ಮಂಗಳೂರು : ಗ್ರಾಮದ ದೇವಸ್ಥಾನ ಅಭಿವೃದ್ಧಿಗೊಂಡಾಗ ಊರು ಅಭಿವೃದ್ಧಿಗೊಳ್ಳುತ್ತದೆ, ಜನ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಮತ್ತಷ್ಟು ಪ್ರೇರಣೆ ಶಕ್ತಿಯಾಗುತ್ತದೆ, ಕುಲಾಲ ಸಮಾಜದ ಬಂಧುಗಳು ಶ್ರದ್ದೆಯಿಂದ ತ್ಯಾಗದ ಭಾವನೆಯಿಂದ ಸೇವೆಯನ್ನು ಮಾಡಿ ದೇವರಿಗೆ ಬ್ರಹ್ಮಕಲಸವನ್ನು ಮಾಡಿದ್ದಾರೆ, ಇದು ಸಮಾಜದ ಅಭಿವೃದ್ಧಿಗೆ ಕಳಸಅಭಿಷೇಕವಾಗಿದೆ,ಕ್ಷೇತ್ರವನ್ನು
ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬಂದರು ಮತ್ತು ಸಮುದ್ರದಲ್ಲಿ ಅವಘಡಗಳು ಸಂಭವಿಸಿದಾಗ ತಮ್ಮ ಜೀವವನ್ನೇ ಪಣಕ್ಕಿಟ್ಟು ಸದಾ ನೆರವಿಗೆ ಧಾವಿಸುವ ಮಾನವೀಯತೆಯ ಸರದಾರ ಈಶ್ವರ್ ಮಲ್ಪೆ, ಈ ಬಾರಿ ಎರಡು ನಾಯಿಗಳನ್ನು ರಕ್ಷಣೆ ಮಾಡಿದ್ದಾರೆ. ನೀವು ನಂಬಲಿಕ್ಕಿಲ್ಲ, ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಈ ನಾಯಿಗಳು ಮಲ್ಪೆ ಬಂದರಿನ ಧಕ್ಕೆಯೊಳಗೆ ಹೊರ ಬರಲಾಗದೆ ಅಕ್ಷರಶಃ ಬಂಧಿಯಾಗಿದ್ದವು. ಎಲ್ಲ ಕಡೆ ನೀರಿನಿಂದ ಆವೃತವಾಗಿರುವುದರಿಂದ ನಾಯಿಗಳು ಒಳಗೇ ಬಂಧಿಯಾಗಿದ್ದವು.
ಉಜಿರೆ : ಸರ್ವತೋಮುಖ ಬೆಳವಣ ಗೆಗೆ ಪೂರಕವಾಗುವ ಮಕ್ಕಳ ಹಕ್ಕುಗಳ ಕುರಿತ ಅರಿವು ವ್ಯಾಪಕವಾಗಬೇಕು ಎಂದು ಟೋಕಿಯೊದ ಪ್ರೆಸ್ ಆಲ್ಟರ್ನೇಟಿವ್ ಪತ್ರಿಕೆಯ ಸಲಹೆಗಾರ್ತಿ ಮನೋರಮ ಭಟ್ ಜಿ.ವಿ ಅಭಿಪ್ರಾಯಪಟ್ಟರು. ಎಸ್ .ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಮಕ್ಕಳ ಹಕ್ಕುಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಮಕ್ಕಳು ಸಬಲರಾಗಬೇಕಾದರೆ ಅವರ ಕುಟುಂಬ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲ
ಉಳ್ಳಾಲ: ಬಿಫರ್ ಜಾಯ್ ಚಂಡಾಮಾರುತ ಭೀತಿ ಹಿನ್ನೆಲೆಯಲ್ಲಿ ಒಂದು ವಾರದಿಂದ ಪ್ರಕ್ಷುಬ್ದಗೊಂಡಿದ್ದ ಉಚ್ಚಿಲ ಬಟ್ಟಪ್ಪಾಡಿಯ ಸಮುದ್ರತೀರದಲ್ಲಿ ಜಿಲ್ಲಾಡಳಿತದ ಆದೇಶದಂತೆ ತುರ್ತು ಕಲ್ಲು ಹಾಕುವ ಕಾಮಗಾರಿಯನ್ನು ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ತಕ್ಷಣದ ಸುರಕ್ಷತಾ ಕಾಮಗಾರಿ ಆರಂಭಿಸಲಾಗಿದೆ. ಉಳ್ಳಾಲದ ಸಮುದ್ರ ತೀರಕ್ಕೂ ಭಿಪರ್ ಜಾಯ್ ಎಫೆಕ್ಟ್ ತಟ್ಟುವ ಸಾಧ್ಯತೆ ಹಿನ್ನೆಲೆ ತುರ್ತಾಗಿ ಕಲ್ಲುಗಳನ್ನು ಹಾಕಲಾಗುತ್ತಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ಪೂರಣ್ ವರ್ಮಾ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಇವರು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ ಮಾಣಿ ಬಂಟ್ವಾಳ ತಾಲೂಕು ಇದರ ವಿಸ್ತೃತ ನೂತನ ವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿದರು. ನೂತನ ಶಿಕ್ಷಣ ಸಂಸ್ಥೆಯ ವ್ಯವಸ್ಥೆಯಲ್ಲಿ ಆಧುನಿಕ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸಿ ವಿವಿಧ ಮಾಹಿತಿಯನ್ನು ಪಡೆದುಕೊಂಡರು. ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಸ್ಥಾಪಕ
ಉಡುಪಿ : ರಾಜ್ಯದ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆರಂಭಿಸಿರುವ ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಕೆ ಎಸ್ ಆರ್ ಟಿ ಸಿ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಲ್ಲಿ ಜೂನ್ 11ರ ರವಿವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ […]
ಬಂಟ್ವಾಳ: ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಿಲಂಬಂ ಸ್ಪರ್ಧೆಯಲ್ಲಿ ಡಬಲ್ ಸ್ಟಿಕ್ ಹಾಗು ವಾಲ್ ವೇಚೂ ವಿಭಾಗದಲ್ಲಿ ವೆನಿಲ್ಲಾ ಮಣಿಕಂಠ ಇವರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಸ್ಪರ್ಧಾ ಕೂಟದಲ್ಲಿ ಸ್ವಿಟ್ಜರ್ಲ್ಯಾಂಡ್, ದುಬೈ, ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಒಟ್ಟು ೧೦ ರಾಷ್ಟ್ರಗಳ ಪರಿಣಿತ ಮಾರ್ಷಲ್ ಆರ್ಟ್ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಪೈಕಿ ಭಾರತವನ್ನು
ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್ ಎಮ್ ಎಸ್ ಸಮುದಾಯ ಭವನದಲ್ಲಿ ಬ್ರಹ್ಮಾವರ ಕೃಷಿ ಇಲಾಖೆಯ ವತಿಯಿಂದ ಹಲಸು ಮೇಳವನ್ನು ಜೂನ್ 10 ರಂದು ಆಯೋಜಿಸಲಾಗಿತ್ತು. ಬ್ರಹ್ಮಾವರ ಕೃಷಿ ಇಲಾಖೆಯಿಂದ ಪ್ರತೀ ವರ್ಷದಂತೆ ನಡೆಸಿಕೊಂಡು ಬರುವ ಹಲಸು ಮೇಳವನ್ನು ಈ ಬಾರಿ ಎಸ್ ಎಮ್ ಎಸ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದು ಹಲಸು ಹಣ್ಣುಗಳು, ಹಲಸಿನ ಹಪ್ಪಳ, ಹಲಸಿನ ಸಂಡಿಗೆ, ಸೇರಿದಂತೆ ವಿವಿಧ ಬಗೆಯ ಹಲಸಿನ ಖಾದ್ಯಗಳು ಜನರನ್ನ ಕೈ ಬೀಸಿ ಕರೆಯುತ್ತಿತ್ತು. ಕೇವಲ ಹಲಸಿನ
ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರದ ವಕ್ವಾಡಿ ರಸ್ತೆಯಲ್ಲಿ ಎಂದಿನಂತೆ ಹಾಸ್ಟೆಲ್ ನಿಂದ ಕಾಲೇಜಿಗೆ ತೆರಳುತ್ತಿದ್ದ ಸಮಯದಲ್ಲಿ ಆಕೆಯನ್ನು ಉಡುಪಿ ಜಿಲ್ಲೆಯ ಬಾರಕೂರು ಮೂಲದ ನಜೀರ್ (35) ಎಂಬಾತ ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ್ದಾನೆ. ಈ ವಿಚಾರವಾಗಿ ವಿದ್ಯಾರ್ಥಿನಿ ಜೋರಾಗಿ ಕೂಗಿದ್ದು, ಸ್ಥಳೀಯರು ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದರು. ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ, ವಿದ್ಯಾರ್ಥಿನಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ
ಉಡುಪಿ : ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಅಬ್ಬರದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಬೇಸಿಗೆಯ ಧಗೆ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬೇಸತ್ತ ಕರಾವಳಿ ಜನತೆಗೆ ನಿಟ್ಟುಸಿರು ಬಿಡುವಂತಾಗಿದೆ. ಉಡುಪಿ ಜಿಲ್ಲೆಯಾದ್ಯಂತ ತುಂತುರು ಮಳೆ ಮುಂದುವರಿದು ಮೋಡ ಕವಿದ ವಾತಾವರಣ ಮನೆಮಾಡಿದೆ. ಆದರೆ ಕಡಲತೀರದ ಸೌಂದರ್ಯವನ್ನು ಸವಿಯಲು ದೂರದೂರಿನಿಂದ ಬಂದ ಪ್ರವಾಸಿಗರಿಗೆ ಮಾತ್ರ ಮಳೆಯ ದಿಢೀರ್ ಆಗಮನ ಸಂತೋಷವನ್ನುಂಟು ಮಾಡಲಿಲ್ಲ. ಬಿಪರ್ ಜೋಯ್




























