ಕಡಬ: ಕೋಳಿ ಹಿಡಿಯಲೆಂದು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ.ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆಯ ರಕ್ಷಣಾ ಕಾರ್ಯ ಅರಣ್ಯ ಇಲಾಖೆಯಿಂದ ಆರಂಭಗೊಂಡಿದೆ.
ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯಂದು ಒಳಗಾದ ದೇವರ ಬಲಿ ಉತ್ಸವ ವಾಡಿಕೆಯಂತೆ ದೀಪಾವಳಿ ಅಮವಾಸ್ಯೆ ದಿನದಂದು ಸಂಪ್ರದಾಯದಂತೆ ಆರಂಭಗೊಂಡಿದೆ. ಕಳೆದ ರಾತ್ರಿ ಶ್ರೀ ದೇವರ ಬಲಿ ಹೊರಟು ದೀಪಾವಳಿ ಉತ್ಸವ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವೇದ.ಮೂ.ವಿ.ಎಸ್.ಭಟ್ ಮತ್ತು ವೇ.ಮೂ. ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಉತ್ಸವಾದಿಗಳು ನಡೆಯಿತು. ದೇವಳದ ಪ್ರಾಕಾರ ಗುಡಿಗಳಲ್ಲಿ ಹೂವಿನ ಪೂಜೆ
ಪುತ್ತೂರು: ಹಿಂದೂ ಸಮಾಜದ ಶಕ್ತಿಯನ್ನು ವೃದ್ಧಿಸಲು ನಮ್ಮ ಮನಸ್ಸು ಮತ್ತು ಹೃದಯ ಬೆಳಕಾಗಬೇಕು. ಅದಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ದೀಪದ ಬೆಳಕು ಎಲ್ಲರ ಮನೆ ಮನೆಯಲ್ಲಿ ಬೆಳಗಲಿ. ಮನೆ ದೇವಸ್ಥಾನ ಆಗಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವಿಭಾಗದ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಉರ್ಲಾಂಡಿ
ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕೊಡನೀರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿ ಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನ .1 ರಂದು ನಡೆದಿದೆ.ಪೆರಮೊಗರಿನ ಕೋಳಿ ಅಂಗಡಿಯ ಸೋಮಶೇಖರ್ ರೈ ಮೃತಪಟ್ಟವರು.ಇವರು ಮೂಲತ: ಸವಣೂರು ಪುಣ್ಚಪ್ಪಾಡಿ ನಿವಾಸಿಯಾಗಿದ್ದು ಸದ್ಯ ಪೆರಮೊಗರಿನಲ್ಲಿ ವಾಸವಾಗಿದ್ದರು . ಇವರಿಗೆ ಪುಣ್ಚಪ್ಪಾಡಿಯಲ್ಲಿ ತೋಟವಿದ್ದು ಅಲ್ಲಿ ಕೆಲಸ ಮಾಡಿಸಿ ವಾಪಸ್ಸು ಪೆರಮೊಗರುವಿಗೆ
ಪುತ್ತೂರು: ದೇಶದ ಜನರ ಸೇವೆ ಮತ್ತು ದೇಶಾಭಿಮಾನಕ್ಕಾಗಿ ಬಿಜೆಪಿ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಹಾಗಾಗಿ ಬಿಜೆಪಿಯ ಕಾರ್ಯಕರ್ತರಿಗೆ ರಾಜಕಾರಣ ವೃತ್ತಿಯಲ್ಲ, ಅದೊಂದು ವೃತವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು ಭಾರತೀಯ ಜನತಾ ಪಾರ್ಟಿ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕಲ ಅನಾವರಣ ಕಾರ್ಯಕ್ರಮಗಳು ಈಗಾಗಲೇ ನಡೆಯುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲದ ಬೂತ್ ಅಧ್ಯಕ್ಷರ ಮನೆಗಳಿಗೆ
ಕಡಬ: ಸಾರ್ವಜನಿಕರಿಗೆ ನಿಷ್ಪಕ್ಷಪಾತ ಸೇವೆ ನೀಡುವುದೇ ಅಧಿಕಾರಿಗಳ ಕೆಲಸ, ಯಾವುದೇ ಕಾರಣಕ್ಕೆ ಸಾರ್ವಜನಿಕರನ್ನು ಸತಾಯಿಸಬಾರದು ಎಂದು ಕರ್ನಾಟಕ ಲೋಕಾಯುಕ್ತ ಪೋಲಿಸ್‌ನ ದ.ಕ. ಜಿಲ್ಲಾ ಉಪ ಅಧೀಕ್ಷಕ ಚೆಲುವರಾಜು ಅವರು ಹೇಳಿದರು ಅವರು ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತ ಪೋಲಿಸರಿಂದ ನಡೆದ ಅರಿವು ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರಿಗಳು ಮತ್ತು ಸಾರ್ವಜನಿಕರು ಭ್ರಷ್ಟಚಾರ ರಹಿತ ಕೆಲಸ ಮಾಡಬೇಕು, ಲಂಚ
ಪುತ್ತೂರು: 10 ಜನಕ್ಕೂ ಹೆಚ್ಚಿರುವ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಸೇರಿದಂತೆ ಎಲ್ಲೆಡೆ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಈ ಮೂರು ಗೀತೆಗಳನ್ನು ಅ.28ರಂದು ಬೆಳಿಗ್ಗೆ ಗಂಟೆ 11ಕ್ಕೆ ಏಕಕಾಲಕ್ಕೆ ಹಾಡಬೇಕೆಂಬ ನಿರ್ದೇಶನದಂತೆ ಪುತ್ತೂರು ಮಿನಿ ವಿಧಾನ ಸೌಧ ಸಭಾಂಗಣ ದಲ್ಲಿ ಲಕ್ಷ ಕಂಠಗಳ ಗೀತ ಗಾಯನ
ಪುತ್ತೂರು: ಕರ್ನಾಟಕ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಡೆಸಿದ ಎಂ.ಡಿ ಪೀಡಿಯಾಟ್ರಿಕ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಚೈತ್ರಾ ಪಿ ರವರು ಪ್ರಥಮ ರ‍್ಯಾಂಕ್ ನ್ನು ಗಳಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಈಕೆ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2010ರಲ್ಲಿ ಪೂರೈಸಿ ಬಳಿಕ ಎಂಬಿಬಿಎಸ್ ಪದವಿಯನ್ನು ಹಾಸನ ಮೆಡಿಕಲ್ ಕಾಲೇಜಿನಲ್ಲಿ ಪಡೆದು ಎಂ.ಡಿ ಪೀಡಿಯಾಟ್ರಿಕ್ಸ್ ನ್ನು
ಪುತ್ತೂರು: ಬಡಗನ್ನೂರಿನಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣರಾದ ಆರೋಪ ಎದುರಿಸುತ್ತಿರುವ ಕುದ್ಕಾಡಿ ನಾರಾಯಣ ರೈಯವರನ್ನು ವಿಚಾರಣೆಗಾಗಿ ಪುತ್ತೂರು ಸೆಷೆನ್ಸ್ ನ್ಯಾಯಾಲಯ ಎರಡು ದಿನ ಪೊಲೀಸ್ರ ವಶಕ್ಕೆ ಒಪ್ಪಿಸಿ ಆದೇಶಿಸಿತ್ತು. ಆದೇಶದ ಬೆನ್ನಲ್ಲೆ ಅನಾರೋಗ್ಯದ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ನಾರಾಯಣ ರೈ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪುತ್ತೂರು : ಪುತ್ತೂರು ತಾಲೂಕಿನ ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿ ಎಂದು ಬಾಲಕಿ ಹೆಸರಿಸಿರುವ ಕುದ್ಕಾಡಿ ನಾರಾಯಣ ರೈ ಯವರು ಇಂದು ಪುತ್ತೂರಿನ ನ್ಯಾಯಾಲಯಕ್ಕೆ ಶರಣರಾಗಿದ್ದಾರೆ.ನಾರಾಯಣ ರೈ ಯವರು ತನ್ನ ಪರ ವಕೀಲರಾದ ಮಹೇಶ್ ಕಜೆಯವರ ಜತೆ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣರಾದರು. ಬಡಗನ್ನೂರಿನ 17ರ ಹರೆಯದ ಅಪ್ರಾಪ್ತ ದಲಿತ ಸಮುದಾಯದ ಬಾಲಕಿಯು ಸೆ.5 ರಂದು ಮಗುವಿಗೆ ಜನ್ಮ


















