Home Blog Left SidebarPage 772

ಕಾರ್ಕಳ:ಕೆಲವೆಡೆ ಬೀಸಿದ ಸುಂಟರ ಗಾಳಿ, ಹಲವು ಮನೆಗಳಿಗೆ ಹಾನಿ

ಕಾರ್ಕಳ: ಕಾರ್ಕಳದ ದುರ್ಗಾ ಗ್ರಾಮದ ಕುಕ್ಕಜ ಪಲ್ಕೆ ಎಂಬಲ್ಲಿ ಬೀಸಿದ ಸುಂಟರಗಾಳಿಗೆ ರಿಯಾಜ್ ಎಂಬವರ ಮನೆ ಹಂಚು ಹಾಗೂ ಚಾವಣಿ ಹಾರಿ ಹೋಗಿ ಸುಮಾರು ಐವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ. ಅದಲ್ಲದೆ ಸಾಕಿದ ಕುರಿಯ ಮೇಲೆ ಚಾವಣಿ ತಗಡು ಬಿದ್ದು ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಕುರಿ ಸಾವನಪ್ಪಿದೆ. ಅದೇ ರೀತಿ ಜಹೀರ್ ಎಂಬವರ ಮನೆ ಚಾವಣಿ ಹಾರಿ ಹೋಗಿ ಸುಮಾರು

ಜಿಲ್ಲಾ ಮಟ್ಟದ ಕರೋಕೆ ಸಂಗೀತ ರಿಯಾಲಿಟಿ ಶೋ ಸ್ಪರ್ಧೆ : ಬಂಟ್ವಾಳದ ಸಾತ್ವಿಕ್ ವಿನ್ನರ್

ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಜೇಸಿ ಸಪ್ತಾಹದಂಗವಾಗಿ ನಿಶ್ಮಿತಾ ಪ್ಯಾರಡೈಸ್‍ನಲ್ಲಿ ನಡೆದ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ಕರೋಕೆ ಸಂಗೀತ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಬಂಟ್ವಾಳದ ಸಾತ್ವಿಕ್ ವಿನ್ನರ್ ಆಗಿ ಮೂಡಿ ಬಂದರು. ಹೆಬ್ರಿಯ ಸಂದೀಪ್ ರನ್ನರ್ ಅಪ್ ಹಾಗೂ ಮಂಗಳೂರಿನ ಅಭಿನವ್ ಎಸ್. ಭಟ್ ತೃತೀಯ ಬಹುಮಾನ ಗಳಿಸಿದರು. ರವಿ ಮಿಜಾರು, ಮುರಾರಿ ರಾವ್ ಹೊಸಬೆಟ್ಟು ಹಾಗೂ ಅನುಷಾ ಉಡುಪಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಸಂಜೆ

19ನೇ ರಾಜ್ಯಮಟ್ಟದ ಕರಾಟೆ ಕೆಲರಾಯ್ ರೆಡ್‍ಕ್ಯಾಮೆಲ್‍ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ : ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಎಂಕೆ ಅನಂತರಾಜ್ ಕಾಲೇಜು ಓಫ್ ಫಿಸಿಕಲ್ ಎಜುಕೇಶನ್ ಹಾಗೂ ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸೆಂಟರ್ ಜಂಟಿಯಾಗಿ ಸಮಾಜಮಂದಿರದಲ್ಲಿ ಆಯೋಜಿಸಿದ 19ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕೆಲರಾಯ ರೆಡ್ ಕ್ಯಾಮಲ್ ಇಂಗ್ಲಿಷ್ ಮೀಡಿಯಂ ಶಾಲೆಯು ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿದೆ. ಅಡ್ಯಾರ್ ಕಣ್ಣೂರಿನ ಬರಕ ಇಂಟರ್ನಾಷನಲ್ ಶಾಲೆಯು ತಂಡ ರನ್ನರ್ಸ್ ಗೆದ್ದುಕೊಂಡಿದೆ. ತೃತೀಯ ಸ್ಥಾನವನ್ನು

ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ : ಗೃಹ ನಿರ್ಮಾಣಕ್ಕೆ ರೂ 15 ಲಕ್ಷ ಸಾಲ

ಮೂಡುಬಿದಿರೆ : ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ಸಿ)ಯು 2021-22ನೇ ಸಾಲಿನಲ್ಲಿ ರಲ್ಲಿ ಹದಿಮೂರು ಲಕ್ಷದ ಎರಡು ಸಾವಿರದ ಐನೂರ ಅರವತ್ತ ಒಂಭತ್ತು ರಷ್ಟು ಲಾಭಾಂಶವನ್ನು ಹೊಂದಿರುತ್ತದೆ. ಈ ಸಾಲಿನ ಸದಸ್ಯರಿಗೆ ಶೇ 12 ಡಿವಿಡೆಂಡ್ ನೀಡಲು ಆಡಳತ ಮಂಡಳಿ ಶಿಫಾರಸ್ಸು ಮಾಡಿದೆ ಹಾಗೂ ಈ ಹಿಂದೆ ಸಂಘದ ಸದಸ್ಯರುಗಳಿಗೆ ಮನೆ ರಿಪೇರಿಗಾಗಿ ರೂ ಲಕ್ಷವನ್ನು 5 ನೀಡುತ್ತಿತ್ತು ಇದೀಗ ಈ ವರ್ಷದಿಂದ ನಮ್ಮ ಗ್ರಾಹಕರಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಮನೆ

ಟೋಲ್‍ಗೇಟ್ ಹೋರಾಟ ಸಮಿತಿಯಿಂದ ಸಾಮೂಹಿಕ ಧರಣಿ ಆರಂಭ

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು. ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಟೋಲ್ ಗೇಟ್ ನಿಂದ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಪಿ. ಟಿ .ಪ್ರಕಾಶ್ ಶೆಟ್ಟಿ ವಿಧಿವಶ

ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ,'' ಖ್ಯಾತ ನಿರೂಪಕ, ಕ್ರೀಡಾಭಿಮಾನಿ, ಕ್ರೀಡಾ ನಿರೂಪಕ ,ಪ್ರತಿಭಾನ್ವಿತ ಯಕ್ಷಗಾನ ಕಲಾವಿದ, ಆಕಾಶವಾಣಿ ಕಲಾವಿದ, ಉತ್ತಮ ವಾಗ್ಮಿ ಹಾಗೂ ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ .ಟಿ ಪ್ರಕಾಶ್ ಶೆಟ್ಟಿ ಬೆಳಗೋಡು ಅಸ್ತಂಗತರಾಗಿದ್ದಾರೆ.ಹಲವಾರು ಸಾಧನೆಗಳ ಬೆನ್ನತ್ತಿ ಹಾಗೂ ಕ್ರೀಡಾಭಿಮಾನಿಗಳ ನಿಲುವನ್ನು ತನ್ನತ್ತ ಸೆಳೆದುಕೊಂಡು ಜಿಲ್ಲೆಯಲ್ಲಿಯೇ ಅತ್ಯುತ್ತಮ ನಿರೂಪಕ ಎಂದು

ಕಮರಿಗೆ ಉರುಳಿದ ರಿಕ್ಷಾ : ಚಾಲಕ ಮೃತ್ಯು

ಉಳ್ಳಾಲ: ರಿಕ್ಷಾ ಕಮರಿಗೆ ಉರುಳಿ ಚಾಲಕ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಸಮೀಪದ ಪಾನೀರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ ಆನಂದ್ ಸಪಲ್ಯ (70)ಮೃತರು. ಕೋಟೆಕಾರು ರಿಕ್ಷಾ ಪಾಕ್9ನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಅವರು ನಿನ್ನೆ ರಾತ್ರಿ ದೇರಳಕಟ್ಟೆ ಕಡೆಗೆ ಬಾಡಿಗೆಗೆ ತೆರಳಿ ವಾಪಸ್ಸಾಗುತ್ತಿದ್ದಾಗ ಪಾನೀರು ಅಸಿಸ್ಸಿ ಶಾಲೆ ಬಳಿ ಕಮರಿಗೆ ಉರಳಿ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ.ಮೃತರು ಪತ್ನಿ ಪುತ್ರ

ಸೋಮೇಶ್ವರ : ಸಿ.ಸಿ.ಟಿವಿ ಪುಡಿಗೈದ ಮರಳು ಕಳ್ಳರ ಬಂಧನ

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹಾಕಿದ್ದ ಸಿಸಿಟಿವಿ ಮತ್ತು ತಡೆಬೇಲಿಯನ್ನು ಧ್ವಂಸಗೈದ ನಾಲ್ವರು ಆರೋಪಿಗಳನ್ನು ,ಬಳಸಿದ್ದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಬಂಧಿತರನ್ನು ಮಡ್ಯಾರ್ ಸಾಯಿನಗರ ನಿವಾಸಿ ಸೂರಜ್, ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್, ತಲಪಾಡಿ ನಿವಾಸಿ ಅಖಿಲ್, ಸೋಮೇಶ್ವರ ಮೂಡಾ ನಿವಾಸಿ ಪ್ರಜ್ವಲ್ ಬಂದಿತರಾಗಿದ್ದು, ಕೃತ್ಯಕ್ಕೆ ಬಳಸಿದ್ದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೋಮೇಶ್ವರ

ಪಡುಬಿದ್ರಿ ಕೆಪಿಎಸ್ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ : ಪರಿಶೀಲನೆ

ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಡುಬಿದ್ರಿಯ ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಮೂಲಸೌಕರ್ಯಗಳಿಲ್ಲದೆ ನೆಲದಲ್ಲಿ ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಇದೆ. ಅಲ್ಲದೆ ಈ ಶಾಲೆಯ ಕಟ್ಟಡ ತೀರ ಹಳೆಯದಾಗಿದ್ದು, ನಾದುರಸ್ಥಿಯಲ್ಲಿದೆ. ಕೂಡಲೇ ಸೂಕ್ತ ಹೊಸ ಕಟ್ಟಡವನ್ನು ರಚಿಸುವಂತೆ ಆಗ್ರಹಿಸಿ ಸಾಮಾಜಿಕ

ಸುರತ್ಕಲ್ ಟೋಲ್‍ಗೇಟ್ ತೆರವಿಗೆ ದಿನಾಂಕ ಘೋಷಣೆಗೆ ಆಗ್ರಹಿಸಿ ಸೆ.13ರಂದು ಧರಣಿ

ಟೋಲ್‍ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸುರತ್ಕಲ್ ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ಸೆ.13ರಂದು ಎನ್‍ಐಟಿಕೆ ಸಮೀಪ ಇರುವ ಸುರತ್ಕಲ್ ಟೋಲ್ ಗೇಟ್ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಸಾಮೂಹಿಕ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಟೋಲ್‍ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್