Home ಕರಾವಳಿ Archive by category ಬೆಳ್ತಂಗಡಿ (Page 17)

ನೆಲ್ಯಾಡಿ: ಕಾಡಾನೆ ದಾಳಿ ತಡೆಗಟ್ಟುವ ಬಗ್ಗೆ ತಜ್ಞರಿಂದ ಮಾಹಿತಿ ಹಾಗೂ ಪ್ರಾತ್ಯಕ್ಷತೆ

ನೆಲ್ಯಾಡಿ: ಅರಣ್ಯ ಇಲಾಖೆ ವತಿಯಿಂದ ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಅರ್ಥೋಡಾಕ್ಸ್ ಸೀರಿಯನ್ ಚರ್ಚ್‍ನಲ್ಲಿ ನಾಗರಿಕರಿಗೆ ಕಾಡಾನೆಗಳು ತೋಟಕ್ಕೆ ಬರದಂತೆ ತಡೆಗಟ್ಟುವ ಹಾಗೂ ಬಂದರೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ತಜ್ಞರಾದ ಡಾ.ರುದ್ರಾಧಿತ್ಯ ವಿಕ್ರಂ ಷಾ ರವರು ಮಾಹಿತಿಯನ್ನು

ಚಾಲಕನ ನಿಯಂತ್ರಣ ತಪ್ಪಿ ಹೊಳೆ ಬದಿಗೆ ಬಿದ್ದ ಕಾರು

ಪಟ್ರಮೆ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಳೆ ಬದಿಗೆ ಬಿದ್ದ ಘಟನೆ ಸೆ.5 ರಂದು ಬೆಳಿಗ್ಗೆ ನಡೆದಿದೆ. ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಳೆಯ ಬದಿಗೆ ಬಿದ್ದಿದೆ ಎನ್ನಲಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾವಣಗೆರೆಯ ಕಾರಾಗಿದ್ದು, ಕಾರಿನಲ್ಲಿ ಚಾಲಕ ಮಾತ್ರ ವಿದ್ದು, ಈತ ವಿಪರೀತ ಮದ್ಯಪಾನ ಸೇವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ರಕ್ಷಿತಾರಣ್ಯದಿಂದ ಅಕ್ರಮ ಮರ ಸಾಗಾಟ ಪತ್ತೆ; ಲಾರಿ,ಸೊತ್ತು ಸಹಿತ ಸೊತ್ತು ಓರ್ವನ ಬಂಧನ

ನೆಲ್ಯಾಡಿ : ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಲಾರಿ ಸಹಿತ ಸೊತ್ತು ವಶಲಾರಿಯೊಂದರಲ್ಲಿ ಹೆಬ್ಬಲಸು, ನಂದಿ, ಬಣ್ಪು, ಸೇರಿದಂತೆ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖಾಧಿಕಾರಿಗಳು ಸುಬ್ರಹ್ಮಣ್ಯ ಕ್ರಾಸ್‌ ಬಳಿ ತಪಾಸಣೆ ನಡೆಸಿ ಮರಮಟ್ಟುಗಳನ್ನು

ಬೆಳ್ತಂಗಡಿ: ಸ್ವರಾಜ್ ಆತ್ಮಹತ್ಯೆಗೆ ಲೋನ್ ಆ್ಯಪ್ ಕಿರುಕುಳ ಕಾರಣವೇ?

ಬೆಳ್ತಂಗಡಿಯ ಪುದುವೆಟ್ಟುನಲ್ಲಿ ಗುರುವಾರ ಕಬಡ್ಡಿ ಆಟಗಾರ, 24ರ ಹರೆಯದ ಸ್ವರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ಲೋನ್ ಆ್ಯಪ್ ಕಿರುಕುಳವೇ ಕಾರಣ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ, ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ವರಾಜ್ ನಿನ್ನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿರುವ ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ. ಇದೀಗ ಆತ ಲೋನ್ ಆ್ಯಪ್ ಮೂಲಕ ಪಡೆದ ಸಾಲವೇ ಸಾವಿಗೆ

ಬೆಳ್ತಂಗಡಿ: ಕಬಡ್ಡಿ ಆಟಗಾರ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಪುದುವೆಟ್ಟು ಎಂಬಲ್ಲಿ ನಡೆದಿದೆ.ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24 ) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಸ್ವರಾಜ್ ಪ್ರಸುತ್ತ ಧರ್ಮಸ್ಥಳದಲ್ಲಿ ವಾಸವಾಗಿದ್ದು, ಇಂದು ಪುದುವೆಟ್ಟುವಿನಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅತ್ಯುತ್ತಮ ಕಬಡ್ಡಿ ಆಟಗಾರರಾಗಿದ್ದ ಇವರು ಉಜಿರೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ

ಪುಂಜಾಲಕಟ್ಟೆ: ಹೃದಯಾಘಾತದಿಂದ ಯುವತಿ ಸಾವು

ಯುವತಿಯೋರ್ವಳು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆಯ ಮಧ್ವಗುತ್ತು ಎಂಬಲ್ಲಿ ಸಂಭವಿಸಿದೆ. ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ-ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (19) ಮೃತಪಟ್ಟವರಾಗಿದ್ದಾರೆ. ಮೂಲತ: ಕಾವಳಮೂಡೂರು ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದು, ಪ್ರಸ್ತುತ ಮಿತ್ರಾ ಅವರು ಬಿ.ಸಿ.ರೋಡ್‍ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಮಧ್ವದಲ್ಲಿ ದೊಡ್ಡಮ್ಮನ

ಬಿಸಿ ರೋಡ್: ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ: ರಿಕ್ಷಾ ಚಾಲಕನಿಗೆ ಗಂಭೀರ ಗಾಯ

ಕಾರೊಂದು ಆಟೋ ರಿಕ್ಷಾಕ್ಕೆ ಢಿಕ್ಕಿಯಾದ ಘಟನೆ ಬಿ.ಸಿ ರೋಡ್‍ನ ರೈಲು ನಿಲ್ದಾಣದ ಬಳಿ ನಡೆದಿದೆ. ಅಪಘಾತದ ಪರಿಣಾಮ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ || ರಾಜ್ಯ ಸರ್ಕಾರದ ಜನಪರ ಯೋಜನೆ ಜನಸಾಮಾನ್ಯರಿಗೆ ತಲುಪಬೇಕು : ಸಚಿವ ಶರಣಬಸಪ್ಪ ದರ್ಶನಾಪೂರ

ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಯಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಸಿ ಮಾತನಾಡಿದರು. ಬಳಿಕ ಸಚಿವರು ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು.

ಧರ್ಮಸ್ಥಳ: ನೇತ್ರಾವತಿ ನದಿಯ ಅಂಬ್ಯ ದಡದಲ್ಲಿ ವ್ಯಕ್ತಿಯ ಶವ ಪತ್ತೆ

ಧರ್ಮಸ್ಥಳದ ನೇತ್ರಾವತಿ ನದಿಯ ತೀರದಲ್ಲಿ ಅನಾಥ ಶವ ಪತ್ತೆಯಾದ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ನದಿಯಲ್ಲಿ ಮೃತದೇಹ ಕಂಡು ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಬಂದ ತಂಡದವರು ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಧರ್ಮಸ್ಥಳ, ಬೆಳಾಲು, ಉಜಿರೆಯ ವಿಪತ್ತು ತಂಡದ ಸದಸ್ಯರು ಶವವನ್ನು ಮೇಲಕ್ಕೆತ್ತಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲ್ಯಾಡಿ: ಬೈಕ್ ಮತ್ತು ಕಾರುಗಳ ಮಧ್ಯೆ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರ ತಾ.ಪಂ ಮಾಜಿ ಸದಸ್ಯ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಮಧ್ಯೆ ನೆಲ್ಯಾಡಿ ಎಚ್‍ಪಿ ಪೆಟ್ರೋಲ್ ಬಂಕ್ ನ ಬಳಿ ಆಲ್ಟೊ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಕಾಲಿಗೆ ತೀವ್ರವಾದ ಗಾಯವಾಗಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ನೆಲ್ಯಾಡಿಯಿಂದ ಮಂಗಳೂರಿಗೆ ತೆರಳುತ್ತಿರುವ ಆಲ್ಟೊ ಕಾರು ಹಾಗೂ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಅನ್ನು