ಮತಾಂತರ ನಿಷೇಧ ಕಾಯ್ದೆವಾಪಾಸ್ ಪಡೆದಲ್ಲಿ ಬೀದಿಗಿಳಿದು ಹೋರಾಟ : ಭಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ

ರಾಜ್ಯದ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯಲು ನಿರ್ಧರಿಸಿರುವ ವಿಚಾರಕ್ಕೆ ಪುತ್ತೂರಿನ ಭಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ ಕಿಡಿ ಕಾರಿದ್ದಾರೆ. ಭಜರಂಗದಳ ಯಾವುದೇ ಧರ್ಮದ ವಿರೋಧಿಯಲ್ಲ. ಬಲವಂತದ, ಆಮಿಷದ ಮತಾಂತರಕ್ಕೆ ವಿರೋಧವಿದೆ. ಯಾವುದೇ ಕಾರಣಕ್ಕೂ ಕಾಯ್ದೆ ವಾಪಾಸ್ ಪಡೆಯಬಾರದು. ಒಂದು ವೇಳೆ ವಾಪಾಸ್ ಪಡೆದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು. ಹಿಂದೂ ಸಮಾಜದಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.