ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ವತಿಯಿಂದ ಮಂಗಳೂರು ಕ್ಲಬ್‍ನಲ್ಲಿ ಸದಸ್ಯರ ಸಭೆ ಯನ್ನು ನಡೆಸಲಾಯಿತು. ಎನ್‍ಆರ್‍ಐ ಉದ್ಯಮಿ ಶ್ರೀ ಮೈಕಲ್ ಡಿಸೋಜಾ ಅವರು ಮುಖ್ಯ ಭಾಷಣಕಾರರಾಗಿದ್ದರು. ಮೈಕಲ್ ಡಿಸೋಜರವರು ಮಾತನಾಡಿ ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ ವಿಪತ್ತುಗಳನ್ನು ನಿವಾರಿಸುವ ಬಗ್ಗೆ, ಪುತ್ತೂರಿನ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಂದಿಗೆ ಗ್ಯಾರಂಟಿ ಯೋಜನೆ ಕೊಡಬಾರದು ಎಂದು ಕಾಂಗ್ರೆಸ್ಸಿಗರು ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಕೇವಲ ಗೆಲ್ಲಿಸಿದ ಕ್ಷೇತ್ರಗಳಿಗೆ ಮಾತ್ರ ಗ್ಯಾರಂಟಿ ಕೊಡುವ ಕಾಂಗ್ರೆಸ್ ಮನಸ್ಥಿತಿ ಸರಿಯಲ್ಲ. ದ.ಕ.ಮತ್ತು ಉಡುಪಿ ಜಿಲ್ಲೆಯ ಜನತೆಯನ್ನು ಗ್ಯಾರಂಟಿ ಯೋಜನೆಯಿಂದ ವಂಚಿಸಬೇಡಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ
ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಸಂಪೂರ್ಣ ನಾಶವಾಗಿರುವ ಘಟನೆ ಹಾಸನ ತಾಲೂಕು ಕಾರ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಕುಂದೂರು ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೇಮಾವತಿ ಎಂಬುವರಿಗೆ ಸೇರಿದ ಮನೆ ಬೆಂಕಿಗೆ ಸಂಪೂರ್ಣವಾಗಿ ಸುಟ್ಟುಹೋಗಿದ್ದು , ಕುಟುಂಬಸ್ಥರು ದಿಕ್ಕಿಲ್ಲದೆ ನರಳುವಂತಾಗಿದೆ. ಮನೆಯಲ್ಲಿ ವಾಸವಾಗಿದ್ದ ಹೇಮವತಿ ಮತ್ತು ಅವರ ಇಬ್ಬರು ಮಕ್ಕಳು ಭರತ್ ಮತ್ತು ಶ್ರಾವಣಿ . ಮನೆಯಲ್ಲಿದ್ದ ದವಸ ಧಾನ್ಯ ಬಟ್ಟೆ ಸಂಪೂರ್ಣ ನಾಶವಾಗಿದೆ. ಘಟನೆ
ಬ್ರಹ್ಮಾವರ ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಸಭೆ ಧರ್ಮಾವರ ಆಡಿಟೊರಿಯಂನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಆರ್ ಮಾತನಾಡಿ ದೇಶದಲ್ಲಿ ಕೋರೋನ ಬಂದ ಬಳಿಕ ಗ್ಯಾರೇಜ ಮಾಲಕರ ಸಂಘದಂತೆ ಅನೇಕ ಕಾರ್ಮಿಕ ಸಂಘಟನೆಗಳು ಸರಕಾರದ ಕೆಲವು ಸವಲತ್ತು ಪಡೆಯುವಂತೆ ಆಗಿದೆ . ಮುಂದೆಯೂ ಕೂಡಾ ಇಲಾಖೆಯ ಸವಲತ್ತುಗಳನ್ನು ಸಂಘಟನೆಯ ಮೂಲಕ ಪಡೆದುಕೊಳ್ಳಿ ಎಂದರು. ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಮಹಾಂತೇಶ್ ಬ್ರಹ್ಮಾವರ
ದೆಹಲಿಯಲ್ಲಿ ನಡೆದ ಕ್ರೀಡಾಪಟುಗಳ ಮೇಲಿನ ಪೊಲೀಸ್ ದೌರ್ಜನ್ಯ ಕರಾಳ ದಿನ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡೆ, ಮಾಜಿ ಮೇಯರ್ ಕವಿತಾ ಸನಿಲ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮೋದಿ ಸರ್ಕಾರ ಹಾಗೂ ದೆಹಲಿ ರಾಜ್ಯ ಸರ್ಕಾರ ಕ್ರೀಡಾಪಟುಗಳ ಮೇಲೆ ದೌರ್ಜನ್ಯ ಮಾಡಿರುವುದು ಸರಿಯಲ್ಲ. ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ
ವಿಶ್ವಹಿಂದೂ ಪರಿಷತ್, ಭಜರಂಗದಳ ಕಾಪು ಪ್ರಖಂಡವತಿಯಿಂದ ಪಡುಬಿದ್ರಿಯ ಎರಡು ಚಿತ್ರಮಂದಿರಗಳಲ್ಲಿ ” ಕೇರಳ ಸ್ಟೋರಿ ” ಚಲನಚಿತ್ರ ವೀಕ್ಷಿಸಲು ಯುವತಿಯರಿಗೆ ಉಚಿತ ಅವಕಾಶ ಮಾಡಿಕೊಟ್ಟಿದ್ದು, ಇನ್ನೂರಕ್ಕೂ ಅಧಿಕ ಯುವತಿಯರು ಹಾಗೂ ಮಹಿಳೆಯರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ವೀಕ್ಷಣೆ ಮಾಡಿದ ಯುವತಿಯರು ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ನಮ್ಮ ಜೀವನದಲ್ಲೂ ಇಂಥಹ ಘಟನೆಗಳು ನಡೆಯ ಬಾರದು ಎಂದಾದರೆ ನಾವು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ ಎಂದರು.
ಮೂಡುಬಿದಿರೆ: ನೇತಾಜಿ ಬ್ರಿಗೇಡ್ (ರಿ.) 120 ನೇ ವಾರದ ಸ್ವಚ್ಛತಾ ಅಭಿಯಾನವು ಶ್ರೀ ಮಂಜುನಾಥ ಪ್ರೌಢ ಶಾಲೆ ಪ್ರಾಂತ್ಯ ಶಾಲೆಯಲ್ಲಿ ನಡೆಯಿತು. ಶಾಲಾ ಪ್ರಮುಖರಾದ ವಿನ್ಸೆಂಟ್, ಶಾಲಾ ಎಸ್ ಡಿ ಎಂ ಸಿ ಪ್ರಮುಖರಾದ ಜಿತೇಶ್ ಲಾಡಿ, ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಪದಾಧಿಕಾರಿಗಳಾದ ಆನಂದ ಕುಲಾಲ್, ಅಭಿಷೇಕ್ ಸಾಲಿಯಾನ್, ಶಶಿಕುಮಾರ್, ನಿತ್ಯಾನಂದ ಕೊಡಂಗಲ್ಲು, ಸಂದೇಶ್ ಕುಂದರ್, ದಯಾನಂದ ನಾಯ್ಕ್, ಪ್ರಸಾದ್, ನಿತ್ಯಾನಂದ,ಸಂತೋಷ್, ನಿತಿನ್ ಭಟ್ ,ಶರಣ್
ಉಡುಪಿ : ಈ ಬಾರಿ ಪೂರ್ವ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ರಾಜ್ಯದ ಹಲವು ಭಾಗಗಳು ಸೇರಿದಂತೆ ಉಡುಪಿ ಜಿಲ್ಲೆಗೂ ಬಿಸಿ ತಟ್ಟಿದೆ. ಆದ್ದರಿಂದ ಉಡುಪಿ ನಗರಸಭೆಯ ನೀರನ್ನೇ ಅವಲಂಬಿಸುವ ಸಂಕಷ್ಟ ಎದುರಾಗಿದೆ. ಆದರೆ ಇದೀಗ ಉಡುಪಿ ನಗರಸಭೆ ಕೂಡ ಸಮರ್ಪಕ ನೀರು ಪೂರೈಸಲು ವಿಫಲಗೊಂಡಿದೆ. ಆದರೆ ಉಡುಪಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಅವರ ನೇತೃತ್ವದಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಕಾರ್ಯ ಉಡುಪಿಯ ಕೊಡವೂರಿನಲ್ಲಿ ನಡೆಯುತ್ತಿದೆ. ಈ ಮೂಲಕ ತನ್ನ
ಮಣಿಪಾಲದ ವ್ಯಾಲಿ ವ್ಯೂ ನಲ್ಲಿ ಹಿಂದೂ ಎಕನಾಮಿಕ್ ಫೋರಮ್ ರಾಷ್ಟ್ರೀಯ ಮಟ್ಟದ ಸಮ್ಮೇಳನವು ಮೇ 28, 2023 ರ ಭಾನುವಾರದಂದು ಜರುಗಿತ್ತು. ಈ ಸಮ್ಮೇಳನದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಯಶ್ ಪಾಲ್ ಸುವರ್ಣ ಭಾಗವಹಿಸಿ, ಸಭೆಯನ್ನುದ್ದೇಶಿಸಿ ಮಾಡನಾಡಿ ಶುಭಹಾರೈಸಿದರು. ಸಮ್ಮೇಳನದಲ್ಲಿ 200 ಕ್ಕೂ ಅಧಿಕ ವ್ಯಾಪಾರೋದ್ಯಮಿಗಳು ಭಾಗವಹಿಸಿದ್ದು, ಹಿಂದೂ ಆರ್ಥಿಕತೆಯ ಅಭಿವೃದ್ದಿಗೆ ಹೊಸ ರೂಪ ಸಿಕ್ಕಿದೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ
ವಿಶ್ವಹಿಂದೂ ಪರಿಷತ್, ಭಜರಂಗದಳ ಕಾಪು ಪ್ರಖಂಡವತಿಯಿಂದ ಪಡುಬಿದ್ರಿಯ ಎರಡು ಚಿತ್ರಮಂದಿರಗಳಲ್ಲಿ ” ಕೇರಳ ಸ್ಟೋರಿ ” ಚಲನಚಿತ್ರ ವೀಕ್ಷಿಸಲು ಯುವತಿಯರಿಗೆ ಉಚಿತ ಅವಕಾಶ ಮಾಡಿಕೊಟ್ಟಿದ್ದು, ಇನ್ನೂರಕ್ಕೂ ಅಧಿಕ ಯುವತಿಯರು ಹಾಗೂ ಮಹಿಳೆಯರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ವೀಕ್ಷಣೆ ಮಾಡಿದ ಯುವತಿಯರು ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ನಮ್ಮ ಜೀವನದಲ್ಲೂ ಇಂಥಹ ಘಟನೆಗಳು ನಡೆಯ ಬಾರದು ಎಂದಾದರೆ ನಾವು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ ಎಂದರು.




























