ಉಪ್ಪಿನಂಗಡಿ : ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿ ಚಲಾಯಿಸುತಿದ್ದ ಬೈಕ್ ಅಪಘಾತಗೊಂಡು ಪಾದಚಾರಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ಜೂ.22 ರಂದು ನಡೆದಿದೆ. ಉಪ್ಪಿನಂಗಡಿ ಬೆಳ್ತಂಗಡಿ ರಸ್ತೆಯ ಎಚ್ಎಮ್ ಆಡಿಟೋರಿಯಂ ಸಮೀಪ ಅಪಘಾತ ಸಂಭವಿಸಿದೆ. ಪುತ್ತೂರಿನ ನೆಹರುನಗರ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಬೆಳ್ತಂಗಡಿಯ ಉಳಿ ಗ್ರಾಮದ ನಿತಿನ್ ಬೆಳಗ್ಗೆ ಕಾಲೇಜು
ಕಡಬ : ಕಳೆದ ಆರು ವರ್ಷಗಳಿಂದ ಖಾತೆ ಬದಲಾವಣೆಗೆ ಅರ್ಜಿದಾರನ್ನು ಸತಾಯಿಸುತ್ತಿದ್ದ ಪಿಡಿಓ ಇಂದು ಲಂಚ ಪಡೆಯುತ್ತಿದ್ದಾಗ ಲೋಕಾಯಯಕ್ತ ಬಲೆಗೆ ಬಿದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಎಂಬಾತ ಅರ್ಜಿದಾರರಿಂದ ಖಾತೆ ಬದಲಾವಣೆಗೆ 20 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ನೊಂದು ನೇರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲಂಚದ 20 ಸಾವಿರ ರೂಪಾಯಿ ಹಣ
ಕಡಬ: ತನ್ನದೇ ಚಿನ್ನದ ಅಂಗಡಿ ಉದ್ಘಾಟನೆಯ ತಯಾರಿಯಲಿದ್ದ ಯುವಕನೋರ್ವನ ಮೃತದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಜೂ. 22ರ ಗುರುವಾರ ಕಂಡುಬಂದಿದೆ.ಕಡಬ ನಿವಾಸಿ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ಮೃತಪಟ್ಟ ಯುವಕ. ಮರ್ಧಾಳದ ಮಸೀದಿ ಬಿಲ್ಡಿಂಗ್ ನಲ್ಲಿ ಇಂದು (ಜೂನ್ 22) ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಶುಭಾರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ
ಪುತ್ತೂರು :ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ‍್ಯಕರ್ತೆ ಭವ್ಯ (28 ವ.) ಜೂ. 20ರಂದು ರಾತ್ರಿ ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ. ಹಸುಗೂಸು ಗಂಡು ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ. ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ
ಪುತ್ತೂರು ನಗರದ ಹೊರವಲಯದ ಕಲ್ಲರ್ಪೆಯಲ್ಲಿ ಕಾರು ಹಾಗು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ನೈತಾಡಿಯ ಇಸ್ಮಾಯಿಲ್ ಮೃತಪಟ್ಟಿದ್ದಾರೆ. ಇಸ್ಮಾಯಿಲ್ ಬೆಳಿಗ್ಗೆ ಕಲ್ಲರ್ಪೆಯಲ್ಲಿರುವ ತಮ್ಮ ಜಮೀನಿಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಇಸ್ಮಾಯಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತದ ರಭಸಕ್ಕೆ ಸ್ಕೂಟರ್
ಪುತ್ತೂರು: ಮತಾಂತರದ ಪಿಡುಗು ಸಾಮಾನ್ಯವಾದುದಲ್ಲ. ಇದರ ವಿರುದ್ಧ ತಂದ ಕಾನೂನುಗಳನ್ನು ರದ್ದು ಮಾಡುವ ಮೂಲಕ ನಮ್ಮ ಮನೆಯಲ್ಲಿ ನಮಗೇ ಸ್ವಾತಂತ್ರ್ಯ ಇಲ್ಲದ ಸ್ಥಿತಿಯನ್ನು ರಾಜ್ಯ ಸರಕಾರ ಮಾಡುತ್ತಿದೆ. ಸಂತರಿಗೆ ಹಿಂದೂ ಎಂಬುದು ಮಾತ್ರ ಪಕ್ಷ. ಹಿಂದೂ ವಿರೋಧಿ ನಿಲುವುಗಳ ವಿರುದ್ಧ ಯಾವುದೇ ಸರಕಾರ ಕೆಲಸ ಮಾಡಿದರೂ ಬೀದಿಗಿಳಿದು ಹೋರಾಟ ಮಾಡಲು ಸಂತರೆಲ್ಲರೂ ಈಗಾಗಲೇ ತೀರ್ಮಾನ ಮಾಡಿದ್ದೇವೆ ಎಂದು ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ
ಬಂಟರ ಸಂಘಗಳ ವತಿಯಿಂದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಕಾರ್ಯಕ್ರಮವು ಪುತ್ತೂರಿನಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಾರ್ಗದರ್ಶನದಲ್ಲಿ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘಗಳ ಸಹಯೋಗದೊಂದಿಗೆ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಶೋಕ್
ರಾಜ್ಯದ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯಲು ನಿರ್ಧರಿಸಿರುವ ವಿಚಾರಕ್ಕೆ ಪುತ್ತೂರಿನ ಭಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ ಕಿಡಿ ಕಾರಿದ್ದಾರೆ. ಭಜರಂಗದಳ ಯಾವುದೇ ಧರ್ಮದ ವಿರೋಧಿಯಲ್ಲ. ಬಲವಂತದ, ಆಮಿಷದ ಮತಾಂತರಕ್ಕೆ ವಿರೋಧವಿದೆ. ಯಾವುದೇ ಕಾರಣಕ್ಕೂ ಕಾಯ್ದೆ ವಾಪಾಸ್ ಪಡೆಯಬಾರದು. ಒಂದು ವೇಳೆ ವಾಪಾಸ್ ಪಡೆದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು. ಹಿಂದೂ ಸಮಾಜದಿಂದ ಸರ್ಕಾರದ ವಿರುದ್ಧ ಪ್ರತಿಭಟನೆ
ಬಿಜೆಪಿ ರಾಜ್ಯಾಧ್ಯಕ್ಷರ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದನ್ನು ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಸುಮಾರು 9ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದ್ದು, ಜೂ.11ರಂದು ಪ್ರಾರಂಭವಾಗಿದ್ದು, ಜೂ.18ರವರೆಗೆ ಹವನ ನಡೆಯಲಿದೆ ನಿರಂತರ 9 ದಿನಗಳ ಕಾಲ ನಡೆಯುವ ಈ ಹೋಮದ ನೇತೃತ್ವವನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದಾರೆ. ಅತ್ಯಂತ ಗೌಪ್ಯವಾಗಿ ಈ ಹವನವನ್ನು ನಡೆಸಲಾಗುತ್ತಿದ್ದು, ಯಾವ ಉದ್ದೇಶ ಪ್ರಾಪ್ತಿಗಾಗಿ ಈ ಹೋಮ ನಡೆಸಲಾಗುತ್ತಿದೆ ಎಂಬ ವಿಚಾರವನ್ನು
ಪುತ್ತೂರು ನವತೇಜ ಟ್ರಸ್ಟ್, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ಪುತ್ತೂರು ಜೆಸಿಐ ಸಂಯುಕ್ತ ಆಶ್ರಯದಲ್ಲಿ 6ನೇ “ಹಲಸು ಮತ್ತು ಹಣ್ಣುಗಳ ಮೇಳ-2023” ಜೂ.17 ಹಾಗೂ 18 ರಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ನಡೆಯಲಿದೆ ಎಂದು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಳದಲ್ಲಿ ಸುಮಾರು 30ಕ್ಕೂ ಅಧಿಕ ಮಿಕ್ಕಿ ಹಲಸಿನ ಉತ್ಪನ್ನಗಳ ಪ್ರದರ್ಶನ




























