Home Blog Left SidebarPage 708

ಜೆಸಿಐ ಬಂಟ್ವಾಳದ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಛಾಯಾಗ್ರಾಹಕ ರಾಜೇಂದ್ರ ಅವರು ಆಯ್ಕೆ

ಬಂಟ್ವಾಳ: ಜೆಸಿಐ ಬಂಟ್ವಾಳದ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಸಿ. ರೋಡಿನ ವರ್ಣ ಸ್ಟುಡಿಯೋದ ಮಾಲಕ, ಸೃಜನಶೀಲ ಛಾಯಾಗ್ರಾಹಕ ರಾಜೇಂದ್ರ ಅವರು ಆಯ್ಕೆಯಾಗಿದ್ದಾರೆ. ಜೆಸಿಐ ಬಂಟ್ವಾಳದ ಅಧ್ಯಕ್ಷ ರೋಷನ್‌ರೈ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ನೂತನ ಕಾರ್ಯದರ್ಶಿಯಾಗಿ ರಶ್ಮಿ ವಚನ್ ಶೆಟ್ಟಿ, ಕೋಶಾಧಿಕಾರಿಯಾಗಿ

ಉಳ್ಳಾಲ : ಬಸ್ ಕ್ಲೀನರ್ ನಿಂದ ವೈದ್ಯೆಯೊಂದಿಗೆ ಅಸಭ್ಯ ವರ್ತನೆ

ಉಳ್ಳಾಲ: ಬೆಂಗಳೂರು ನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕೆಗೆ ಬಸ್ ಕ್ಲೀನರ್ ವೊಬ್ಬ ಪ್ಯಾಂಟ್ ನ ಜಿಪ್ ಓಪನ್ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆ ವಿವರ: ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ದಲ್ಲಿರುವ ಮಹಿಳಾ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಐಡಿಯಲ್ (KA51 AB 3649) ಬಸ್‌ನಲ್ಲಿ ಪ್ರಯಾಣ

ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಚಾಲಕ ಕುಸಿದು ಬಿದ್ದು ಗಂಭೀರ

ಸುಳ್ಯ: ಆಟೋ ಚಾಲಕರೊಬ್ಬರು ಇದ್ದಕಿದ್ದಂತೆ ಪಾಶ್ರ್ವವಾಯುಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ನಗರದಲ್ಲಿ ನಡೆದಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಹೇಮನಾಥ್ ಆರ್.ಬಿ.(32) ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ಚಾಲಕ. ಇವರು ಸುಳ್ಯ ತಾಲೂಕಿನ ದೊಡ್ಡಡ್ಕದ ರಾಜರಾಂಪುರದ ನಿವಾಸಿಯಾಗಿದ್ದಾರೆ. ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಸಂಪಾಜೆಯಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ತಮ್ಮ ಆಟೋದಲ್ಲಿ ಕರೆದುಕೊಂಡು

ನ.19 ಮತ್ತು 20ರಂದು ಕನ್ನಡ ಶಾಲಾ ಮಕ್ಕಳ ಹಬ್ಬ

ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ಕುರಿತ ಅರಿವನ್ನು ವಿಸ್ತರಿಸುವ ಉದ್ದೇಶದಿಂದ ಕೇಶವ ಸ್ಮøತಿ ಸಂವರ್ಧನ ಸಮಿತಿಯು ಕನ್ನಡ ಶಾಲಾ ಮಕ್ಕಳ ಹಬ್ಬವನ್ನು ನವೆಂಬರ್ 19 ಮತ್ತು 20ರಂದು ನಗರದ ಸಂಘನಿಕೇತನದಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶದ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತಿ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಹೇಳಿದರು. ಅವರು ನಗರದ ಓಶಿಯನ್

ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ನ.12ರಂದು ಜನಾಗ್ರಹ ಸಭೆ

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ನ.12ರಂದು ಜನಾಗ್ರಹ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲಾಧ್ಯಕ್ಷ ಲಾರೆನ್ಸ್ ಡಿಸೋಜ ಹೇಳಿದರು. ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಅಂದು ಅಪರಾಹ್ನ 3 ಗಂಟೆಗೆ ನಗರದ ಕೂಳೂರಿನ ಕೆಐಒಸಿಎಲ್ ಮುಂಭಾಗದಲ್ಲಿ ಈ ಜನಾಗ್ರಹ ಸಭೆ ನಡೆಯಲಿದೆ ಎಂದರು.ಘಟಕದ

ಮಂಗಳೂರು ವಿವಿ ಕಾಲೇಜ್ : ಮಾನವ ಕಳ್ಳ ಸಾಗಾಣಿಕೆ ಕುರಿತು ಕಾರ್ಯಾಗಾರ

ಮಂಗಳೂರು ವಿಶ್ವ ವಿದ್ಯಾಲಯದ ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಕ್ಲಬ್ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ವಿರೋಧಿ: ಕಾಳಜಿ ಹಾಗೂ ಕಾರ್ಯಯೋಜನೆ ಎಂಬ ಕಾರ್ಯಾಗಾರ ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜ್‌ನ ರವೀಂದ್ರ ಕಲಾಭವನದಲ್ಲಿ ಬುಧವಾರ ನಡೆಯಿತು. ಮಂಗಳೂರು ಉತ್ತರ ಉಪವಿಭಾಗ ಸಹಾಯಕ ಆಯುಕ್ತರಾದ ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತದಲ್ಲಿ ಇರುವಷ್ಟು ಕಾನೂನು ಬೇರೆಲ್ಲಿಯೂ ಇಲ್ಲ ಆದರೆ ಸರಿಯಾಗಿ ಬಳಸಿಕೊಳ್ಳಲು ಆಗುತ್ತಿಲ್ಲ, ಹೊಸ ಕಾನೂನು

ಮಂಗಳೂರು : ಬುರ್ಖಾ ಧರಿಸಿದ ಮಹಿಳೆ ಸಹಿತ ತಂಡದಿಂದ ವಿದ್ಯಾರ್ಥಿಗೆ ಗಂಭೀರ ಹಲ್ಲೆ

ಮಂಗಳೂರು: ಮಂಗಳವಾರ ಸಂಜೆ ಮಂಗಳೂರು ಹೊರ ವಲಯದ ಅಡ್ಯಾರ್ ನಲ್ಲಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಬಸ್ ನಿಲ್ದಾಣದಲ್ಲಿ ಬುರ್ಖಾ ಧರಿಸಿದ ಮಹಿಳೆ ಸಹಿತ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಬರಕ ಇಂಟರ್ ನ್ಯಾಷನಲ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಸಭಾನ್ ಎಂದು ತಿಳಿದುಬಂದಿದೆ.ಮಂಗಳೂರು ಖಾಸಗಿ ಆಸ್ಪತ್ರೆಗೆ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು

ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು. ವಿಧಾನಪರಿಷತ್‍ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರು ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಹಿಂದೂ ಶಬ್ಧದ ಬಗ್ಗೆ ಬುದ್ದಿಗೇಡಿ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಹಿಂದೂ ವಿರೋಧಿ ಮನೋಸ್ಥಿತಿ ಹೊಂದಿದೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಜಿಲ್ಲಾ ಪ್ರಧಾನ

ಪಡುಬಿದ್ರೆ – ಗ್ಯಾಸ್ ಪೈಪ್ ಅಳವಡಿಕೆಯಲ್ಲಿ ತಾರತಮ್ಯ : ಬಡವರ ಕಟ್ಟಡ ಧ್ವಂಸ

ಯಾವುದೇ ರೀತಿಯಲ್ಲಿ ಕರುಣೆ ತೋರಿಸದೆ ಹೆದ್ದಾರಿ ಇಕ್ಕೆಲಗಳಲ್ಲಿ ಗ್ಯಾಸ್ ಪೈಪ್ ಅಳವಡಿಸುತ್ತಿರುವ ಗುತ್ತಿಗೆದಾರ ಬಡಪಾಯಿಗಳ ಕಟ್ಟಡಕ್ಕೆ ಜೆಸಿಬಿ ಹತ್ತಿಸಿ ದ್ವಂಸ ನಡೆಸಿದ್ದು, ಇದೀಗ ಸಿರಿವಂತರ ಮೇಲಿನ ಕರುಣೆಯಿಂದಾಗ ಹೆದ್ದಾರಿಗೆ ಅತೀ ಸಮೀಪ ವಿರುವ ಮನೆಗಳನ್ನು ಉಳಿಸಲು ಭೂಗತ ಪೈಪ್ ಲೈನ್ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಈ ಕಾಮಗಾರಿಯಿಂದ ತೊಂದರೆ ಅನುಭವಿಸಿದ ಸಂತ್ರಸ್ತರು, ಹೆದ್ದಾರಿಗೆ ಬಹಳ ದೂರವಿದ್ದರೂ ಬಡಪಾಯಿಗಳಾದ ನಮ್ಮ

ಸತೀಶ್ ಜಾರಕಿಹೊಳಿ ಹಿಂದೂ ವಿರುದ್ಧದ ಹೇಳಿಕೆಗೆ ಖಂಡನೆ : ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ

ಪುತ್ತೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ವಿರುದ್ಧದ ಹೇಳಿಕೆಯ ಮೂಲಕ ಕಾಂಗ್ರೆಸ್ ಮಾನಸಿಕತೆ ಜಗತ್ತಿಗೇ ಗೊತ್ತಾಗಿದೆ. ಇಂತಹ ದ್ರೋಹಿಗಳ ಮಂಪರು ಪರೀಕ್ಷೆ ಮಾಡಬೇಕು. ಇದರ ಹಿಂದಿನ ಉದ್ದೇಶ, ಮುಖಗಳ ಕುರಿತು ತನಿಖೆ ಆಗಬೇಕು ಎಂದು ರಾಜ್ಯ ಗೃಹ ಸಚಿವರಿಗೆ ಆಗ್ರಹಿಸುವುದಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ಪುತ್ತೂರು ಬಿಜೆಪಿ ಹಾಗೂ