ಬಂಟ್ವಾಳ: ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಬಂಟ್ವಾಳ ಕಂಬಳ ಎಂದೇ ಪಸಿದ್ದಿ ಪಡೆದಿರುವ 13ನೇ ವರ್ಷದ ಹೊನಲು ಬೆಳಕಿನ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳಕ್ಕೆ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.ಅಲ್ಲಿಪಾದೆ ಸಂತ ಅಂತೋನಿ ಧರ್ಮಕೇಂದ್ರದ ಧರ್ಮಗರುಗಳಾದ ವಂದನೀಯ ಫೆಡ್ರಿಕ್ ಮೊಂತೆರೋ ಕಂಬಳ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ಇದೀಗ ದೆಹಲಿಯ ವಿಮಾನವೇರುವ ಭಾಗ್ಯ ಒದಗಿಬಂದಿದೆ. ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯಾಗಿದ್ದು, ಸಂಜೀವಿನೀ -ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾರ್ಚ್ 1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ
ಬಂಟ್ವಾಳ ತಾಲೂಕಿನ ಅನಿಲ್ ಜಾನ್ ಸಿಕ್ವೇರಾ ತನ್ನ 25ನೇ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಚಿಕ್ಕ ವಯಸ್ಸಿನ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕರಾವಳಿ ಜಿಲ್ಲೆಯ ಅನಿಲ್ ಅಪರೂಪದ ಸಾಧಕರಾಗಿ ಗುರುತಿಸಲ್ಪಟ್ಟಿದ್ದಾರೆ. ಅನಿಲ್ ಜಾನ್ ಸಿಕ್ವೇರಾ ಅವರು ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹೀಗೆ 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸದ್ಯ ಸಿವಿಲ್ ನ್ಯಾಯಧೀಶರಾಗಿ
ಬಿ.ಸಿ.ರೋಡು: ರೋಟರಿ ಇಂಟರ್ ಡಿಸ್ಟ್ರಿಕ್ಟ್ ಮೀಟ್- ಅಂತರ್ ಜಿಲ್ಲಾ ರೋಟರಿ ಕ್ಲಬ್ ಗಳಾದ ಕಾರ್ಕಳ ಮತ್ತು ಬಿ.ಸಿ.ರೋಡು ಸಿಟಿ ಕ್ಲಬ್ ಗಳ ಕುಟುಂಬ ಸ್ನೇಹ ಸಮ್ಮಿಲನ ಬಿ.ಸಿ.ರೋಡು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.ಬಿ.ಸಿ.ರೋಡು ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.ಪಿಡಿಜಿ ಪ್ರಕಾಶ್ ಕಾರಂತ್ ಮಾತನಾಡಿ ಗೋಪಾಲ ಅಂಚನ್ ಅವರು ಬಹುಮುಖಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಅವರ ಸೇವೆ ಅಭಿನಂದನೀಯವಾಗಿದೆ ಎಂದರು.ಪಿಡಿಜಿ
ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಿಲಿಚಾಂಡಿಗೋಳಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಗಡಿಪಾಡಿ ಸ್ಥಳದಲ್ಲಿ ದೊಂಪದ ಬಲಿ ನೇಮೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಬೆಳಿಗ್ಗೆ ಪುಣ್ಯಾಹವಾಚನ, ಗಣಪತಿಹೋಮ, ಕಲಶಾರಾಧನೆ, ಪ್ರಧಾನ ಹೋಮ, ದೈವಗಳ ಪೀಠ ಸ್ಥಾಪನೆ, ಕಲಶಾಭಿಷೇಕ, ನಾಯರ್ಕುಮೇರು ಗುತ್ತಿನಿಂದ ಭಂಡಾರ ಬಂದು ಪಂಚ ಪರ್ವ, ಪ್ರಸಾದ ವಿತರಣೆ, ಲಘು ಉಪಾಹಾರ ನಡೆಯಿತು.ಸಂಜೆ ಪಿಲಿಚಾಮುಂಡಿ ನೇಮೋತ್ಸವ, ಮಾರಿಪೂಜೆ, ಗಂಧಪ್ರಸಾದ ವಿತರಣೆ, ಸಾರ್ವಜನಿಕ
ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ವೈಭವಯುತವಾಗಿ ಸಂಪನ್ನಗೊಂಡಿತು. ಬ್ರಹ್ಮ ಬೈದರ್ಕಳ ಜಾತ್ರೆಯಂದು ಬೈದರ್ಕಳು ಒಲಿ ಮರೆಯಿಂದ ಹೊರಡುವುದು, ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯುವುದು, ಬೈದರ್ಕಳ ಪಾತ್ರಿಗಳು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಬೈದರ್ಕಳು ಬಾಕಿಮಾರಿನಿಂದ ಗರಡಿಗೆ ಬಂದು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು,
ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಬಿ.ಸಿ.ರೋಡ್ ನ ಪೊಲೀಸ್ ಲೈನ್ ನಲ್ಲಿದ್ದು, ಇದರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವ ಫೆಬ್ರವರಿ 16ರಿಂದ ಆರಂಭಗೊಂಡು 24ರವರೆಗೆ ನಡೆಯಲಿದ್ದು, ಶುಕ್ರವಾರ ಸಂಜೆ 4.30ರಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಈ ವಿಚಾರವನ್ನು ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮತ್ತು ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.ಅವರು ಬಂಟ್ವಾಳ ಪ್ರೆಸ್‌ಕ್ಲಬ್ ನಲ್ಲಿ
ಬಂಟ್ವಾಳ: 1924ರಲ್ಲಿ ಆರಂಭವಾದ ಕಲ್ಲಡ್ಕ ಶ್ರೀರಾಮ ಮಂದಿರದ ಶತಾಬ್ದಿ ಸಂಭ್ರಮ ಕಾರ್ಯಕ್ರಮ ಫೆ.21 ರಿಂದ ಫೆ.24 ರ ವರೆಗೆ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ಶತಾಬ್ದಿ ಕಾರ್ಯಕ್ರಮದಲ್ಲಿ ನೂತನವಾಗಿ ಶ್ರೀ ವಿದ್ಯಾಗಣಪತಿ ದೇವರ
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಇದರ ವಾರ್ಷಿಕ ಕಾರ್ಯಕ್ರಮ ಹಾಗೂ ಪದಗ್ರಹಣ ಸಮಾರಂಭವು ಪೆರ್ಲಾಪು ಪ್ರಾಥಾಮಿಕ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲರಾದ ಎ ಕೃಷ್ಣಪ್ಪ ಪೂಜಾರಿ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಅವರಲ್ಲಿ ನೈತಿಕ ಗುಣಮಟ್ಟವನ್ನು ಬೆಳೆಸಿ,ಬೇರೆ ಯಾವುದೇ ಆಸ್ತಿಮಾಡಿ ಕೊಡುವ ಅಗತ್ಯವಿಲ್ಲ. ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ರಿ ಇದರ ಗೌರವಾಧ್ಯಕ್ಷರಾದ ಮೋಹನ್
ಬಂಟ್ವಾಳ: ತಾಲೂಕು ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಧಿ ಜಾತ್ರೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ವತಿಯಿಂದ ಕೊಡ ಮಾಡುವ ವಿಷ್ಣು ಪ್ರಸಾದ ಪ್ರಶಸ್ತಿಯನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಅವರಿಗೆ ಪ್ರದಾನ ಮಾಡಲಾಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸೇವೆಯಿಂದ ಸಾರ್ಥಕತೆ ಎಂಬ ಧ್ಯೇಯ




























