Home ಕರಾವಳಿ Archive by category ಪುತ್ತೂರು (Page 58)

ಕಡಬ : ರೈಲು ಇಂಜಿನ್ ಢಿಕ್ಕಿಯಾಗಿ ವ್ಯಕ್ತಿ ಗಂಭೀರ

ಕಡಬ: ರೈಲು ನಿಲ್ದಾಣದ ಬಳಿ ಆಕಸ್ಮಿಕವಾಗಿ ರೈಲು ಇಂಜಿನ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬದ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ನೆಟ್ಟಣದಲ್ಲಿ ನಡೆದಿದೆ. ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಗಂಭೀರ ಗಾಯಗೊಂಡ ವ್ಯಕ್ತಿ. ರೈಲು ಇಂಜಿನ್ ಢಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು ತುರ್ತು

ಬೆಳ್ಳಾರೆಯಲ್ಲಿ ವೇದಾಮೃತ ಚಿಕಿತ್ಸಾಲಯ ಆರಂಭ

ಸುಳ್ಯ ತಾಲೂಕಿನ ಬೆಳ್ಳಾರೆಯ ಕೆಳಗಿನ ಪೇಟೆ ಸಿ.ಎ.ಬ್ಯಾಂಕಿನ ಹತ್ತಿರ ಹರ್ಷ ಕಾಂಪ್ಲೆಕ್ಸ್ ನಲ್ಲಿ ಡಾ| ಕಾವ್ಯಾ ಜೆ.ಎಚ್ ಅವರ ವೇದಾಮೃತ ಆಯುರ್ವೇದ ಚಿಕಿತ್ಸಾಲಯವು ಅ.10 ರಂದು ಇಂದು ಶುಭಾರಂಭಗೊಂಡಿದೆ ವೇದಾಮೃತ ಚಿಕಿತ್ಸಾಲಯದಲ್ಲಿ ಪ್ರಮುಖವಾಗಿ ಸೋರಿಯಾಸಿಸ್, ಏಕ್ಸಿಮಾ, ಮೊಡವೆ ಮುಂತಾದ ಚರ್ಮರೋಗಗಳು, ರುಮಾಟೈಡ್ ಆರ್ಥ್ರೈಟಿಸ್, ಆಸ್ಟಿಯೋ ಆರ್ಥ್ರೈಟಿಸ್, ಕತ್ತುನೋವು, ಸೊಂಟನೋವು, ಮಂಡಿನೋವು, ಪಾರ್ಶ್ವವಾಯು, ಬೆಲ್ಸ್ ಪಾಲ್ಸಿ, ಮಸ್ಕ್ಯುಲರ್ ದಿಸ್ಟ್ರೋಫಿ,

ನೆಲ್ಯಾಡಿ ಪ್ರೊಫೆಷನಲ್ ಕೊರಿಯರ್ ನ ಶೆಬಿನ್ ನೇಣಿಗೆ ಶರಣು

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಮೊರಂಕಲ ನಿವಾಸಿ ಶೆಬಿನ್ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದ ಕೆಲವು ವರ್ಷಗಳಿಂದ ನೆಲ್ಯಾಡಿ ಯಲ್ಲಿ ಪ್ರೊಫೆಷನಲ್ ಕೊರಿಯರನ್ನು ನಡೆಸುತ್ತಿದ್ದ ಇವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜೇಶ್, ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಹಾಗೂ ಪೋಲಿಸ್

ಪಾಟ್ರಕೋಡಿ ಗಾಂಜಾ ಪ್ರಕರಣ:ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪುತ್ತೂರು: ವರ್ಷದ ಹಿಂದೆ ಪಾಟ್ರಕೋಡಿಯಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪಾಟ್ರಕೋಡಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಪ್ರಕರಣದಲ್ಲಿ ಪತ್ತೆ ಮಾಡಿದ ಪೆÇಲೀಸರು ಅರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 2ನೇ ಆರೋಪಿ ಕಾಸರಗೋಡು ಮಂಜೇಶ್ವರ ಹೊಸಂಗಡಿ ನಿವಾಸಿ ಮಹಮ್ಮದ್ ಶಫೀಕ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ

ಸುಳ್ಯ : ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ವಿರುದ್ದ ಆಕ್ರೋಶ

ರಾಜ್ಯ ಬಿಜೆಪಿ ಸರಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಆಡಳಿತಕ್ಕೆ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಲಾಗಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ಈ ತಿದ್ದುಪಡಿಯನ್ನು ರಾಜ್ಯ ಸರಕಾರ ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು ಗೊಳಿಸುವ ವಿರುದ್ದ ಸುಳ್ಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಳ್ಯದ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾಂಗ್ರೆಸ್

ಬೆಳ್ಳಾರೆ : ತಂಬಿನಮಕ್ಕಿಯಲ್ಲಿ ಬೈಕ್ ಗಳ ಪರಸ್ಪರ ಡಿಕ್ಕಿ

ಬೆಳ್ಳಾರೆ ‌ ಗ್ರಾಮದ ತಂಬಿನಮಕ್ಕಿ ಬಳಿ ನಿನ್ನೆ ರಾತ್ರಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿ ಕೊಡಿಯಾಲದ ಗುತ್ತಿನಮನೆ ನಾರಾಯಣ ಎಂಬುದಾಗಿ ತಿಳಿದು ಬಂದಿದೆ.ಘಟನೆಯಿಂದ ಮತ್ತೋರ್ವರಾದ ಸುಜಿತ್ ಗುತ್ತಿನಮನೆ ಎಂಬುವವರು ಗಾಯಾಳಾಗಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ನೆಲ್ಯಾಡಿ: ಶಾರ್ಟ್‌ಸರ್ಕ್ಯೂಟ್‌ನಿಂದ ಕಾರು ಭಸ್ಮ

ನೆಲ್ಯಾಡಿ : ಸ್ವಿಫ್ಟ್ ಕಾರೊಂದರ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಕಾರಣ ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಸರಕಾರಿ ಶಾಲೆಯ ಬಳಿ ಸಂಭವಿಸಿದೆ. ಕಾರಿನಲ್ಲಿ ಪುತ್ತೂರು ಮೂಲದ ಗೋಕುಲದಾಸ ಹಾಗೂ ಮೆಲ್ವಿನ್ ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ಪ್ರಯಾಣಿಕರಿಬ್ಬರೂ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅತಿವೃಷ್ಟಿಯಿಂದಾಗಿ ಅಡಿಕೆ ಬೆಳೆಗೆ ಉಂಟಾದ ಹಾನಿ : ಪರಿಹಾರ ನೀಡುವಂತೆ ಒತ್ತಾಯ

ಪುತ್ತೂರು : ಅತಿವೃಷ್ಠಿಯಿಂದ ಅಡಿಕೆ ಬೆಳೆಗೆ ಉಂಟಾದ ಹಾನಿಗೆ ಪರಿಹಾರ ಮತ್ತು ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿಯಲ್ಲಿದ್ದು, ಅವುಗಳನ್ನು ತಕ್ಷಣವೇ ರದ್ದುಗೊಳಿಬೇಕೆಂದು ಆಗ್ರಹಿಸಿ ರೈತಸಂಘ,ಹಸಿರು ಸೇನೆಯಿಂದ ಪುತ್ತೂರು ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟಮೆ ನಡೆಯಿತು. ರೈತಸಂಘದ ಕಛೇರಿಯಿಂದ ಮೆರವಣಿಗೆ ಮೂಲಕ ಹೊರಟ ರೈತಸಂಘದ ಕಾರ್ಯಕರ್ತರು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಸೇರಿ ಪ್ರತಿಭಟನೆ ನಡೆಸಿದರು. ಈ

ಪುತ್ತೂರು : 21ನೇ ಕನ್ನಡ ಸಾಹಿತ್ಯ ಸಮ್ಮೇಳನ

ಪುತ್ತೂರು : ಕನ್ನಡ ಭಾಷೆ ನಿಜವಾದ ಅರ್ಥದಲ್ಲಿ ಉಳಿದಿದೆ, ಉಳಿಯುತ್ತಿದೆ, ಬೆಳೆಯುತ್ತಿದೆ ಎಂದಾದರೆ, ಅದು ಹಳ್ಳಿಗಳಲ್ಲಿ, ಹೋಬಳಿಗಳಲ್ಲಿ ಮತ್ತು ತಾಲೂಕುಗಳಲ್ಲಿ ಮಾತ್ರ. ಕನ್ನಡ ಸಾಹಿತ್ಯ ಪರಿಷತ್ಗೆ ಭದ್ರ ಅಡಿಪಾಯ ಹಾಕಿರುವುದು ಹಳ್ಳಿಗಳು, ಹೋಬಳಿಗಳು ಮತ್ತು ತಾಲೂಕುಗಳು. ಹಾಗಾಗಿ ನಾನು ತಾಲೂಕು ಮಟ್ಟ ಮಾತ್ರವಲ್ಲದೆ, ಹೋಬಳಿ, ಗ್ರಾಮ ಮಟ್ಟಕ್ಕೂ ಹೋಗುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಕನ್ನಡ ಸಾಹಿತ್ಯ

ಕೇರಳದಲ್ಲಿ ರೈಲಿನಿಂದ ಬಿದ್ದು ವಿಟ್ಲದ ಯುವಕ ಮೃತ್ಯು

ವಿಟ್ಲ: ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ವಿಟ್ಲ ಸಮೀಪದ ಕಡಂಬು ಎಂಬಲ್ಲಿಯ ಯುವಕ ಮೃತಪಟ್ಟಿದ್ದಾರೆ.ವಿಟ್ಲ ಸಮೀಪದ ಕಡಂಬು ನಿವಾಸಿ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ ಉಸ್ಮಾನ್ ಅವರ ಪುತ್ರ ಮಹಮ್ಮದ್ ಅನಾಸ್(19) ಮೃತಪಟ್ಟ ಯುವಕ. ಈತ ಎಸಿ ಮೆಕಾನಿಕ್ ಆಗಿದ್ದು, ಎಸಿ ಟ್ರೈನಿಂಗ್ ಗಾಗಿ ಕೇರಳದ ಕೊಚ್ಚಿಗೆ ತೆರಳಿದ್ದರು. ತನ್ನ ಕೆಲಸ ಕಾರ್ಯ ಮುಗಿಸಿ, ಊರಿಗೆ ಟೈನ್ ನಲ್ಲಿ ಹಿಂತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊರಗಡೆ ಎಸೆಯಲ್ಪಟ್ಟು, ಸ್ಥಳದಲ್ಲೇ