ಬಂಟ್ವಾಳ: ಪುದು ಗ್ರಾ.ಪಂ.ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನುದಾನವನ್ನು ದುರ್ಬಳಕೆ ಮಾಡಿದೆ ಎಂದು ಆರೋಪಿಸಿ ಮಂಗಳೂರು ಬಿಜೆಪಿ ಎಸ್‍ಸಿ, ಎಸ್‍ಟಿ ಮೋರ್ಚಾ ವತಿಯಿಂದ ಮಂಗಳೂರು ಮಂಡಲದ ಉಪಾಧ್ಯಕ್ಷ ವಿಠಲ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಗ್ರಾ.ಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ ಅವರು
ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಇದರ ವತಿಯಿಂದ 29 ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕಲಶ ಪ್ರತಿಷ್ಠೆ, ಮಹಾಪೂಜೆ ನಡೆಯಿತು. ವಿಶ್ವಜ್ಯೋತಿ ಮಹಿಳಾ ಸಂಘದ ಸದಸ್ಯೆಯರಿಂದ ಭಜನೆ ನಡೆಯಿತು. ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಮೊದಲಾದವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಬಂಟ್ವಾಳದ ಗೋಳ್ತಮಜಲು ಗ್ರಾಮದ ಸಚಿನ್ ಕೊಟ್ಟಾರಿ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಕಳೆದ 5 ವರ್ಷಗಳಿಂದ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‍ಗೆ ಒಳಗಾಗುತ್ತಿದ್ದಾರೆ. ವೈದ್ಯರ ಸಲಹೆಯಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರ ಪಿಂಡದ ಕಸಿ ಮಾಡಲು ನೋಂದಾಯಿಸಿದ್ದು, ಇದೀಗ ಮೂತ್ರ ಪಿಂಡದ ಕಸಿ ಶಸ್ತ್ರಚಿಕಿತ್ಸೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ. ಸಚಿನ್ ಕೊಟ್ಟಾರಿ ಕುಟುಂಬ ಕಡು ಬಡವರಾಗಿದ್ದು, ಇದೀಗ ದಾನಿಗಳ ಸಹಾಯದ
ಬಂಟ್ವಾಳ: ಕಾರ್ಮಿಕರ ಕೊರತೆಯಿಂದ ಭತ್ತದ ಸಾಗುವಳಿಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ಅಳಿದುಳಿದಿರುವ ಗದ್ದೆಗಳು ಬಹುತೇಕ ಬರಡಾಗಿದ್ದರೆ ಕೆಲವೊಂದು ಗದ್ದೆಗಳಲ್ಲಿ ಯಾಂತ್ರೀಕ ವಿಧಾನದಲ್ಲಿ ಕೃಷಿ ಕಾರ್ಯಗಳು ನಡೆಯುತ್ತಿವೆ. ಕೃಷಿ ಚಟುವಟಿಕೆಗಳು ಅವನತಿಗೆ ಸಾಗುತ್ತಿದ್ದಂತೆಯೇ ಅದರೊಂದಿಗೆ ಮಿಳಿತವಾಗಿರುವ ಅನೇಕ ಕೃಷಿ ಸಂಬಂಧಿ ಆಚರಣೆಗಳು, ಜಾನಪದೀಯವಾದ ಪಾಡ್ದನ, ಸಂಧಿ ಮೊದಲಾದ ಹಾಡು ಪ್ರಾಕಾರಗಳು ಕಣ್ಮರೆಯಾಗುತ್ತಿದೆ. ಬಲು ಅಪುರೂಪವೆಂಬಂತೆ ಬಂಟ್ವಾಳ
ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಲ್ಲಿರುವ ಎಸ್‍ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮನೆಗೆ ಇಂದು ಬೆಳಗ್ಗೆ ಎನ್‍ಐಎ ಅಧಿಕಾರಿಗಳ ತಂಡ ಬಂಟ್ವಾಳ ಪೆÇಲೀಸರ ಸಹಕಾರದಿಂದ ದಾಳಿ ನಡೆಸಿ ವಿಚಾರಣೆ ನಡೆಸಿದೆ. ವಿಚಾರಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಿಯಾಝ್, ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ
ಪಾಣೆಮಂಗಳೂರು ಗ್ರಾಮ ರೈತ ಘಟಕ ರಚನೆ ಕುರಿತಾಗಿ ದಿನಾಂಕ 06-09-2022ರ ಮಂಗಳವಾರ ಮೇಲ್ಕಾರಿನ ಬಿರ್ವ ಸಂಕೀರ್ಣದ ಸಭಾಭವನದಲ್ಲಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತುರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ್ ಪುಣಚ ಪ್ರಾಸ್ತವಿಕವಾಗಿ ಮಾತಾನಾಡಿ ರೈತಸಂಘದ ಹುಟ್ಟು ,ಸೈದ್ಧಾಂತಿಕ ಹಿನ್ನೆಲೆ, ವೈಚಾರಿಕತೆ, ಮತ್ತು ಮುಂದಿನ ಗುರಿಗಳ
ಬಂಟ್ವಾಳ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಪ್ರತಿಭೆಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಬಲು ವಿರಳ. ಕರಾಟೆ, ಜೂಡೋ, ಸಿಲಂಬಂನಂತಹ ಸಮರ ಕಲೆಗಳ ಜೊತೆ ಜೊತೆಗೆ ಭರತನಾಟ್ಯದಲ್ಲೂ ಪ್ರವೀಣ್ಯತೆ ಪಡೆದುಕೊಂಡ ಅಪರೂಪದ ಬಹುಮುಖ ಪ್ರತಿಭೆ ವೆನಿಲ್ಲಾ ಮಣಿಕಂಠ. ಜೂಡೋದಲ್ಲಿ ಬ್ಲಾಕ್‍ಬೆಲ್ಟ್ ಪಡೆದು ರಾಷ್ಟ್ರೀಯ ಮಟ್ಟದ ಮಾರ್ಷಲ್ ಆರ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದುಕೊಂಡಿರುವ ಬಂಟ್ವಾಳದ ಈ ಪ್ರತಿಭೆ ಭರತನಾಟ್ಯದಲ್ಲೂ
ಬಂಟ್ವಾಳ: ಪತ್ರಕರ್ತ ಸಂಶುದ್ದೀನ್ ಎಣ್ಮೂರು ಅವರಿಗೆ ವೆಬ್ ಸೈಟ್ ನಲ್ಲಿ ಪ್ರಕಟವಾದ ರಾಜ್ಯ ಮಟ್ಟದ ಅತ್ಯುತ್ತಮ ವರದಿಗೆ ನೀಡುವ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ – 2022 ಅನ್ನು ರವಿವಾರ ನೀಡಿ ಗೌರವಿಸಲಾಯಿತು ನಿರತ ಸಾಹಿತ್ಯ ಸಂಪದ ಕಡೆಗೋಳಿ ತುಂಬೆ ಹಾಗೂ ಗಲ್ಫ್ ಕನ್ನಡಿಗ ಡಾಟ್ ಕಾಮ್ ಇದರ ಜಂಟಿ ಆಶ್ರಯದಲ್ಲಿ ಬಿ ಸಿ ರೋಡ್ ನ ಕೈಕುಂಜೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತುವಿನ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ ಸಂಶುದ್ದೀನ್
ಬಂಟ್ವಾಳ: ವಿಶ್ವಹಿಂದೂ ಪರಿಷತ್- ಮಾತೃಶಕ್ತಿ ದುರ್ಗಾವಾಹಿನಿ ಬಜರಂಗ ದಳ ಛತ್ರಪತಿ ಶಾಖೆ ಕುಮ್ಡೇಲು ಇದರ ಆಶ್ರಯದಲ್ಲಿ ಕಡೆಗೋಳಿ ಶ್ರೀ ಪೊಳಲಿ ರಾಜರಾಜೇಶ್ವರೀ ಮಹದ್ವಾರದ ಬಳಿ ನೂತನವಾಗಿ ನಿರ್ಮಾಣಗೊಂಡ ಪೂರ್ಣ ಕುಂಭ ಕಲಶ ಮಾದರಿಯ ಛತ್ರಪತಿ ಶಿವಾಜಿ ವೃತ್ತ ಉದ್ಘಾಟನಾ ಸಮಾರಂಭ ನೆರವೇರಿತು. ನೂತನ ಛತ್ರಪತಿ ಶಿವಾಜಿ ವೃತ್ತವನ್ನು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಉದ್ಘಾಟಸಿ, ದೀಪ ಪ್ರಜ್ವಲಿಸಿದರು. ಈ ಸಂದರ್ಭ ಬಜರಂಗದಳ
ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿಯಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದಕ್ಕೆ ಅತ್ಯಂತ ಭೀಕರ ರೀತಿಯಲ್ಲಿ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಮನೆಯ ಸೊತ್ತುಗಳ ಜತೆಗೆ ಕ್ಯಾಟರಿಂಗ್ ಉದ್ಯಮ ಪಾತ್ರೆ ಪಗಡೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ.ಪುಣ್ಕೆದಡಿ ನಿವಾಸಿ ಲೋಕೇಶ್ ಪೂಜಾರಿ ಅವರ ಮನೆಗೆ ಸಿಡಿಲು ಬಡಿದಿದ್ದು, ಆದರೆ ಮನೆಮಂದಿ ಪಕ್ಕದ ಮನೆಯಲ್ಲಿ ಮಲಗಿದ್ದ ಹಿನ್ನೆಲೆಯಲ್ಲಿ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಇಲ್ಲದೇ ಇದ್ದರೆ ಜೀವಕ್ಕೂ




























