Home ಕರಾವಳಿ Archive by category ಬಂಟ್ವಾಳ (Page 13)

ವಿಟ್ಲ: ಪಾಳು ಬಾವಿಗೆ ಬಿದ್ದ ನರಿಯ ರಕ್ಷಣೆ

ವಿಟ್ಲ: ಪುಣಚ ಸಮೀಪದ ತೋರಣಕಟ್ಟೆಯಲ್ಲಿ ಪಾಳು ಬಾವಿಯೊಂದಕ್ಕೆ ನರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಿರುಪಯುಕ್ತವಾದ ಬಾವಿಯ ಒಳಗೆ ಆಹಾರ ಅರಸಿಕೊಂಡು ಬಂದ ನರಿ ಬಿದ್ದಿದ್ದು, ಅದರ ಕೂಗು ಕೇಳಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಸಹಾಯಕ ವಲಯ ಅರಣ್ಯಾಧಿಕಾರಿ

ಬಂಟ್ವಾಳ: ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ಹತ್ಯೆಗೆ ಸಂಚು.!

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಯಲ್ಲಾದ ಭ್ರಷ್ಟಾಚಾರವನ್ನು ಬಯಲು ಮಾಡಿದ ದ್ವೇಷದಲ್ಲಿ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ್ ವಾಮದಪದವು ಅವರ ಹತ್ಯೆಗೆ ಸಂಚು ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪದ್ಮನಾಭ ಸಾಮಂತ್ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. 2018-2023 ನೇ ಸಾಲಿನಲ್ಲಿ ನಡೆದ ಬಂಟ್ವಾಳ ತಾಲೂಕಿನ ಅಕ್ರಮ-ಸಕ್ರಮದ ಭೂ ಮಂಜೂರಾತಿಗಳ ಭ್ರಷ್ಟಾಚಾರವನ್ನು ಪದ್ಮನಾಭ ಸಾಮಂತ ಬಯಲು

ಅಕ್ಷಯ ಪಾತ್ರೆ ಪ್ರತಿಷ್ಠಾನದಿಂದ ಅತ್ಯಾಧುನಿಕ ಅಡುಗೆ ಮನೆಗೆ ಚಾಲನೆ

ಬಂಟ್ವಾಳ: ಅಕ್ಷಯಪಾತ್ರೆ ಫೌಂಡೇಶನ್‍ನ ವತಿಯಿಂದ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ 23 ಲಕ್ಷ ಮಂದಿಗೆ ಮಧ್ಯಾಹ್ನದ ಊಟ ತಲುಪುತ್ತಿದ್ದು, ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ ಎಂದು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು. ಅಕ್ಷಯ ಪಾತ್ರೆ ಫೌಂಡೇಶನ್ ಬಂಟ್ವಾಳ

ಬಂಟ್ವಾಳ: 2ನೇ ವರ್ಷದ ಚಿಣ್ಣರೋತ್ಸವಕ್ಕೆ ಸಿದ್ಧಗೊಂಡಿದೆ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆ

ಬಂಟ್ವಾಳ: ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ, ಹಾಗೂ ಕ್ರೀಡಾ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ಎರಡನೇ ವರ್ಷದ ದಡ್ಡಲಕಾಡು ಚಿಣ್ಣರೋತ್ಸವಕ್ಕೆ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಗೊಳ್ಳುತ್ತಿದೆ. ಕಳೆದ ವರ್ಷದ ಅತ್ಯದ್ಭುತ ಯಶಸ್ಸಿನಿಂದ ಪ್ರೇರಣೆ ಪಡೆದು ಈ ವರ್ಷವೂ ಹಲವಾರು ವಿಶಿಷ್ಠ, ವಿನೂತನ ಕಾರ್ಯಕ್ರಮ ನೀಡಲು ಶಾಲೆಯ ಸಾವಿರಾರು ವಿದ್ಯಾರ್ಥಿಗಳು ತಯಾರಾಗಿದ್ದು ಸರ್ಕಾರಿ ಶಾಲೆಯಲ್ಲಿ ಇಂತಹ

ಬಂಟ್ವಾಳ:ಪಣೋಲಿಬೈಲಿನಲ್ಲಿ ವರ್ಷಾವಧಿ ಕೋಲ ಸಂಪನ್ನ

ಬಂಟ್ವಾಳ: ತುಳುನಾಡಿನ ಕಾರಣಿಕ ಪ್ರಸಿದ್ದ ದೈವಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ವರ್ಷಾವಧಿ ಕೋಲ ನಡೆಯಿತು. ಬೆಳಿಗ್ಗೆ ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ಪುಣ್ಯಾಹ, ಪಂಚಗವ್ಯ ದ್ವಾದಶ ನಾಳಿಕೇರ ಗಣಯಾಗ, ನಾಗತಂಬಿಲ, ಫಲಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ ಪೂಜೆ, ಪಲ್ಲಪೂಜೆ ನಡೆಯಿತು. ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮನಾಥ ರೈ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್

ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ : ಸಂಸದ ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನೆ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ನಳಿನ್ ಕುಮಾರ್ ಕಟೀಲು ಮಾತನಾಡಿ ನಾನು ಸಾಧನೆ ಮಾಡಿದೆನೆಂದು ಹೇಳುವುದಿಲ್ಲ. ರಾಜಕೀಯಕ್ಕೆ ಇಚ್ಚೆಯಿಂದ ಬಂದವನಲ್ಲ. ಸಂಘದ ಹಿರಿಯ ಸೂಚನೆಯಂತೆ ಸಂಸದನಾಗಿ ಜನಸೇವೆ ಮಾಡಿದ್ದೇನೆ. ಸಂಘದ ವಿಚಾರಧಾರೆಯನ್ನು ಒಪ್ಪಿಕೊಂಡು ರಾಷ್ಟ್ರದ

ಬಂಟ್ವಾಳ : ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಂಟ್ವಾಳದ ಯುವಕ

ಬಂಟ್ವಾಳ: ಮೂಲತಃ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕನೋರ್ವ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ತಾಲೂಕಿನ ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರ ಧನೇಶ್ ಶೆಟ್ಟಿ ಇಂಡೋನೇಷಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ವಿವಾಹಿತರಾಗಿರುವ ಧನೇಶ್ ಅವರು ತನ್ನ ಪತ್ನಿಯೊಂದಿಗೆ ಇಂಡೋನೇಷಿಯದ್ದಲ್ಲಿದ್ದು ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತಮ ಕ್ರೀಡಾಪಟು ಆಗಿರುವ ಅವರಿಗೆ

ಬಂಟ್ವಾಳ: ಬೀದಿಯಲ್ಲಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆ ದಾಖಲಿಸಿದ ಸೇವಾಂಜಲಿ!

ಬಂಟ್ವಾಳ: ಕಳೆದ ಮೂರು ದಿನಗಳಿಂದ ಫರಂಗಿಪೇಟೆ ಬೀದಿಯಲ್ಲಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಫರಂಗಿಪೇಟೆಯ ಸೇವಾಂಜಲಿ ಸಂಸ್ಥೆ ಮಾನವೀಯತೆ ಮೆರೆದಿದೆ. ಬುಧವಾರ ಬೆಳಿಗ್ಗೆ ಫರಂಗಿಪೇಟೆಯ ಶ್ರೀರಾಮ ವಿದ್ಯಾಕೇಂದ್ರದ ಆವರಣದ ಬಳಿ ಹಳೆ ಬಟ್ಟೆ ಧರಿಸಿಕೊಂಡು ಮರಳಿನಲ್ಲಿ ಹೊರಳಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ವಿಚಾರಿಸಿದಾಗ ಆತ ಮಾನಸಿಕ

ಬಂಟ್ವಾಳ: ಕಲ್ಲಡ್ಕದಲ್ಲಿದೆ ಅಪರೂಪದ ಅಪೂರ್ವ ಸಂಗ್ರಹದ ಮ್ಯೂಸಿಯಂ…!!!

ಬಂಟ್ವಾಳ: ರಾಜರ ಕಾಲದಿಂದ ಆರಂಭಗೊಂಡು ಹಿರಿಯರು ಬಳಸಿದಂತಹ ಅಪರೂಪದ ವಸ್ತುಗಳ ಅಪೂರ್ವ ಸಂಗ್ರಹವನ್ನು ನೋಡಬೇಕಾದರೆ ಒಮ್ಮೆ ಕಲ್ಲಡ್ಕದ ಮ್ಯೂಸಿಯಂಗೆ ಭೇಟಿ ನೀಡಬೇಕು. ಒಂದಾಣೆ, ಎರಡಾಣೆ ನಾಣ್ಯಗಳಿಗಿಂತಲೂ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯ, ದೇಶ ವಿದೇಶಗಳ ಕರೆನ್ಸಿಗಳ ಅಪಾರವಾದ ಸಂಗ್ರಹ ಇಲ್ಲಿದ್ದು ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ಮ್ಯೂಸಿಯಂ ಒದಗಿಸುತ್ತದೆ. ಮಹಮ್ಮದ್ ಯಾಸೀರ್ ಎನ್ನುವ ಯುವ ಉದ್ಯಮಿಯ ಹವ್ಯಾಸವಾಗಿ ಆರಂಭಗೊಂಡ ಹಳೆ ಪರಕರಗಳು ಹಾಗೂ

ಜೀರ್ಣೋದ್ಧಾರ ಹಂತದಲ್ಲಿರುವ ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ

ಬಂಟ್ವಾಳದ ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವು ಜೀರ್ಣೋದ್ಧಾರ ಹಂತದಲ್ಲಿದ್ದು, ಶ್ರೀ ಮಹಾಲಿಂಗೇಶ್ವರನ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರಯವ ನೂತನ ಧ್ವಜ ಸ್ತಂಭದ ತೈಲಾಧಿವಾಸ ಕಾರ್ಯಕ್ರಮವು ಜರುಗಿತು. ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಧ್ವಜ ಸ್ತಂಭದ ಪ್ರತಿಷ್ಠಾಪನೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ