ಉಳ್ಳಾಲ : ಬಿಫರ್ ಜಾಯ್ ಚಂಡಾಮಾರುತ ಭೀತಿ – ತುರ್ತು ಸುರಕ್ಷತಾ ಕಾಮಗಾರಿ
ಉಳ್ಳಾಲ: ಬಿಫರ್ ಜಾಯ್ ಚಂಡಾಮಾರುತ ಭೀತಿ ಹಿನ್ನೆಲೆಯಲ್ಲಿ ಒಂದು ವಾರದಿಂದ ಪ್ರಕ್ಷುಬ್ದಗೊಂಡಿದ್ದ ಉಚ್ಚಿಲ ಬಟ್ಟಪ್ಪಾಡಿಯ ಸಮುದ್ರತೀರದಲ್ಲಿ ಜಿಲ್ಲಾಡಳಿತದ ಆದೇಶದಂತೆ ತುರ್ತು ಕಲ್ಲು ಹಾಕುವ ಕಾಮಗಾರಿಯನ್ನು ಆರಂಭಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ತಕ್ಷಣದ ಸುರಕ್ಷತಾ ಕಾಮಗಾರಿ ಆರಂಭಿಸಲಾಗಿದೆ. ಉಳ್ಳಾಲದ ಸಮುದ್ರ ತೀರಕ್ಕೂ ಭಿಪರ್ ಜಾಯ್ ಎಫೆಕ್ಟ್ ತಟ್ಟುವ ಸಾಧ್ಯತೆ ಹಿನ್ನೆಲೆ ತುರ್ತಾಗಿ ಕಲ್ಲುಗಳನ್ನು ಹಾಕಲಾಗುತ್ತಿದೆ.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ಹಿನ್ನೆಲೆ ಕಾಮಗಾರಿ ಆರಂಭಿಸಲಾಗಿದೆ. ಜೆಸಿಬಿ ಮತ್ತು ಟಿಪ್ಪರ್ ಮೂಲಕ ಕಲ್ಲುಗಳನ್ನು ಸಿಬ್ಬಂದಿ
ತಂದು ಹಾಕಲಾಗುತ್ತಿದೆ. ಉಚ್ಚಿಲ ಕಡಲ ತೀರದ ಬಟ್ಟಪಾಡಿ ಸಮುದ್ರ ತೀರದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಸದ್ಯ ಭಾರೀ ರಕ್ಕಸ ಗಾತ್ರದ ಅಲೆಗಳಿಂದ ಅಬ್ಬರಿಸುತ್ತಿರುವ ಸಮುದ್ರ ತೀರದ ಮನೆಗಳ ರಕ್ಷಣೆಗೆ ತುರ್ತು ಕಲ್ಲುಗಳನ್ನು ಹಾಕುವ ಕಾರ್ಯ ಆರಂಭವಾಗಿದೆ. ಮುಂದಿನ 48 ಗಂಟೆಗಳಲ್ಲಿ ಕಡಲಿನ ಅಬ್ಬರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಅನ್ನು ವ ವರದಿಯನ್ನು ಹವಮಾನ ಇಲಾಖೆ ನೀಡಿದೆ.