ಮಂಗಳೂರಿನ ರುದ್ರ ಥೇಟರ್ ಪ್ರಸ್ತುತ ಪಡಿಸಿದ ಶೂದ್ರ ಶಿವ ನಾಟಕದ ಪಥಮ ಪ್ರದರ್ಶನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ನಡೆಯಿತು. ಶೂದ್ರ ಶಿವ ನಾಟಕದ ಪ್ರಥಮ ಪ್ರದರ್ಶನವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪರಿಚಯಿಸುವ ಈ
ಪುತ್ತೂರು:- ಕರ್ನಾಟಕ ರಾಜ್ಯದಲ್ಲಿ ಮುಂಬರಲಿರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆದರೂ ನಾವೆಲ್ಲರೂ ಪಕ್ಷ ಮುಖ್ಯ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಾಮಾಣಿಕವಾಗಿ ಗೆಲ್ಲಿಸಲು ಪ್ರಯತ್ನ ಮಾಡ್ತೇವೆ ಮತ್ತು ಸಂಘಟಿತರಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪಣತೊಟ್ಟಿದ್ದೇವೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಮಾಜಿ ಮಾಧ್ಯಮ ವಕ್ತಾರ ಜಿ.ಎ ಶಂಸುದ್ದೀನ್
ಪುತ್ತೂರಿನಲ್ಲಿ ಫೆ.10 ರಿಂದ ನಡೆಯುವ ಕೃಷಿಯಂತ್ರ ಮೇಳ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯುವ ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ವೇದಿಕೆಗೆ ಗುದ್ದಲಿಪೂಜೆ ಚಪ್ಪರ ಮುಹೂರ್ತ ಸೋಮವಾರ ನಡೆಯಿತು. ಪುತ್ತೂರು ಶಾಸಕಸಂಜಿವ ಮಠಂದೂರು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಬಿಜೆಪಿ ನಗರ ಮಂಡಲ
ಉಜಿರೆ, : ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಅಭಿವೃದ್ಧಿ ಮಾತ್ರ ಸುಸ್ಥಿರ ಅಭಿವೃದ್ಧಿ ಎಂದು ಪರಿಗಣಿಸಲ್ಪಡುತ್ತದೆ. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು ಎಂದು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಬಾಳ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ
ಉಜಿರೆ, ಫೆ.5: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರದ ಕಾರ್ಯಕ್ರಮಗಳು ಮುಂಜಾನೆ ಉದಯರಾಗದೊಂದಿಗೆ ಪ್ರಾರಂಭಗೊಂಡವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದ ಡಿ.ಬಿ. ಪ್ರಕಾಶ ದೇವಾಡಿಗ ಅವರು ಸ್ಯಾಕ್ಸೋಫೋನ್ ವಾದನದ ಮೂಲಕ ಭಕ್ತಿಭಾವದ
ಉಜಿರೆ, : ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಕಾಲೇಜಿನ ಕಲಾಕೇಂದ್ರದ ವಿದ್ಯಾರ್ಥಿಗಳು ‘ಕಲಾವೈಭವ’ ನೃತ್ಯದ ಮೂಲಕ ಕಲಾರಾಧಕರನ್ನು ರಂಜಿಸಿದರು. ಕಲಾಕೇಂದ್ರದ ಒಟ್ಟು 200 ಮಂದಿ ವಿದ್ಯಾರ್ಥಿಗಳು ತಂಡೋಪತಂಡವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕೇರಳ ಶೈಲಿಯ ಮೋಹಿನಿಯಾಟ್ಟಂ, ಶಿವತಾಂಡವ ನೃತ್ಯ, ಗುಜರಾತಿನ ಗರ್ಬಾ ದಾಂಡ್ಯ, ಕಥಕ್ ಹೀಗೆ ವಿವಿಧ ರೀತಿಯ
ಉಜಿರೆ, : ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಬೊಳುವಾರು ಇದರ ವತಿಯಿಂದ ತಾಳಮದ್ದಳೆ ನಡೆಯಿತು. ಭಾಸ್ಕರ ಬಾರ್ಯ ಅವರು ನಿರ್ದೇಶಿಸಿರುವ ‘ಯಕ್ಷಭ್ರಾತೃ’ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು. ಇವರು ಕಳೆದ 17 ವರ್ಷಗಳಿಂದ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಈ ತಂಡವು ಮಹಿಳೆಯರ ಭಾಗವತಿಕೆಯಿಂದಲೇ ಪ್ರಸಿದ್ಧಿ
ಉಜಿರೆ, : ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಗೀತಲಹರಿ’ ಸಂಗೀತ ಕಾರ್ಯಕ್ರಮವನ್ನು ಗಾಯಕಿ ಅನಸೂಯ ದೇವಸ್ಥಳಿ ಅವರು ನಡೆಸಿಕೊಟ್ಟರು. “ಮನವನ್ನು ತಣಿಸುವ ಮೋಹನಸೂತ್ರ”, “ಅವಳಿಲ್ಲಿಗೆ ಬಂದಾಗ”, “ಮಣ್ಣಿನಲಿ ಮಾಡಿರಲಿ ತನುವಿನಲಿ ನೀ ಕುಳಿತು”, “ಬಾರೋ ವಸಂತ”, “ಶೂದಷಚೈತ್ರದ ಸುಂದರಿ ನೀನು” ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆಯ
ಉಜಿರೆ, ಫೆ: ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಗೀತಲಹರಿ’ ಸಂಗೀತ ಕಾರ್ಯಕ್ರಮವನ್ನು ಗಾಯಕಿ ಅನಸೂಯ ದೇವಸ್ಥಳಿ ಅವರು ನಡೆಸಿಕೊಟ್ಟರು. “ಮನವನ್ನು ತಣಿಸುವ ಮೋಹನಸೂತ್ರ”, “ಅವಳಿಲ್ಲಿಗೆ ಬಂದಾಗ”, “ಮಣ್ಣಿನಲಿ ಮಾಡಿರಲಿ ತನುವಿನಲಿ ನೀ ಕುಳಿತು”, “ಬಾರೋ ವಸಂತ”, “ಶೂದಷಚೈತ್ರದ ಸುಂದರಿ ನೀನು” ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು. ತಬಲಾದಲ್ಲಿ ಗೌರವ್
ಮಂಗಳೂರು: ಮಂಗಳೂರಿನ ಶ್ರೀ ಕಾಲಭೈರವ ದೇವಸ್ಥಾನ ಸುವರ್ಣ ಕದಳೀ ಶ್ರೀ ಯೋಗೇಶ್ವರ ಮಠದ ಮಠಾಧೀಶರಾದ ರಾಜರಾಜೇಶ್ವರತಪೋನಿಧಿ ಶ್ರೀ 1008 ಶ್ರೀ ರಾಜಯೋಗಿ ನಿರ್ಮಲನಾಥಜೀ ಅವರ ಮಾರ್ಗದರ್ಶನದಲ್ಲಿ, ವೇದವಿದ್ವಾನ್ ದೇರೆಬೈಲು ವಿಠಲ್‌ದಾಸ್ ತಂತ್ರಿಗಳ ನೇತೃತ್ವದಲ್ಲಿ ಕದ್ರಿ ಸಿದ್ಧ ಪೀಠದೊಡೆಯ ಶ್ರೀ ಕಾಲಬೈರವ ದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಇಂದು ನಾಥ ಪಂಥದ ಸಂಪ್ರದಾಯದಂತೆ ವೈಧಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.ಇದೇ ಸಂದರ್ಭದಲ್ಲಿ ಶಿಖರ




























