Home Blog Left SidebarPage 684

ಪುತ್ತೂರು : ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ ಆರೋಪ

ಪುತ್ತೂರು: ಮತದಾರನ ಗುರುತಿನ ಚೀಟಿಯನ್ನು ಅನಧಿಕೃತವಾಗಿ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ನಡೆದಿದೆ. ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ

ಕೊರೊನಾಕ್ಕೆ ರಮ್ ಮದ್ದು ಎಂದಿದ್ದ ಕೌನ್ಸಿಲರ್ ರವಿಚಂದ್ರ ಗಟ್ಟಿ ಪಕ್ಷದಿಂದ ಅಮಾನತು

ಉಳ್ಳಾಲ: `ರಮ್ ಕುಡಿದು ಪೆಪ್ಪರ್ ಹಾಕಿ ಮೊಟ್ಟೆ ತಿಂದರೆ ಕೊರೊನಾ ದೂರವಾಗುತ್ತದೆ’ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿ ದೇಶಾದ್ಯಂತ ಸುದ್ಧಿಯಾದ ಉಳ್ಳಾಲ ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ ಇವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಆದೇಶ ಹೊರಡಿಸಿದೆ. ಮೊನ್ನೆ ನಡೆದ

ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಪುರಸ್ಕಾರ ಪ್ರಧಾನ : ಅಸೋಸಿಯೇಷನ್ ಲಾಂಛನ ಅನಾವರಣ

ಬೆಂಗಳೂರು, ಡಿ. 5: ರಾಜ್ಯ ವ್ಯಾಪ್ತಿಯ ಡಿಜಿಟಲ್ ಮಾಧ್ಯಮ ಸಂಘಟನೆ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್’ ಇದರ ಉದ್ಘಾಟನೆ, ಲಾಂಛನ ಅನಾವರಣ ಹಾಗೂ ವಾರ್ಷಿಕ ಮಾಧ್ಯಮ ಸಾಧನಾ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಬೆಂಗಳೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಚಿತ್ರನಟ, ಸಂಗೀತ ನಿರ್ದೇಶಕ ವಿ. ಮನೋಹರ್, ವಿಜಯ ಕರ್ನಾಟಕ ಆನ್ ಲೈನ್ ಎಡಿಟರ್ ಪ್ರಸಾದ್ ನಾಯಕ್, ‘ಡಿ.ಎಕ್ಸ್

ನೀರಿನಲ್ಲಿ ಬಂಡಿ ಉತ್ಸವ ನೆರವೇರುವುದರೊಂದಿಗೆ ಕುಕ್ಕೆ ಜಾತ್ರೆ ಸಂಪನ್ನ

ಬೇರೆಲ್ಲೂ ಕಾಣದ ವಿಶಿಷ್ಠ ಉತ್ಸವ : ಇಳಿದ ಕೊಪ್ಪರಿಗೆ: ಮಹಾಸಂಪ್ರೋಕ್ಷಣೆ : ಯಶಸ್ವಿಯನೀರಾಟ : ಚಿಣ್ಣರ ಸಂಭ್ರಮ ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವವು ಸೋಮವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊoಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿದಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ

ವಕೀಲರ ಮನೆ ಪ್ರವೇಶ ಮಾಡಿ ಮನೆಯಿಂದ ಎಳೆದುಕೊಂಡು ಹೋಗಿ  ದೌರ್ಜನ್ಯ ಆರೋಪ: ಮಂಗಳೂರು ವಕೀಲರ ಸಂಘ ಖಂಡನೆ

ದಿನಾಂಕ 3.12.2022 ರಂದು ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಪೋಲೀಸರು ನಡೆಸಿದ ದೌರ್ಜನ್ಯವನ್ನು ಮಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ. ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದು ಎದುರುದಾರರ ವಿರುದ್ದ ಪ್ರತಿಬಂದಕಾಜ್ಞೆ ಇದ್ದೂ ಕೂಡ ಎದುರುದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಯುವ ವಕೀಲರ ಮೇಲೆ F. I.R ದಾಖಲಿಸಿ ರಾತೋರಾತ್ರಿ ವಕೀಲರ ಮನೆ

ಡಾ. ನೂರ್ ಸಮದ್ ಅಬ್ಬಲಗೆರೆಯವರ ‘ವಿಸ್ಮಯ ಕೀಟ ಪ್ರಪಂಚ’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2021ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಸಂಶೋಧಕ, ಕೃಷಿ ಅಧಿಕಾರಿ, ಕವಿ ಡಾ. ನೂರ್ ಸಮದ್ ಅಬ್ಬಲಗೆರೆಯವರ ‘ವಿಸ್ಮಯ ಕೀಟ ಪ್ರಪಂಚ’ ಕೃತಿ ಆಯ್ಕೆಯಾಗಿದೆ. ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಂಶೋಧನಾ ಕೇಂದ್ರಗಳಲ್ಲಿ ವಿಜ್ಞಾನಿಯಾಗಿ, ವಿದೇಶದ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ

ಕರ್ನಾಟಕ ರಾಜ್ಯದಲ್ಲೇ ಮಾದರಿಯಾದ ಹರೇಕಳ ಗ್ರಾಮ ಪಂಚಾಯತ್ ಉದ್ಘಾಟನೆ,ಧ್ವಜಾರೋಹಣ

ಕರ್ನಾಟಕ ರಾಜ್ಯದಲ್ಲಿಯೇ ಮಾದರಿಯಾಗಿ ಹರೇಕಳ ಗ್ರಾಮ ಪಂಚಾಯತ್ ಕಟ್ಟಡವು ನಿರ್ಮಾಣವಾಗಿದ್ದು ಮಾನ್ಯ ಶಾಸಕರಾದ ಯು.ಟಿ.ಖಾದರ್ ರವರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆಗೊಂಡಿತು. ಹರೇಕಳ ಪಂಚಾಯತ್ ನೂತನ ಕಟ್ಟಡದ ಹೊರಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಸಿಬ್ಬಂದಿ ವರ್ಗ,ಊರ ಹಿರಿಯ ನಾಗರಿಕರು,ಶ್ರೀ ರಾಮಕೃಷ್ಣ ಶಾಲೆ ಹರೇಕಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವರ್ಗದವರ ಸಮ್ಮುಖದಲ್ಲಿ ಶಾಸಕ ಯು.ಟಿ.ಖಾದರ್ ಧ್ವಜಾರೋಹಣ ನೆರವೇರಿಸಿದರು. ಇಂದು ಸಂಜೆ ರಾಜ್ಯ ಮಟ್ಟದ

ಉಜಿರೆ ಎಸ್.ಡಿ.ಎಂ ಕಾಲೇಜಿನ ವಾಣಿಜ್ಯ ವಿಭಾಗದಿಂದ ʻಉದಯೋತ್ಸವʼ

ʻತನ್ನ ಪ್ರತೀ ತರಗತಿಯಲ್ಲೂ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಪ್ರೇರಕ ಶಕ್ತಿಯಾಗಿ, ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಅತ್ಯುತ್ತಮ ಶಿಕ್ಷಕ ಡಾ. ಉದಯಚಂದ್ರ ಪಿ.ಎನ್ ಎಂದು ಎಸ್.ಡಿ.ಎಂ ಕಾಲೇಜಿನ ನೂತನ ಪ್ರಾಂಶುಪಾಲ ಡಾ.ಜಯಕುಮಾರ್‌ ಶೆಟ್ಟಿ ಹೇಳಿದರು.ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಪಿ.ಎನ್ ಉದಯಚಂದ್ರ ಅವರ ಸೇವಾನಿವೃತ್ತಿ ಹಿನ್ನೆಲೆಯಲ್ಲಿ ವಾಣಿಜ್ಯ ವಿಭಾಗ ಪದವಿ

ಕುಂಜಿಬೆಟ್ಟುವಿನ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ : ಶ್ರೀ ಚಂಡಿಕಾ ಹೋಮ ಮತ್ತು ನಾಗಮಂಡಲ ಸೇವೆ

ಉಡುಪಿಯ ಕುಂಜಿಬೆಟ್ಟುವಿನ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಷಷ್ಠಿ, ಶ್ರೀ ಚಂಡಿಕಾ ಹೋಮ ಮತ್ತು ನಾಗಮಂಡಲ ಸೇವೆಯು ವಿಜೃಂಭಣೆಯಿಂದ ನಡೆಯಿತು. ಅಂದು ಬೆಳಿಗ್ಗೆ ಷಷ್ಠಿ ಮಹೋತ್ಸವ – ಶ್ರೀ ಚಂಡಿಕಾ ಹೋಮಾ ನಡೆದು ರಾತ್ರಿ ವೇಳೆ ನಾಗಮಂಡಲ ಸೇವೆ, ನಾಗಪಾತ್ರಿಯಾದ ಎಸ್. ಗೋಪಾಲಕೃಷ್ಣ ಸಾಮಗ, ಯು. ಮೋಹನ್ ಭಟ್ ಮತ್ತು ಸಹೋದರ ಎಸ್. ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ನೆರವೇರಿತು. ಮುಸ್ಸಂಜೆಯ ಸಮಯದಲ್ಲಿ ಭಜನೆ, ವರ್ಷಾ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನಿಲುವು ಅವೈಜ್ಞಾನಿಕ, ಖಂಡನೀಯ : ಹೋರಾಟ ಸಮಿತಿ

ಇದೀಗ ಮುಚ್ಚಲಾಗಿರುವ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕವನ್ನು ಹೆಜಮಾಡಿ ನವಯುಗ್ ಟೋಲ್ ಪ್ಲಾಜಾದಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶದ ಕುರಿತು ಉಡುಪಿ ಜಿಲ್ಲಾಡಳಿತ ನಡೆಸಿದ ಸಭೆಯ ತೀರ್ಮಾನದ ಕುರಿತಂತೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ನೀಡಿರುವ ಮಾಹಿತಿ ಕುರಿತು ಹೋರಾಟ ಸಮಿತಿ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತದೆ. ಹೆಜಮಾಡಿ ಟೋಲ್ ಗೇಟ್ ನಲ್ಲಿ ಉಡುಪಿ ನೊಂದಾವಣೆಯ ಕೆ ಎ 20 ವಾಹನಗಳಿಗೆ ಮಾತ್ರ ಸುರತ್ಕಲ್ ಟೋಲ್ ಸುಂಕದಿಂದ ಪೂರ್ಣ