅದಕ್ಕಿಂತ ಮೊದಲು ಮೇ ತಿಂಗಳಿನಿಂದ ಸೆ.29ರ ತನಕ ಅರಣ್ಯ
ಮಂಜೇಶ್ವರ: ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮಿತ ವೇಗದಿಂದ ಬಂದ ಇನೋವಾ ಕಾರೊಂದು ರಸ್ತೆದಾಟುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗಳೊಂದಿಗೆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಉದ್ಯಾವರ ಮಾಡ ಕ್ಷೇತ್ರ ಸಮೀಪದ ರಘುನಾಥ ಆಳ್ವ ಎಂಬವರ ಪುತ್ರ ಮಂಗಳೂರು ನಿಟ್ಟೆ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸುಮಂತ್ (17) ಗಾಯಗೊಂಡ ವಿದ್ಯಾರ್ಥಿ. ಈತನನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಜೇಶ್ವರ:ವಿದ್ಯಾರ್ಥಿಗೆ ಕಾರು ಢಿಕ್ಕಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗೆ ಕುಂಜತ್ತೂರು ಮಾಡ ಎಂಬಲ್ಲಿ ಕಾರು ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕುಂಜತ್ತೂರು ಮಾಡ ವಲಯದ ರಘು ಶೆಟ್ಡಿ ಎಂಬವರ ಪುತ್ರ ಸುಮಂತ್ (17) ಗಾಯಗೊಂಡ ಬಾಲಕ ಎಂದು ತಿಳಿದುಬಂದಿದೆ.ಕಾಲೇಜಿನಿಂದ ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಗಂಭೀರ ಗಾಯಗೊಂಡಿರುವ ಸುಮಂತ್
ಕಾಸರಗೋಡು: ಮಂಗಲ್ಪಾಡಿ- ಕೈಕಂಬ 12*4 ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಚಿವ ವಿ. ಮುರಳಿಧರನ್ ಅವರಿಗೆ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾದ ಕೆ. ಸುರೇಂದ್ರನ್, ಜಿಲ್ಲಾಧ್ಯಕ್ಷರಾದ ರವೀಶ್ ತಂತ್ರಿ ಕುಂಟಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಅವರು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದರು.ಇದೀಗ ಸ್ಪಂದಿಸಿರುವ ಕೇಂದ್ರ ಸರ್ಕಾರ ಮಂಗಲ್ಪಾಡಿ-ಕೈಕಂಬ ಅಂಡರ್ ಪಾಸ್



























