ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್ ವಿಚಾರವಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನು ಹಮ್ಮಿಕೊಳ್ಳಲಿದ್ದೇವೆ. ಅದಕ್ಕಾಗಿ 288 ಶಾಲೆ ಮತ್ತು ಕಾಲೇಜುಗಳನ್ನು ಪಟ್ಟಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದರು. ಅವರು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಮಾದಕ ದ್ರವ್ಯ ಜಾಗೃತಿ
ಉಡುಪಿ : “ವೈಜರ್” ವಸತಿ ಸಮುಚ್ಚಯದ ಫ್ಲಾಟ್ ಮಾರಾಟದಲ್ಲಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ವಿವಾದಕ್ಕೆ ಸಂಬಂಧಿಸಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ಬ್ಯಾಂಕಿನಿಂದ 5.4 ಕೋಟಿ ಸಾಲ ಪಡೆದುಕೊಂಡಿದ್ದು, ಈವರೆಗೆ ನಾನು 6 ಕೋಟಿ ರೂ. ಬ್ಯಾಂಕಿಗೆ ಪಾವತಿಸಿದ್ದೇನೆ. ಇದೀಗ ಬ್ಯಾಂಕ್ ಮತ್ತೆ 5 ಕೋಟಿ ರೂ. ಸಾಲ ಇದೆ ಎಂಬುದಾಗಿ ಹೇಳುತ್ತಿದೆ. ಈ ಬಗ್ಗೆ 2.5 ಕೋಟಿ ರೂ.
ಉಡುಪಿ : ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಪೊಲೀಸ್ ಇಲಾಖೆ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಆಸ್ಪತ್ರೆ ಉಡುಪಿ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್
ಕುರ್ಬಾನಿ ಹೆಸರಿನಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋವಂಶ ಹತ್ಯೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬಜರಂಗದಳದ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಆಗ್ರಹಿಸಿದ್ದಾರೆ. ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಗೋವು ಹಿಂದುಗಳ ಶ್ರದ್ಧಾ ಬಿಂದುವಾಗಿದ್ದು, ಆ ಗೋವಿಗೋಸ್ಕರ ನೂರಾರು ವರ್ಷಗಳ ಕಾಲ ಹಿಂದೂ ಸಮಾಜ ಹೋರಾಟ ಮಾಡಿದೆ. ಜೂನ್ 29ರಂದು ಬಕ್ರೀದ್ ನಡೆಯಲಿದ್ದು, ಕುರ್ಬಾನಿ ಹೆಸರಿನಲ್ಲಿ ಗೋವುಗಳ ವಧೆ ನಡೆಯುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ
ಉಡುಪಿ : ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಪ್ರತಿಭಾನ್ವಿತ ಕಲಾವಿದರಾಗಿ ಸಾಕಷ್ಟು ಸಾಧನೆಗಳೊಂದಿಗೆ ಪ್ರಸಿದ್ದರಾಗಿದ್ದ, ತೋನ್ಸೆ ಜಯಂತ್ ಕುಮಾರ್ (77) ಇಂದು ಬೆಳಗಿನ ಜಾವ ಸ್ವರ್ಗಸ್ಥರಾಗಿದ್ದಾರೆ. ಇವರು ಯಕ್ಷಗಾನದ ಸಾಂಪ್ರದಾಯಿಕ ಮೌಲ್ಯಗಳ ಉಳಿಯುವಿಕೆಗೆ ಸಮಗ್ರವಾಗಿ ಶ್ರಮಿಸಿದ್ದು ಯಕ್ಷಗುರುಗಣ್ಯರಾಗಿ ಗೌರವಾಭಿಮಾನಗಳಿಂದ ಗುರುತಿಸಿಕೊಂಡಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ಯಕ್ಷಗಾನ ಭಂಡಾರ ತೋನ್ಸೆ ಕಾಂತಪ್ಪ ಮಾಸ್ಟರ್ ರವರ ಸುಪುತ್ರರಾಗಿ
ಸಜೀಪಮೂಡ ಗ್ರಾಮದ ಬೊಳ್ಳಾಯಿ ಜಂಕ್ಷನ್ ಹಾಗೂ ಸುಭಾಶ್‍ನಗರದ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದ ಆವರಣದಲ್ಲಿ ಸಜೀಪಮೂಡ ವಲಯ ಕಾಂಗ್ರೆಸ್ ವತಿಯಿಂದ ನಿರ್ವಹಿಸಲ್ಪಡುವ ಇಂದಿರಾ ಸೇವಾ ಕೇಂದ್ರವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸರ್ಕಾರದ ಎಲ್ಲಾ ಸೌಲಭ್ಯಗಳು ಜನರಿಗೆ ಸುಲಭವಾಗಿ ದೊರಕುವಂತಾಗಲೂ ಪಕ್ಷದ ವತಿಯಿಂದ ಇಂದಿರಾ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ
ಭಾರತ ತಂಡದ ಕ್ರಿಕೆಟಿಗ ಕೆ.ಎಲ್.ರಾಹುಲ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ರಾಹುಲ್‌ಗೆ ಹೆಗ್ಗಡೆಯವರು ಶಾಲು ಹೊದಿಸಿ ಬೆಳ್ಳಿಯ ನಾಣ್ಯ, ಗೋವಿನ ಕಂಚಿನ ಪ್ರತಿಮೆಯನ್ನು ನೀಡಿ ಗೌರವಿಸಿದರು. ಈ ವೇಳೆ ಹೆಗ್ಗಡೆ ಕುಟುಂಬದವರು ಜತೆಯಲ್ಲಿದ್ದರು. ಐಪಿಎಲ್ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಬಳಿಕ ಲಂಡನ್ ನಲ್ಲಿ
ವಿಟ್ಲ: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಪದವು ಕೊಡಂಚಡ್ಕ ಎಂಬಲ್ಲಿ ನಿರ್ಮಾಣವಾಗುತ್ತಿರುವ ಗೋಫಾರ್ಮ್ ಕಟ್ಟಡಕ್ಕೆ ಪುಣಚ ಗ್ರಾಮ ಪಂಚಾಯತ್ ಕಾನೂನು ಬದ್ಧ ಪರವಾನಿಗೆಯನ್ನು ನೀಡಲಾಗಿದೆ. ಇದನ್ನು ರದ್ದುಗೊಳಿಸಲು ಅವಕಾಶ ಇಲ್ಲ ಎಂದು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ತಿಳಿಸಿದ್ದಾರೆ. ಅವರು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಪರವಾನಿಗೆ ನೀಡಿದ ವಿಚಾರವನ್ನು ಸಮರ್ಥಿಸಿ ಕೊಂಡರು. ಇದು ಹಸೈನಾರ್ ಮಾದುಮೂಲೆ ಎಂಬವರಿಗೆ
ಪುತ್ತೂರು: ಯುವಕರು ಸಮಾಜ ಕಟ್ಟಬೇಕು ಹೊರತು ಬಿಕ್ಕಟ್ಟು ಸೃಷ್ಠಿಸಬಾರದು. ಅದೇ ರೀತಿ ಸಮಸ್ಯೆಯನ್ನು ಬಗೆಹರಿಸಬೇಕು ಹೊರತು ಸಮಸ್ಯೆಯನ್ನು ಸೃಷ್ಠಿಸುವ ಕೆಲಸ ಮಾಡಬಾರದು ಎಂದು ನೂತನ ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಅವರು ಪುತ್ತೂರಿನ ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಪುರಭವನದಲ್ಲಿ ನೂತನ ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಯುವ ಸಮುದಾಯ ಉತ್ತಮ ನಡೆಯೊಂದಿಗೆ ಮುಂದುವರಿದಲ್ಲಿ
ಭಾರತೀಯ ಕಿಸಾನ್ ಸಂಘ (ರಿ.) ಮೂಡುಬಿದಿರೆ ತಾಲೂಕು ಮತ್ತು ತೋಟಗಾರಿಕಾ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ತೋಟಗಾರಿಕಾ ಕೃಷಿಯಲ್ಲಿ ಮಳೆಗಾಲದ ಸಮಸ್ಯೆಗಳ ಕುರಿತು “ರೈತ – ವಿಜ್ಞಾನಿ ಸಂವಾದ ಕಾರ್ಯಕ್ರಮವು ಶ್ಯಾಮಿಲಿ ಎನ್ಕ್ಲೈವ್ ಸಭಾಂಗಣದಲ್ಲಿ ನಡೆಯಿತು. ಭಾರತೀಯ ಕಿಸಾನ್ ಸಂಘ(ರಿ) ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿಶೇಷ ಆಹ್ವಾನಿತರಾಗಿ ಶಾಸಕ ಉಮಾನಾಥ




























