ಕೊಲ್ಲಪದವು: ಗೋಫಾರ್ಮ್ ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧ ಪರವಾನಿಗೆ : ರದ್ದುಗೊಳಿಸಲು ಅವಕಾಶ ಇಲ್ಲ: ರಾಮಕೃಷ್ಣ ಮೂಡಂಬೈಲು
ವಿಟ್ಲ: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲಪದವು ಕೊಡಂಚಡ್ಕ ಎಂಬಲ್ಲಿ ನಿರ್ಮಾಣವಾಗುತ್ತಿರುವ ಗೋಫಾರ್ಮ್ ಕಟ್ಟಡಕ್ಕೆ ಪುಣಚ ಗ್ರಾಮ ಪಂಚಾಯತ್ ಕಾನೂನು ಬದ್ಧ ಪರವಾನಿಗೆಯನ್ನು ನೀಡಲಾಗಿದೆ. ಇದನ್ನು ರದ್ದುಗೊಳಿಸಲು ಅವಕಾಶ ಇಲ್ಲ ಎಂದು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ತಿಳಿಸಿದ್ದಾರೆ.
ಅವರು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಪರವಾನಿಗೆ ನೀಡಿದ ವಿಚಾರವನ್ನು ಸಮರ್ಥಿಸಿ ಕೊಂಡರು. ಇದು ಹಸೈನಾರ್ ಮಾದುಮೂಲೆ ಎಂಬವರಿಗೆ ಸೇರಿದ ಖಾಸಗಿ ಸ್ಥಳವಾಗಿದ್ದು, ಎಲ್ಲವೂ ಕಂದಾಯ ಇಲಾಖೆ ಕಾನೂನು ಪ್ರಕಾರವೇ ಇದೆ. ಗೋಫಾರ್ಮ್ ಕಟ್ಟಡ ನಿರ್ಮಾಣವನ್ನು ತಡೆಯಲು ಗ್ರಾಮ ಪಂಚಾಯತ್ ಅಧಿಕಾರ ಹೊಂದಿಲ್ಲ. ಗ್ರಾಮಸ್ಥರು ಸತ್ಯ ವಿಚಾರವನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ಪ್ರಸ್ತಾಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪುಣಚ ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಕುಮಾರ್ ದಂಬೆ, ಹರೀಶ್ ಮಾರಮಜಲು, ತೀರ್ಥರಾಮ ನಾಯಕ್ ಆಜೇರು ಉಪಸ್ಥಿತರಿದ್ದರು.