Home ಕರಾವಳಿ Archive by category ಬಂಟ್ವಾಳ (Page 25)

ಕಾರ್ಮಿಕ ವಿರೋಧಿ ಬಿ.ಜೆ.ಪಿ ಸರಕಾರವನ್ನು ಸೋಲಿಸಿ – ಕಾಮ್ರೇಡ್ ಪಿ.ಪಿ.ಅಪ್ಪಣ್ಣ

ಬಂಟ್ವಾಳ : ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದ.ಕ ಜಿಲ್ಲಾ ಸಮಾವೇಶ ಬಿ.ಸಿ.ರೋಡಿ ನಲ್ಲಿ ನಡೆಯಿತು.ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಎ.ಐ.ಸಿ‌.ಸಿ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪಿ.ಪಿ.ಅಪ್ಪಣ್ಣ ಮಾತನಾಡಿ ಎ.ಐ‌.ಸಿ.ಸಿ.ಟಿ.ಯು ಸಂಘಟನೆ ಒಂದು ಕೇಂದ್ರ ಕಾರ್ಮಿಕ ಸಂಘಟನೆಯಾಗಿದ್ದು ಕಾರ್ಮಿಕರ

ಬಂಟ್ವಾಳ: ಹೆಜ್ಜೇನು ನೊಣಗಳು ದಾಳಿ : ಒರ್ವನಿಗೆ ಗಂಭೀರ ಗಾಯ

ಬಂಟ್ವಾಳ: ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರು ವ್ಯಕ್ತಿಗಳಿಗೆ ಹೆಜ್ಜೇನು ನೊಣಗಳು ದಾಳಿ ನಡೆಸಿ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ನಡೆದಿದೆ. ಘಟನೆಯಲ್ಲಿ ಒರ್ವ ಗಂಭೀರವಾಗಿ ಗಾಯಗೊಂಡಿದ್ದು, ಇನ್ನಿಬ್ಬರ ಅಲ್ಪಸ್ವಲ್ಪ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಆದಿತ್ಯವಾರ ಮಧ್ಯಾಹ್ನ  ಕಲ್ಪನೆ ಎಂಬಲ್ಲಿ ನಡೆದಿದೆ. ಕಲ್ಪನೆ ನಿವಾಸಿ ಪೂವಪ್ಪ ( 61) ಗಂಭೀರವಾಗಿ ಗಾಯವಾಗಿದ್ದು,ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು,

ಬ್ರಹ್ಮರಕೋಟ್ಲು ಟೋಲ್‍ಗೇಟ್ ಅವ್ಯವಸ್ಥೆ ವಿರುದ್ಧ ಆಕ್ರೋಶ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ಅವ್ಯವಸ್ಥೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ , ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ತುಂಬೆ ತಿಳಿಸಿದ್ದಾರೆ. ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ

ಮಾ.10ರಂದು ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಆರಂಭ

ಬಂಟ್ವಾಳ: ಕಾಂಗ್ರೆಸ್ ಪಕ್ಷದ ವತಿಯಿಂದ ಬಂಟ್ವಾಳ ಕ್ಷೇತ್ರದಾದ್ಯಂತ ಗ್ರಾಮಗಳನ್ನು ತಲುಪುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಮಾರ್ಚ್ 10ರಿಂದ ಆರಂಭಗೊಳ್ಳಲಿದ್ದು, 14 ದಿನಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಐದು ವರ್ಷಗಳ ಶಾಸಕತ್ವದ ಅವಧಿಯಲ್ಲಿ ಸಿದ್ಧರಾಮಯ್ಯ ಸರಕಾರ ಮೂಲಕ ಕ್ಷೇತ್ರದಾದ್ಯಂತ ಕೈಗೊಳ್ಳಲಾದ 5 ಸಾವಿರ

ಕೇಂದ್ರ ಸರ್ಕಾರದ ನಿಕ್ಷಯ ಮಿತ್ರ ಯೋಜನೆ

ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಸೋಮವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗ ನಿವಾರಣೆಗೆ ಔಷಧಿಯಷ್ಟೇ ಪೌಷ್ಟಿಕಾಹಾರ ಸೇವೆನೆಯೂ ಮುಖ್ಯ. ಆದ್ದರಿಂದ ಸೇವಾಂಜಲಿ ಪ್ರತಿಷ್ಠಾನವು ತಾಲೂಕಿನ ಕ್ಷಯ ರೋಗಿಗಳನ್ನು

ಪಾಟ್ನಾ ಬಾಂಬ್ ಪ್ರಕರಣ : ಬಂಟ್ವಾಳದ ನಾಲ್ವರು ಆರೋಪಿಗಳ ಮನೆಗೆ ಎನ್.ಐ.ಎ ದಾಳಿ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಪಾಟ್ನಾ ದ ಕಾರ್ಯಕ್ರಮವನ್ನು ವಿಫಲಗೊಳಿಸಬೇಕು ಎಂಬ ನಿಟ್ಟಿನಲ್ಲಿ ಬಾಂಬ್ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸಿನ ನೆರವು ಒದಗಿಸಿದ ಬಂಟ್ವಾಳ ಮ‌ೂಲದ ನಾಲ್ವರು ಆರೋಪಿಗಳ ಮನೆಗೆ ಎನ್.ಐ.ಎ ತಂಡ ದಾಳಿ ನಡೆಸಿ ತನಿಖೆ ನಡೆಸಿದೆ. ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್, ನೌಫಲ್ ಮನೆಗೆ ದಾಳಿ ನಡೆದಿದ್ದು, ಈ ಅರೋಪಿಗಳು ಪಾಟ್ನಾ ದ ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ

ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗದ ವಿರುದ್ಧ ಮಾ.8 ರಂದು ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆ

ಬಂಟ್ವಾಳ: ರೈತರ ವಿರೋಧದ ನಡುವೆಯೂ  ಕೃಷಿ ಭೂಮಿಯನ್ನು ನಾಶಪಡಿಸಿ,  ರೈತರ ಹಿತಾಸಕ್ತಿ ಕಾಪಾಡದೆ  ಉಡುಪಿ – ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹಾದುಹೋಗಲು ಶತಾಯ ಗತಯ ಪ್ರಯತ್ನ ಪಡುತ್ತಿರುವ ಕಂಪೆನಿ ಹಾಗೂ ಜಿಲ್ಲಾಡಳಿತದ ವಿರುದ್ಧ ಮಾ. 8ರಂದು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ

ಬಂಟ್ವಾಳ: ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ

ಬಂಟ್ವಾಳ: ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರವನ್ನುನ ಆಗ್ರಹಿಸಿ ಮಾ. 1 ರಿಂದ ನಡೆಯುವ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯು ಬೆಂಬಲ ವ್ಯಕ್ತಪಡಿಸಿರುವುದಾಗಿ ಸಂಘದ ಅಧ್ಯಕ್ಷ ಉಮನಾಥ ರೈ ಮೇರಾವು ತಿಳಿಸಿದರು. ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ, ಫೆ.21ರಂದು

ನಾವೂರು ಗ್ರಾ.ಪಂ. ಆಡಳಿತ ಅವ್ಯವಸ್ಥೆ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

ಬಂಟ್ವಾಳ: ನಾವೂರು ಗ್ರಾಮ ಪಂಚಾಯತಿಯಲ್ಲಿ ಆಗುತ್ತಿರುವ ಅವ್ಯವಸ್ಥೆಯ ವಿರುದ್ಧ ಬಿಜೆಪಿ ವತಿಯಿಂದ ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿಯಿತು.9/11, ಕಟ್ಟಡ ಪರವಾನಿಗೆ , ನಿರಾಕ್ಷೇಪಣಾ ಪತ್ರ, ಕಾಲುದಾರಿ ಸಮಸ್ಯೆ , ಪಂಚಾಯತಿ ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗೂ ಗ್ರಾಮ ಸಭೆಯಲ್ಲಿ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಸ್ಪಂದಿಸದ ಕಾರಣ

ಫೆ.25ರಂದು ಕಲ್ಲಡ್ಕ ಕಟ್ಟೆಮಾರಿನ ಶ್ರೀ ಮಂತ್ರದೇವತಾ ಸಾನಿಧ್ಯ ವಾರ್ಷಿಕ ಕೋಲೋತ್ಸವ

ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯ. ಕಲ್ಲಡ್ಕದ ಅಮ್ಟೂರಿನಲ್ಲಿರುವ ಈ ಸಾನಿಧ್ಯವು ಹಲವಾರು ಕಾರಣಿಕ ಶಕ್ತಿಯ ಮೂಲಕ ಹೆಸರುವಾಸಿಯಾಗಿದೆ. ಕಷ್ಟ ಅಂತ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿದ ಪುಣ್ಯ ಸಾನಿಧ್ಯ. ಇದೀಗ ಕ್ಷೇತ್ರದಲ್ಲಿ ಮನೋಜ್ ಕಟ್ಟೆಮಾರ್ ನೇತೃತ್ವದಲ್ಲಿ ಇದೇ ಬರುವ ಫೆ.25ರಂದು ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರದೇವತೆ ದೈವದ ವೈಭವದ ವಾರ್ಷಿಕ ಕೋಲೋತ್ಸವ ನಡೆಯಲಿದೆ. ಹಾಗೂ ಫೆ.26ರಂದು ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ