ಬಂಟ್ವಾಳ: ಕೊರಂಟಬೆಟ್ಟುಗುತ್ತಿನಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ
ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ವೈಭವಯುತವಾಗಿ ಸಂಪನ್ನಗೊಂಡಿತು.
ಬ್ರಹ್ಮ ಬೈದರ್ಕಳ ಜಾತ್ರೆಯಂದು ಬೈದರ್ಕಳು ಒಲಿ ಮರೆಯಿಂದ ಹೊರಡುವುದು, ಬೈದರ್ಕಳು ಬಾಕಿಮಾರು ಗದ್ದೆಗೆ ಇಳಿಯುವುದು, ಬೈದರ್ಕಳ ಪಾತ್ರಿಗಳು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಬೈದರ್ಕಳು ಬಾಕಿಮಾರಿನಿಂದ ಗರಡಿಗೆ ಬಂದು ದರ್ಶನವಾಗಿ ಸುರ್ಯ ಹಾಕಿಕೊಳ್ಳುವುದು, ಮಾಯಾಂದತಿ ದೇವಿಯ ನೇಮೋತ್ಸವ ನಡೆಯಿತು.
ಗರಡಿ ಫ್ರೆಂಡ್ಸ್ ಕೊರಂಟಬೆಟ್ಟು ಪ್ರಾಯೋಜಕತ್ವದಲ್ಲಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದವರಿಂದ ಗರೋಡಿದ ಸತ್ಯೊಲು ಯಕ್ಷಗಾನ ಬಯಲಾಟ ನಡೆಯಿತು.
ಇದೇ ಸಂದರ್ಭ ನಡೆದ ಸನ್ಮಾನ ಸಮಾರಂಭದಲ್ಲಿ ಮುಂಬೈ ಉದ್ಯಮಿ, ಕ್ಷೇತ್ರದ ಭಕ್ತರಾದ ಅನಿಲ್ ಗಾಯಕ್ ವಾಡ್, ನೃತ್ಯ ಸಾಧಕಿ ಆಪ್ತಿ ಪೂಜಾರಿ ನಾಯರ್ಕುಮೇರು, ಬೈದರ್ಕಳ ಪಾತ್ರಿಗಳಾದ ರಮೇಶ ಪೂಜಾರಿ ಮತ್ತು ಉಮೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರದ ಅಧ್ಯಕ್ಷ ಸದಾನಂದ ಪೂಜಾರಿ ಕೊರಂಟಬೆಟ್ಟುಗುತ್ತು, ಗರಡಿ ಫ್ರೆಂಡ್ಸ್ ಅಧ್ಯಕ್ಷ ಯೋಗೀಶ್ ಪೂಜಾರಿ ನಾಯರ್ಕುಮೇರು, ಕುಟುಂಬದ ಯಜಮಾನ ಜಿನ್ನಪ್ಪ ಪೂಜಾರಿ ಕಲ್ಮಂಜ, ಕುಟುಂಬ ಸಮಿತಿಯ ಅಧ್ಯಕ್ಷ ದೀಪಕ್ ಕೋಟ್ಯಾನ್ ಪುತ್ತೂರು, ಪದಾಧಿಕಾರಿಗಳಾದ ಶೇಖರ ಪೂಜಾರಿ ಅಗಲ್ದೊಡಿ, ಎ. ಕೃಷ್ಣಪ್ಪ ಪೂಜಾರಿ ಆಲದಪದವು, ಕಿಶೋರ್ ಕುಮಾರ್ ನಾಯರ್ಕುಮೇರು, ಹರೀಶ್ ಪೂಜಾರಿ ಕೊರಂಟಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರದ ಗೌರವ ಸಲಹೆಗಾರ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.