ಎರ್ಮಾಳಿನ ಮೂಡಬೆಟ್ಟು ಪ್ರದೇಶದಲ್ಲಿ ರಾತ್ರಿ ಸಮಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರು ಚಿರತೆಯನ್ನು ಕಂಡು ಭಯಭೀತರಾದ್ದು, ರಾತ್ರಿ ಎಲ್ಲಾ ಜಾಗರಣೆಯಿಂದ ಕೂರುವಂತಾಗಿದೆ. ಎರ್ಮಾಳು ಅದಮಾರು ರಸ್ತೆಯ ಮೂಡಬೆಟ್ಟು ಎಂಬಲ್ಲಿ ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದವರಿಗೆ ಈ ಚಿರತೆ ವಿದ್ಯುತ್ ದೀಪದಡಿಯಲ್ಲಿ ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿದೆ. ತಕ್ಷಣ
ಟೀಮ್ ತಾಂಡವ ಪ್ರಸೆಂಟ್ಸ್ ತಾಂಡವ ಪ್ರೀಮಿಯರ್ ಲೀಗ್ ಉರ್ವ ಮೈದಾನದಲ್ಲಿ ಜೂನ್ 17 ಮತ್ತು 18ರಂದು ನಡೆಯಲಿದೆ.ಟೀಮ್ ತಾಂಡವ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ.ಟೀಮ್ ಸ್ಕೈಹಾಕ್ಸ್, ಗರುಡ ಗ್ಯಾಂಗ್, ಮೋನ್ಕ್ ಸ್ಟ್ರೈಕರ್ಸ್, ಕಿಂಗ್ಸ್, ಟೀಮ್ ಗೋಲ್ಡನ್ ಗರುಡಾಸ್, ಟೀಮ್ ಕಾಲಾಕಲ್ಕಿ ಎಂಬ 6 ತಂಡಗಳು ನಡುವೆ ಪಂದ್ಯಾಟ ನಡೆಯಲಿದೆ.ಜೂನ್ 18ರಂದು ನಡೆಯಲಿರುವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ವಿ4 ನ್ಯೂಸ್‍ನ
ಉಡುಪಿಯಲ್ಲಿ ಇನ್‍ಸ್ಪೈಯರ್ ನೀಟ್ ಅಕಾಡೆಮಿ ಕಾರ್ಯಾಚರಿಸುತ್ತಿದ್ದು, 2023-24ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ. ಎಸೆಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳು ದೀರ್ಘಕಾಲಿಕ ತರಬೇತಿಗಳನ್ನು ಈ ಸಂಸ್ಥೆಯಲ್ಲಿ ಪಡೆಯಬಹುದು. ಇನ್‍ಸ್ಫೈಯರ್ ನೀಟ್ ಅಕಾಡೆಮಿ ಸಂಸ್ಥೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಓರಿಯಂಟೆಡ್ ಕಲಿಕೆ, ಉನ್ನತಿಗಾಗಿ ಸ್ಟಡಿ ಮೆಟೀರಿಯಲ್ಸ್, ಹಾಗೂ ಉತ್ತಮ ಬೋದಕ ವೃಂದದವರು ಇದ್ದಾರೆ. ಹಾಸ್ಟೆಲ್ ಸೌಲಭ್ಯ
ರಾಜ್ಯ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ನಗರಕ್ಕೆ ಡಿಕೆ ಶಿವಕುಮಾರ್, ತುಮಕೂರು ಜಿಲ್ಲೆಗೆ ಡಾ. ಜಿ ಪರಮೇಶ್ವರ್, ಗದಗ ಜಿಲ್ಲೆಗೆ ಹೆಚ್.ಕೆ ಪಾಟೀಲ್, ಬೆಂಗಳೂರು ಗ್ರಾಮಾಂತರಕ್ಕೆ ಕೆ.ಹೆಚ್ ಮುನಿಯಪ್ಪ, ರಾಮನಗರಕ್ಕೆ ರಾಮಲಿಂಗಾರೆಡ್ಡಿ, ಚಿಕ್ಕಮಗಳೂರಿಗೆ ಕೆಜೆ ಜಾರ್ಜ್, ವಿಜಯಪುರಕ್ಕೆ ಎಂ.ಬಿ
ಉಡುಪಿ : ಕೇಂದ್ರ ಸಚಿವಾಲಯ ಗ್ರಂಥಾಲಯದ ಹಿರಿಯ ಅಧಿಕಾರಿ, ದೆಹಲಿ ಶಿಕ್ಷಣ ಕನ್ನಡ ಸಂಸ್ಥೆಯ ಉಪಾಧ್ಯಕ್ಷ ಡಾ. ಅವನೀಂದ್ರನಾಥ್ ರಾವ್ ಅವರು ಸಂಕಲಿಸಿದ ವಸ್ತು ಸಂಗ್ರಹಾಲಯ ಕುರಿತ ಸಚಿತ್ರ ಗ್ರಂಥಸೂಚಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ಜಿ. ರೆಡ್ಡಿ ಅವರು ಇತ್ತೀಚಿಗೆ ಬಿಡುಗಡೆಗೊಳಿಸಿದರು. ಕೊಲ್ಕತ್ತದ ಕೇಂದ್ರ ಸಂದರ್ಭ ಗ್ರಂಥಾಲಯ ಈ ವಿಶೇಷ ಗ್ರಂಥಸೂಚಿಯನ್ನು ಪ್ರಕಟಿಸಿದೆ. ವಸ್ತು ಸಂಗ್ರಹಾಲಯ ಕುರಿತ ಜಾಗತಿಕ ಮಹಾಮೇಳ ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಷಪೊ-2023
ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವಿತರಣೆಗಾಗಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ರೇಷನಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಬಜೆ ಡ್ಯಾಂನಲ್ಲಿ ಕುಡಿಯುವ ನೀರಿನ ಶೇಖರಣೆ ತೀರಾ ಕಡಿಮೆ ಇರುವುದರಿಂದ 5 ದಿನಗಳಿಗೊಮ್ಮೆ , ಜೂನ್ 9, 14 ಮತ್ತು 19 ರಂದು ಪರ್ಕಳ, ಸೆಟ್ಟಿಬೆಟ್ಟು, ಅನಂತನಗರ, ಈಶ್ವರನಗರ, ವಿದ್ಯಾರತ್ನ ನಗರ, ಶೀಂಬ್ರ ಭಾಗಕ್ಕೆ, ಜೂನ್ 10, 15 ಮತ್ತು 20 ರಂದು ಇಂದಿರಾನಗರ ಟ್ಯಾಂಕ್,
ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರು ಕೆಳಪೇಟೆಯಲ್ಲಿ ಬಸ್ ಮತ್ತು ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜೂ.8 ರಂದು ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಜಾರ್ಕಳದ ಕಾರ್ತಿಕ್ (26) ಎಂದು ಗುರುತಿಸಲಾಗಿದೆ. ಕಲ್ಲಿನ ಕೆಲಸ ಮಾಡುತ್ತಿದ್ದ ಕಾರ್ತಿಕ್ ಕೆಲಸ ಮುಗಿಸಿ ಮನೆಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರ್ಕಳದಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ
ಉಳ್ಳಾಲ: ಗೃಹಪ್ರವೇಶ ನಡೆಸಿ ಐದೇ ದಿನದಲ್ಲಿ ನೂತನ ಮನೆಯಲ್ಲೇ ಯುವತಿ ನೇಣಿಗೆ ಶರಣಾದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮನೆ ಖರೀದಿಸಿದ ಮಹಿಳೆಯೊಬ್ಬಳಿಗೆ ನಗದು ನೀಡಿ ಒಂದೆಡೆ ಮೋಸಕ್ಕೊಳಗಾಗಿದ್ದರೆ, ಇನ್ನೊಂದೆಡೆ ಮನೆಯ ಬ್ಯಾಂಕ್ ಸಾಲ ಮರುಪಾವತಿಗೆ ಗೃಹಪ್ರವೇಶದಂದೇ ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಮುಜುಗರಕ್ಕೀಡಾದ ಯುವತಿ ಮನನೊಂದು ನೇಣಿಗೆ ಕೊರಳೊಡ್ಡಿರುವುದಾಗಿ ತಾನು ಬರೆದಿಟ್ಟಿರುವ 15 ಪುಟಗಳ ಡೆತ್ ನೋಟ್ ಮೂಲಕ ಬಹಿರಂಗವಾಗಿದೆ. ಮೂಲತ: ಫರಂಗಿಪೇಟೆಯ
ಉಡುಪಿ : ರಾಜ್ಯ ಸರ್ಕಾರದಿಂದ ಪಠ್ಯ ಬದಲಾವಣೆ ವಿಚಾರವಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರ ಯಾವಾಗಲೂ ವ್ಯಕ್ತಿಗಳ ಆಧಾರದಲ್ಲಿ ನಡೆಯುವುದಿಲ್ಲ. ಬದಲಾಗಿ ಸರ್ಕಾರ ನಡೆಯುವುದು ಶಾಸನದ ಆಧಾರದಲ್ಲಿ. ಒಂದು ಸರ್ಕಾರ ಮಾಡಿದ ನಿರ್ಧಾರವನ್ನು ಮತ್ತೊಂದು ಸರಕಾರ ಪರಿಶೀಲನೆ ಮಾಡದೆ ಬದಲು ಮಾಡುವುದು ಸರಿಯಲ್ಲ. ಸಾರ್ವಜನಿಕವಾಗಿ ಇಂತಹ ಬೆಳವಣಿಗೆಗಳು ಗೌರವ ತರುವುದಿಲ್ಲ. ಬನ್ನಂಜೆ ಗೋವಿಂದಾಚಾರ್ಯರ ಪಾಠವನ್ನು ವಾಪಸ್ಸು
ಬ್ರಹ್ಮಾವರ ಹಳೆ ಪೊಲೀಸ್ ಠಾಣೆ ಬಳಿ ಕಾರ್ಯನಿರ್ವಯಿಸುತ್ತಿದ್ದ ಬ್ರಹ್ಮಾವರ ತಾಲೂಕು ಕಛೇರಿ ಒಂದು ವಾರದಲ್ಲಿ ನೂತನವಾಗಿ ರಾಷ್ಟ್ರೀಯ ಹೆದ್ದಾರಿ 66 ಬಳಿ ನಿರ್ಮಾಣಗೊಂಡ ಮಿನಿ ವಿಧಾನ ಸೌಧಕ್ಕೆ ವರ್ಗಾವಣೆಯಾಗಲಿದೆ. ಚುನಾವಣಾ ಪೂರ್ವದಲ್ಲಿ ವಿವಿಧ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಮಿನಿವಿಧಾನ ಸೌಧ ಉದ್ಘಾಟನೆಗೊಂಡರೂ ಬಳಿಕ ನೀತಿ ಸಂಹಿತೆ ಜಾರಿಯಾದ ಬಳಿಕ ಕಂದಾಯ ಇಲಾಖೆಯ ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕಳೆದ ಕೆಲವು ದಿನದಿಂದ ಕಂದಾಯ




























