ರಕ್ಷಿತಾರಣ್ಯದಿಂದ ಅಕ್ರಮ ಮರ ಸಾಗಾಟ ಪತ್ತೆ; ಲಾರಿ,ಸೊತ್ತು ಸಹಿತ ಸೊತ್ತು ಓರ್ವನ ಬಂಧನ

ನೆಲ್ಯಾಡಿ : ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಲಾರಿ ಸಹಿತ ಸೊತ್ತು ವಶ
ಲಾರಿಯೊಂದರಲ್ಲಿ ಹೆಬ್ಬಲಸು, ನಂದಿ, ಬಣ್ಪು, ಸೇರಿದಂತೆ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖಾಧಿಕಾರಿಗಳು ಸುಬ್ರಹ್ಮಣ್ಯ ಕ್ರಾಸ್‌ ಬಳಿ ತಪಾಸಣೆ ನಡೆಸಿ ಮರಮಟ್ಟುಗಳನ್ನು ಸಾಗಾಟಕ್ಕೆ ಬಳಸಿದ ಲಾರಿಯೊಂದಿಗೆ ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಂಟ್ವಾಳ ತಾಲೂಕು ಪಂಜಿಕರ್‌ ಗ್ರಾಮದ ನಿವಾಸಿ ಜೀವನ್‌ರಾಜ್‌ನನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್‌, ಉಪವಲಯ ಅರಣ್ಯಾಧಿಕಾರಿ ರಾವುತ್ತಪ್ಪ ಬಿರಾದಾರ್‌, ರೆಖ್ಯ ಉಪವಲಯ ಅರಣ್ಯಾಧಿಕಾರಿ ಸಂತೋಷ್‌ ತಡ್ಲಾಗಿ, ರಾಜೇಶ್‌, ಪ್ರತಾಪ್‌, ರವಿ, ಕಿಶೋರ್‌ ಭಾಗವಹಿಸಿದ್ದರು.

Related Posts

Leave a Reply

Your email address will not be published.