ಅಮ್ಮ ಕಲಾವಿದರು ಬಹರೈನ್ ಅರ್ಪಿಸುವ ಸಂಗೀತ ಗಾನ ಸಂಭ್ರಮ 22 ಕಾರ್ಯಕ್ರಮದ ಮುಹೂರ್ತ ಪೂಜೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಆಗಸ್ಟ್ 19ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ನೆರವೇರಿತು. ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಮೋಹನದಾಸ್ ರೈ ಎರುಂಬು ಸಾರಥ್ಯದಲ್ಲಿ ನಡೆಯಲಿರುವ ಈ ಸಂಗೀತ ಕಾರ್ಯಕ್ರಮದಲ್ಲಿ
ಒಡವೆ ಕಳ್ಳತನ ಸಹಿತ ವಾಹನಗಳ ಕಳ್ಳತನ ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕದೀಮ ಕಳ್ಳರಿಬ್ಬರನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷರ ಹಾಗೂ ವೃತ ನಿರೀಕ್ಷಕರ ತಂಡ ಬಂಧಿಸಿದೆ. ಬಂಧಿತರ ಮೇಲೆ ರಾಜ್ಯಾದ್ಯಂತ ಬಹಳಷ್ಟು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮೂಲತಃ ಬಜಪೆ ನಿವಾಸಿ ಇದೀಗ ಮೂಳೂರುಎಸ್.ಎಸ್. ರಸ್ತೆಯ ಶ್ರೀ ಸಾಯಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ವಾಜೀದ್ ಜೆ.(25) ಹಾಗೂ ಉಡುಪಿ ಕಡಿಯಾಳಿ ಆಚಾರ್ಯ ರಸ್ತೆಯ ಬಾಡಿಗೆ ಮನೆ ನಿವಾಸಿ ಶಹನಾಜ್ (32)
ಮೂಡುಬಿದಿರೆ: ಯಕ್ಷಗಾನ ಶೈಲಿಯ ಕೃಷ್ಣ ಪರಂಪರೆಯ ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವವು ಮೂಡುಬಿದಿರೆಯಲ್ಲಿ ಪೇಟೆಯಲ್ಲಿ ಶುಕ್ರವಾರ ನಡೆಯಿತು. ಪೇಟೆಯ ಬೀದಿಯುದ್ದಕ್ಕೂ ನೂರಾರು ಮಡಿಕೆಗಳು ಕಟ್ಟಿ, ಅವುಗಳನ್ನು ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿ ಚಂದ್ರಶೇಖರ್ ಮಳಲಿ ಅವರು ಒಡೆಯುವ ಸಂಭ್ರಮಕ್ಕೆ ಊರ ಪರವೂರಿನ ಸಾವಿರಾರು ಮಂದಿ ಭಕ್ತಾಧಿಗಳು ಸಾಕ್ಷಿಯಾದರು. ಪೇಟೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಮಿ, ಮೊಸರು ಕುಡಿಕೆ ಉತ್ಸವಕ್ಕೆ
ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ತಯಾರಿದ್ದ ಈ ಕಾಲಘಟ್ಟದಲ್ಲಿ, ಯಾವುದೋ ಕುಟುಂಬದ ಪರಿಚಯವೇ ಇಲ್ಲದ ಎರಡು ತಿಂಗಳ ಮಗುವಿನ ಚಿಕಿತ್ಸಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಕಟಪಾಡಿ ಪ್ರೇಂಡ್ಸ್ ಸಂಸ್ಥೆಯ ಸದಸ್ಯರು ಹುಲಿವೇಷ ಹಾಕಿ ಮಾನವೀಯತೆ ಭೂಮಿಯಲ್ಲಿ ಇನ್ನೂ ಸತ್ತಿಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ. ಹುಲಿವೇಷ ಎಂದರೆ ಬೇರೆ ವೇಷಗಳಂಥಲ್ಲ…ಇದಕ್ಕೆ ಅದರದ್ದೇ ಆದ ರೀತಿ ರಿವಾಜುಗಳಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯುವುದೇ ಈ ಹುಲಿವೇಷ. ಬಣ್ಣ ಹಚ್ಚುವ ಮುನ್ನ
ಪುತ್ತೂರು: ಪುತ್ತೂರಿನ ವಿವೇಕಾನಂದ ಶಿಶು ಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿಯ ವತಿಯಿಂದ ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ನಡೆಯುವ `ಶ್ರೀಕೃಷ್ಣ ಲೋಕ’ 24ನೇ ವರ್ಷದ ಕಾರ್ಯಕ್ರಮವು ಜರುಗಿತು. ಬೆಳಿಗ್ಗೆ ಮಕ್ಕಳಿಂದ ಪ್ರಾರ್ಥನೆ ನಡೆದ ಬಳಿಕ ಕೃಷ್ಣ, ರಾಧೆಯರ ನೊಂದಾವಣೆಯು ಪ್ರಾರಂಭಗೊಂಡಿತು. ಬಳಿಕ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಭಜನೆ ಜರುಗಿತು. ನಂತರ ತೊಟ್ಟಲ ಸಂಭ್ರಮದ ಮಗುವಿನ
ನಮ್ಮ ಆಡಳಿತದ ಅವಧಿಯಲ್ಲಿ ಹತ್ಯೆ ನಡೆದಿದೆ ನಿಜ.ಆದರೆ ಅಪರಾಧಿಗಳು ಬಿಜೆಪಿ ಕಡೆಯವರಾಗಿದ್ದರು. ಕಾಂಗ್ರೆಸ್ ಸಾಮರಸ್ಯವನ್ನು ಬಯಸುವ ಪಕ್ಷವಾಗಿದೆ. ಹಿಂಸೆಯನ್ನು ಪ್ರಚೋದಿಸುವ ಪಕ್ಷ ಅಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮತೀಯವಾದಿಗಳು ಪರಾಕಾಷ್ಠೆಯಿಂದ ಮೆರೆಯುತ್ತಿದ್ದಾರೆ. ಮಡಿಕೇರಿಯಲ್ಲಿ ನೆರೆಪೀಡಿತ ಪ್ರದೇಶವನ್ನು ವೀಕ್ಷಿಸಿದಲು ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ
ಮಂಗಳೂರು, ಆ.19(ಕ.ವಾ):- ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ 107 ನೇ ಜನ್ಮದಿನಾಚರಣೆ ಸಂದರ್ಭದಲ್ಲಿ 2022-23ನೇ ಸಾಲಿನ ಡಿ.ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಜಯಾನಂದ ದೇವಾಡಿಗ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಮುಲ್ಕಿಯ ಜಯಾನಂದ ದೇವಾಡಿಗರು ಡಿ. ದೇವರಾಜ ಅರಸು ಅವರ ಚಿಂತನೆ, ಆದರ್ಶ ತತ್ವಗಳಿಗೆ ಧ್ವನಿಯಾಗಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ, ನಿರಂತರವಾಗಿ ಹೋರಾಟ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸ್ವಚ್ಚತೆ ಮತ್ತು ರಸ್ತೆಗಳ ಗುಂಡಿಗಳ ದುರಸ್ತಿ ಪಡಿಸುವಂತೆ , ಹೀಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಾರ್ಟಿ ವತಿಯಿಂದ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಲಾಯಿತು. ನಗರದ ಪಾಲಿಕೆ ಕಚೇರಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ಭೇಟಿಯಾಗಿ ನಗರದ ಹಲವು
ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಗಟ್ಟಿ ಧ್ವನಿ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸು ಅವರ ನೆನಪಲ್ಲಿ ಕರ್ನಾಟಕ ರಾಜ್ಯ ಸರಕಾರ ಕೊಡುವ ಪ್ರತಿಷ್ಠಿತ ದೇವರಾಜ ಅರಸು ರಾಜ್ಯ ಪುರಸ್ಕಾರ ಈ ಬಾರಿ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಲಭಿಸಿದೆ. ಬಡ ಕೃಷಿ ಕುಟುಂಬದಿಂದ ಬಂದಿರುವ ಡಾ ಕುಲಾಲ್,ಅರಸು ರವರ ಬಿಸಿಎಂ ಹಾಸ್ಟೆಲ್ ನಲ್ಲಿ 16 ವರ್ಷಗಳ ಕಾಲ ಓದಿ ವೈದ್ಯನಾಗಿ ಉನ್ನತ ಶಿಕ್ಷಣ ಪಡೆದವರು. ಅರಸು ಚಿಂತನೆಗಳನ್ನ
ಜಾರ್ಖಂಡ್ ಮೂಲದ ಯುವಕನೊಬ್ಬ ಸುರತ್ಕಲ್ ಬಳಿ ಕತ್ತಿ ಬೀಸಿ ಹುಚ್ಚಾಟ ನಡೆಸಿದ್ದಾನೆ. ಸುರತ್ಕಲ್ ಬಳಿಯ ಕಾನದಲ್ಲಿ ಘಟನೆ ನಡೆದಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯನ್ನು ಅತುಲ್ ಕಲ್ಲು (30) ಎಂದು ಪೆÇಲೀಸರು ಗುರುತಿಸಿದ್ದು ಆತ ಗೋವಾದಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ, ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದು ಸಾರ್ವಜಕನರ ಜೊತೆ ಒರಟಾಗಿ ವರ್ತಿಸಿದ್ದಾನೆ. ವೆಂಕಪ್ಪ ಎಂಬ ಸ್ಥಳೀಯ ಒಬ್ಬರನ್ನು ಬೆದರಿಸಿ ಅವರ




























