ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ : ಸಂಸದ ನಳಿನ್ ಕುಮಾರ್ ಕಟೀಲ್
ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನೆ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.
ಅಭಿನಂದನೆ ಸ್ವೀಕರಿಸಿ ನಳಿನ್ ಕುಮಾರ್ ಕಟೀಲು ಮಾತನಾಡಿ ನಾನು ಸಾಧನೆ ಮಾಡಿದೆನೆಂದು ಹೇಳುವುದಿಲ್ಲ. ರಾಜಕೀಯಕ್ಕೆ ಇಚ್ಚೆಯಿಂದ ಬಂದವನಲ್ಲ. ಸಂಘದ ಹಿರಿಯ ಸೂಚನೆಯಂತೆ ಸಂಸದನಾಗಿ ಜನಸೇವೆ ಮಾಡಿದ್ದೇನೆ. ಸಂಘದ ವಿಚಾರಧಾರೆಯನ್ನು ಒಪ್ಪಿಕೊಂಡು ರಾಷ್ಟ್ರದ ಕಾರ್ಯ ಮಾಡುತ್ತೇನೆ ವಿನಃ ಅಧಿಕಾರದ ಚಪಲ ನನಗಿಲ್ಲ ಎಂದು ತಿಳಿಸಿದರು. ಪ್ರಾಮಾಣಿಕ ಆದರ್ಶ ರಾಜಕಾರಣ ಮಾಡುವ ಜವಾಬ್ದಾರಿ ಹೊತ್ತಿದ್ದೇನೆ.
ಬಿಜೆಪಿ ರಾಜಾಧ್ಯಕ್ಷನಾಗಿ ಬೂತ್ ಅಧ್ಯಕ್ಷರನ್ನು ಗೌರವಿಸುವ ಕಾರ್ಯ, ಜನಸ್ವರಾಜ್ ಯಾತ್ರೆ ಮೊದಲಾದ ಅನೇಕ ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದ್ದೇನೆ. ಪಕ್ಷಕ್ಕೆ ಸೋಲಾದಾಗ ನೈತಿಕ ಜವಾಬ್ದಾರಿ ಹೊತ್ತಿದ್ದೇನೆ. ಕಾಂಗ್ರೆಸ್ ಮುಕ್ತ ದ.ಕ. ಜಿಲ್ಲೆ ನನ್ನ ಗುರಿ. ಪಕ್ಷ ಯಾರನ್ನೇ ಅಭ್ಯರ್ಥಿ ಯನ್ನಾಗಿ ಮಾಡಿದರೂ ರಾಜ್ಯದ 28 ಸ್ಥಾನದಲ್ಲೂ ಬಿಜೆಪಿ ಗೆಲುವು ಸಾಧಿಸಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆನ್ನುವುದು ನನ್ನ ಕನಸು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಶುಭ ಹಾರೈಸಿದರು. ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ಸುಲೋಚನಾ ಭಟ್ರಾ ಮದಾಸ ಬಂಟ್ವಾಳ, ಕಸ್ತೂರಿ ಪಂಜ, ಸಂತೋಷ್ ಕುಮಾರ್ ರೈ ಬೋಳಿಯಾರ್ ಉಪಸ್ಥಿತರಿದ್ದರು. ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು.