Home Archive by category ಕರಾವಳಿ (Page 308)

ಚುನಾವಣಾ ಅಕ್ರಮ ತಡೆಗೆ ಕ್ರಮ : ಮೂಡುಬಿದರೆ ಚುನಾವಣಾಧಿಕಾರಿ ಕೆ.ಮಹೇಶ್ಚಂದ್ರ ಹೇಳಿಕೆ

ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಅಳವಡಿಸಲಾಗಿರುವ ಬಂಟಿಂಗ್ಸ್ ಬ್ಯಾನರ್ ಗಳನ್ನು ತೆಗೆಸುವ ಕ್ರಮ ಕೈಗೊಳ್ಳಲಾಗಿದೆ, ಯಾವುದೇ ಕಾರ್ಯಕ್ರಮ ನಡೆಸುವಲ್ಲಿ ಅನುಮತಿ ಪಡೆದುಕೊಂಡೇ ನಡೆಸಬೇಕು, ರಾಜಕಾರಣಿಗಳು, ಚುನಾಯಿತ ಸದಸ್ಯರು ವೇದಿಕೆಯೇರಿ ಭಾಷಣ ಮಾಡುವಂತಿಲ್ಲ. ಯಾವುದೇ ಭರವಸೆ ನೀಡುವುದಾಗಲೀ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡುವು ದಾಗಲೀ

ಮಾಪ್ಸ್ ಕಾಲೇಜಿನಲ್ಲಿ ಸಿ.ಎ ಪೌಂಡೇಶನ್ ಕೋರ್ಸಿನ ಬಗ್ಗೆ ಓರಿಯೆಂಟೇಶನ್ ಕಾರ್ಯಕ್ರಮ

ಮಾಪ್ಸ್ ಕಾಲೇಜು, ಮಂಗಳೂರು ಇಲ್ಲಿ ಜೂನ್ ತಿಂಗಳಲ್ಲಿ ನಡೆಯುವ ಸಿ.ಎ ಪೌಂಡೇಶನ್ ಪರೀಕ್ಷೆಯ ಬಗ್ಗೆ ಆಸಕ್ತ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ ಓರಿಯೆಂಟೇಶನ್ ಕೋರ್ಸನ್ನು ನಡೆಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಶ್ರೀ ದಿನೇಶ್ ಕುಮಾರ್ ಆಳ್ವ ಇವರು ಮಾತಾನಾಡುತ್ತಾ ಮಾಪ್ಸ್ ಕಾಲೇಜು ಸಿ.ಎ ಕೋಚಿಂಗ್‍ಗೆ ಹೆಸರಾದ ಸಂಸ್ಥೆಯಾಗಿದ್ದು ಅತ್ಯಂತ ಪರಿಣ ತಿ ಹೊಂದಿರುವ ಪ್ರಾಚಾರ್ಯರು ಕೋಚಿಂಗ್ ಒದಗಿಸುತ್ತಿದ್ದು, ಹಾಜಾರಾದ ವಿದ್ಯಾರ್ಥಿಗಳು ಉತ್ತಮ

ಭಾರತದ ದೇಶೀ ಜ್ಞಾನದ ದಾಖಲೀಕರಣ ಅಗತ್ಯ: ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ

ಉಜಿರೆ, ಮಾ.31: ಭಾರತದ ದೇಶೀಯ ಜ್ಞಾನ- ಸಾಂಪ್ರದಾಯಿಕ ಜ್ಞಾನದ ದಾಖಲೀಕರಣವಾಗಿ, ಅದು ಒಪ್ಪಿತಗೊಂಡು ಸದುದ್ದೇಶಕ್ಕೆ ಸರಿಯಾದ ರೀತಿಯಲ್ಲಿ ಬಳಸಲ್ಪಡಬೇಕಿದೆ. ದೇಶೀಯ ತಾಂತ್ರಿಕ ಜ್ಞಾನ ಕೂಡ ದಾಖಲೀಕರಣಗೊಂಡು ದೇಶದ ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಸಂಯೋಜಿಸಲ್ಪಡುವ ಅಗತ್ಯವಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಮೂಲಕ ಸಾಧಿತವಾಗುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು. ಇಲ್ಲಿನ

ಉಜಿರೆ ಬಿವೋಕ್‌ ವಿದ್ಯಾರ್ಥಿಗಳಿಂದ ‘ಟ್ಯಾಲೆಂಟ್ಸ್ ಡೇ’ ಸಿನೆಮಾ ಬಿಡುಗಡೆ

ಉಜಿರೆ: ಎಸ್‌ಡಿಎಂ ಕಾಲೇಜಿನ ಬಿ.ವೋಕ್ (ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್) ವಿಭಾಗದ ವತಿಯಿಂದ ವಿದ್ಯಾರ್ಥಿಗಳು ನಿರ್ದೇಶಿಸಿ ನಿರ್ಮಿಸಿರುವ ವಿಭಾಗದ ಮೊದಲ ಫೀಚರ್ ಸಿನಿಮಾ ‘ಟ್ಯಾಲೆಂಟ್ಸ್ ಡೇ’ ಇದರ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಯುಜಿ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.  ಸಿನಿಮಾ ಬಿಡುಗಡೆ ಮಾಡಿ ಮಾತನಾಡಿದ  ಮನಶಾಸ್ತ್ರಜ್ಞೆ ಸಿಂಚನಾ ಉರುಬೈಲು, “ಸಿನಿಮಾ ನೋಡುವಾಗ ಇದು ವಿದ್ಯಾರ್ಥಿಗಳು ನಿರ್ಮಿಸಿರುವುದು ಎಂದು ಅನಿಸುವುದೇ

ಕಡಬ : ವಾಟ್ಸ್ಯಾಪ್ ಸ್ಟೇಟಸ್ ಹಾಕಿ, ನೇಣು ಬಿಗಿದು ಯುವಕ ಆತ್ಮಹತ್ಯೆ ‌

ಕಡಬ : ವಾಟ್ಸ್ಯಾಪ್ ಸ್ಟೇಟಸ್ ಹಾಕಿದ ಬಳಿಕ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಇಚಿಲಂಪಾಡಿಲ್ಲಿ ಕಳೆದ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ರೆನೀಶ್ (27) ವರ್ಷ ಎಂದು ಗುರುತಿಸಲಾಗಿದೆ. ಮೃತ ರೆನೀಶ್ ತಂದೆ ತಾಯಿ ಮರಣ ಹೊಂದಿದ್ದು, ಈತನ ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ನ ಕೆಲಸಕ್ಕೆ

ದೇಶೀ ಶಿಕ್ಷಣದ ನೆಲೆಯಲ್ಲಿ ಹೊಸ ಶಿಕ್ಷಣ ನೀತಿಯ ಯಶಸ್ಸು ಕಾದು ನೋಡಬೇಕಿದೆ: ಪ್ರೊ. ಪಿ.ವಿ. ಕೃಷ್ಣ ಭಟ್ಟ

ಉಜಿರೆ, ಮಾ.29: ಭಾರತದ ದೇಶೀಯ ಶಿಕ್ಷಣ ಪದ್ಧತಿಗಳು ಜೀವನ ಪದ್ಧತಿ, ಮೌಲ್ಯಗಳನ್ನು ಆಧರಿಸಿ ಇದ್ದವು. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಬಗ್ಗೆ ಪುನರ್ ವಿಮರ್ಶೆ ನಡೆದಿದೆ. ಹೊಸ ಶಿಕ್ಷಣ ನೀತಿಯೂ ಬಂದಿದೆ. ಆದರೆ ಅದು ಇದುವರೆಗೆ ಉಂಟಾಗಿರುವ ಕೊರತೆಗಳನ್ನು ಎಷ್ಟರ ಮಟ್ಟಿಗೆ ನಿವಾರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಒಡಿಷಾದ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ವಿ. ಕೃಷ್ಣ ಭಟ್ಟ ಅವರು ಹೇಳಿದರು. ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಸೆಮಿನಾರ್

ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಪರ್ಲಾಣಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ತನ್ನ ಸುವರ್ಣೋತ್ಸವದಲ್ಲಿ ಇದ್ದು , 2022 -23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪರ್ಲಾಣಿಯಲ್ಲಿ ಆಯೋಜಿಸಲಾಗಿದೆ. ಏಳು ದಿನಗಳ ವಿಶೇಷ ಶಿಬಿರವು ಗುರುವಾರದಂದು ಗಣ್ಯರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. “ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವ ಜನತೆ” ಎಂಬ ಧ್ಯೆಯ ವಾಕ್ಯದಡಿಯಲ್ಲಿ

ಕಾರ್ಕಳ : ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕೆಲವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾರ್ಕಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಕಾರ್ಕಳ ಗ್ರಾಮಾಂತರ ಎಸ್‍ಐ ತೇಜಸ್ವಿ ಅವರಿಗೆ ಮನವಿ ಸಲ್ಲಿಸಿತು.ಇತ್ತೀಚೆಗೆ ಕೆಲವು ವ್ಯಕ್ತಿಗಳು ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಹೆಸರು ಹೇಳಿ ಹಣ ಸಂಗ್ರಹಿಸುವ, ವಸೂಲಿ ಮಾಡುವ ಹಾಗೂ ಬೆದರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವುದು ಸಂಘದ ಗಮನಕ್ಕೆ ಬಂದಿದೆ. ಯಾವುದೇ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಅಂಬುಲೆನ್ಸ್ : ರೋಗಿಗಳು ಸಣ್ಣಪುಟ್ಟ ಗಾಯಗಳಿಂದ ಪಾರು

ಕಾರ್ಕಳ ಬಂಗ್ಲೆ ಗುಡ್ಡೆ ಬಳಿ, ಖಾಸಗಿ ಆಸ್ಪತ್ರೆಯ ರೋಗಿಗಳನ್ನು ತಮ್ಮ ಮನೆಗೆ ಬಿಡಲು ಕಾರ್ಕಳದಿಂದ ಕಡ್ತಲಕ್ಕೆ ಹೋಗುವಾಗ ಬಂಗ್ಲೆ ಗುಡ್ಡೆ ಬಳಿ ಅತಿ ವೇಗದಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಆಂಬುಲೆನ್ಸ್ ಮಾರ್ಗದಲ್ಲಿ ಪಲ್ಟಿ ಯಾದ ಘಟನೆ ನಡೆದಿದೆ. ಈ ವೇಳೆಯಲ್ಲಿ ಅಂಬುಲೆನ್ಸಿನ ಒಳಗಿದ್ದ ರೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳದ ಮಣಿಪಾಲ ರೋಟರಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ಎದುರಿನಿಂದ ವೇಗವಾಗಿ

ಲಾಡ್ಜ್‌ನಲ್ಲಿಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ನಗರದ ಕೆಎಸ್ ರಾವ್ ರೋಡ್ ಬಳಿ ಇರುವ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೈಸೂರು ಮೂಲದ ವಾಣಿ ವಿಲಾಸ ಬಡಾವಣೆಯ ದೇವೇಂದ್ರ (48) , ಪತ್ನಿ ಮತ್ತು ಇಬ್ಬರು ಹೆಣ್ಣಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಮಾರ್ಚ್ 27ಕ್ಕೆ ಮಂಗಳೂರಿನ ಹೊಟೇಲ್ ನಲ್ಲಿ ರೂಮ್ ಪಡೆದುಕೊಂಡಿದ್ದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಂದರು ಪೊಲೀಸರು