ಶೂಟರ್ ಮನೀಶ್ ನರ್ವಾಲ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಇನ್ನೋರ್ವ ಶೂಟರ್ ಸಿಂಗ್ ರಾಜ್ ಅಧಾನ ಅವರು ಬೆಳ್ಳಿ ಪದಕ ಗೆದ್ದುಕೊಂಡರು. ಈ ಇಬ್ಬರು ಶನಿವಾರ ನಡೆದ ಪಿ4 ಮಿಕ್ಸೆಡ್ 50 ಮೀ. ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.19ರ ರ ಹರೆಯದ ನರ್ವಾಲ್ ಒಟ್ಟು 218.2 ಅಂಕ ಗಳಿಸಿ ಒಲಿಂಪಿಕ್ಸ್
ನಾಲಾಸೋಪಾರ;; ತುಳು ಕೂಟ ಫೌಂಡೇಶನ್ ನಾಲಾಸೋಪಾರ ಇದರ ಸಭೆಯು. ಆಗಸ್ಟ್ 31ರಂದು ರಿಜನ್ಸಿ ಬ್ಯಾಂಕ್ವಿಟ್ ಹಾಲ್ ನಾಲಾಸೋಪಾರ (ಪೂರ್ವ )ದಲ್ಲಿ ತುಳುಕೂಟ ಫೌಂಡೇಶನ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಕಾಪು ಇವರ ಅದ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಕೋಶಾಧಿಕಾರಿಯವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಕಾರ್ಯದರ್ಶಿಯವರು ಲೆಕ್ಕಪತ್ರವನ್ನು ಮಂಡಿಸಿದರು ಈ ಸಂದರ್ಭದಲ್ಲಿ
ಕೊರೊನಾ ಸಾಂಕ್ರಾಮಿಕದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಕಹಿಸುದ್ದಿ ಸಿಕ್ಕಿದೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್ 01ರಿಂದ ಅಡುಗೆ ಅನಿಲ ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿ 25 ರು ತೆರಬೇಕಾಗುತ್ತದೆ. ಪರಿಷ್ಕೃತ ದರ ಪಟ್ಟಿ ಬುಧವಾರದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಹೇಳಿವೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್
ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಅತ್ಯುತ್ತಮ ಸಂಘವೆಂದು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ನ್ಯೂ ಫ್ರೈಡ್ ಪ್ಲಾಜಾ ಹೋಟೆಲ್‌ನಲ್ಲಿ ಸಂಘವನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಹಣಕಾಸಿನ ನೆರವು, ವೈದ್ಯಕೀಯ ಸಹಾಯ, ಆಹಾರ ಕಿಟ್‌ಗಳು, ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಇತ್ಯಾದಿ ಅನೇಕ ಖಾಸಗಿ
ಟು ಆಂಡ್ ಮೀ ಹೆಸ್ರು ಹೇಳುವ ಹಾಗೆ ಇದೊಂದು ಡಿಫರೆಂಟ್ ಮೂವಿ… ಎಲ್.ಎಸ್. ಮೀಡಿಯಾ ಬ್ಯಾನರಡಿಯಲ್ಲಿ ಮೂಡಿ ಬಂದಿದೆ. ಸ್ವರಾಜ್ ಶೆಟ್ಟಿ ಬಹುಭಾಷಾ ಸಿನಿಮಾದಲ್ಲಿ ನಟಿಸಿದ್ದರೂ ಅವರ ಮೊದಲ ನಿರ್ದೇಶನದಲ್ಲಿ ತೆರೆಕಂಡ ಸಿನಿಮಾ ಇದಾಗಿದೆ. ಈಗಾಗಲೇ ವಿ4 ಸ್ಟ್ರೀಮ್‌ನ ಓಟಿಟಿಯಲ್ಲಿ ರಿಲೀಸ್ ಆಗಿರುವ ಟು ಆಂಡ್ ಮೀ ತುಳು ಮೂವಿಗೆ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ ಸಿಕ್ಕಿದೆ. ಇಬ್ಬರ ಹುಡುಗಿಯರ ನಡುವೆ ಒಬ್ಬ ಪ್ರೇಮಿ ಎನ್ನುವ ಕಥಾ ಹಂದರ ಹೊಂದಿರುವ ಚಿತ್ರವು ಬಹಳ
ಮುಂಬೈ :ಬಿಲ್ಲವರ ಎಸೋಸಿಯೇಶನ್ ಮುಂಬಾಯಿ. ಕಾ0ದಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ ವತಿಯಿಂದ ಅಗಷ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರವಿವಾರ ಕಾ0ದಿವಲಿಯ ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ ಆಟಿಡೊ0ಜೆ ಕೂಟ ಬಹಳ ವಿಜೃಂಭಣೆಯಿಂದ ಜರಗಿತು. ಅಂದಿನ ಕಾರ್ಯಕ್ರಮಕ್ಕೆ ಬಿಲ್ಲವರ ಎಸೋಸಿಯೇಶನಿನ ಉಪಾಧ್ಯಕ್ಷರಾದ ಶಂಕರ್ ಡಿ ಪೂಜಾರಿ, ಪ್ರಧಾನ ಕಚೇರಿಯ ಪ್ರತಿನಿಧಿಯಾದ ಹರೀಶ್ ಪೂಜಾರಿ ಕೋಕರ್ನೆ. ಜೊತೆ ಕೋಶಾಧಿಕಾರಿಯವರಾದ ಸದಾಶಿವ
ಜಪಾನ್‍ನ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾ ಓಲಂಪಿಕ್‍ಗೆ ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಅವರಿಗೆ ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷ ನೀಡಲಾಗಿದೆ. ಪ್ಯಾರಾ ಪವರ್ ಲಿಪ್ಟಿಂಗ್‍ನಲ್ಲಿ ಶಕೀನ್ ಖಾತುನ್ ಹಾಗೂ ಪ್ಯಾರಾ ಈಜಿನಲ್ಲಿ ನಿರಂಜನ್ ಮುಕುಂದನ್ ಪಾಲ್ಗೊಳ್ಳುತ್ತಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ರಾಜ್ಯದ, ದೇಶದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ ರಾಜ್ಯ
ಜಗತ್ತಿನ ಅತಿದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಚೈನ್ ಮಾರಾಟದ ಸಂಸ್ಥೆಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ 9ನೇ ಆವೃತ್ತಿಯ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಬಾರಿ ವಿಶೇಷ ವಿವಾಹ ಗೀತೆಯಾಗಿ #MakeWayForTheBride ಅನ್ನು ಪ್ರಸ್ತುತಪಡಿಸಿದ್ದು, ಆಧುನಿಕ ದಿನಮಾನಗಳ ಭಾರತೀಯ ವಿವಾಹ ಸಮಾರಂಭಗಳ ಹೆಗ್ಗುರುತಾಗಿರುವ ವಧುವಿನ ಅದ್ಧೂರಿ ಪ್ರವೇಶವನ್ನು ಚಿತ್ರಿಸಿದೆ. ಕಲಾತ್ಮಕವಾಗಿ ಚಿತ್ರೀಸಲಾದ 3 ನಿಮಿಷಗಳ ಈ
ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ಆ.10ರಂದು ದೆಹಲಿಯಲ್ಲಿ ಕೇಂದ್ರದ ಕೃಷಿ ರಾಜ್ಯ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತರ ಕನ್ನಡ ಜಿಲ್ಲೆಯ ಮಾದರಿಯಲ್ಲೇ ಸೋಲಾರ್ ಪಂಪ್ ಸೆಟ್‌ಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಮಾಡಿದರು. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವಾಗ ಸರಕಾರ ಸಬ್ಸಿಡಿ ನೀಡುತ್ತಿದೆ. ಆ ಸಬ್ಸಿಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೂ ವಿಸ್ತರಿಸಬೇಕು
ಅನುಕಂಪದ ಆಧಾರದ ಮೇಲೆ ನೀಡುವ ಹಾಗೂ ಈಗಾಗಲೇ ನೇಮಕಾತಿ ಹೊಂದಿ ಆದೇಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಕೋರ್ಸ್ (ಜೆಒಸಿ)ಗಳು “ಪಿಯುಸಿ” ವಿದ್ಯಾರ್ಹತೆಗೆ ಸಮಾನವೆಂದು ಪರಿಗಣಿಸಿ ಸರಕಾರ ಆದೇಶ ಹೊರಡಿಸಿದೆ. ಪಿಯುಸಿ ಅಥವಾ ಜೆಒಸಿ ಅಂಕಗಳನ್ನು ಪರಿಗಣಿಸದೆ ಕೇಲವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಗಣಿಸಿ ಉದ್ಯೋಗಕ್ಕೆ ಆಯ್ಕೆ ಮಾಡುವುದಾದರೆ ಜೆಒಸಿಯನ್ನು ಪಿಯುಸಿಗೆ ತತ್ಸಮಾನವೆಂದು ಕನಿಷ್ಠ ಶೈಕ್ಷಣಿಕ ಅರ್ಹತೆಯಾಗಿ