Home Archive by category ಕ್ರೈಮ್ (Page 10)

ಮಂಗಳೂರು ಸಿ.ಎಸ್.ಐ ಸಭಾಪ್ರಾಂತ ಕಛೇರಿಯಲ್ಲಿ ಮಹಿಳೆಗೆ ಕಿರುಕುಳ : ರೇಶ್ಮಾ ಸೋನ್ಸ್ ಅವರಿಂದ ದೂರು

ಮಂಗಳೂರಿನ ಬಲ್ಮಠದಲ್ಲಿರುವ ಸಿ.ಎಸ್.ಐ ,ಕೆ.ಎಸ್.ಡಿ ಸಭಾಪ್ರಾಂತ ಕಛೇರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಷಪರ ಕಾರ್ಯದರ್ಶಿಯಾಗಿ ಉದ್ಯೋಗದಲ್ಲಿರುವ ಶ್ರೀಮತಿ ರೇಶ್ಮಾ ಸೋನ್ಸ್ ಎಂಬವರು ತನಗೆ ಕಳೆದ 9 ತಿಂಗಳಿಂದ ದೈಹಿಕ , ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕರಾದ

ಬಿಜೆಪಿ ಕಾರ್ಪೋರೇಟರ್ ಗೆ ಕೊಲೆ ಬೆದರಿಕೆ!

ಸುರತ್ಕಲ್: ಇಲ್ಲಿನ ಕಾಟಿಪಳ್ಳ 3ನೇ ಬ್ಲಾಕ್ ನಲ್ಲಿ ಬಿಜೆಪಿ ಕಾರ್ಪೋರೇಟರ್ ಒಬ್ಬರ ಮೇಲೆ ಯುವಕನೊಬ್ಬ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ:ಬಿಜೆಪಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಎಂಬವರು ದೂರಿದ್ದು ಅದರಲ್ಲಿ ಸ್ಥಳೀಯ ನಿವಾಸಿ ಗಣೇಶ್ ದೇವಾಡಿಗ ಎಂಬವನನ್ನು ಆರೋಪಿ ಎಂದು ಹೆಸರಿಸಲಾಗಿದೆ. ಕಾಟಿಪಳ್ಳದಲ್ಲಿ ಸೇವಾ ಚಾರಿಟೇಬಲ್ ಟ್ರಸ್ಟ್ ಕಟ್ಟಿಕೊಂಡಿರುವ ಎ.ಪಿ.

ಉಳ್ಳಾಲ: ಯುವಕನ ಕೊಲೆಯತ್ನ

ಉಳ್ಳಾಲ: ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಆತನ ಮನೆ ಎದುರುಗಡೆಯೇ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಕೊಲೆಯತ್ನಕ್ಕೆ ಒಳಗಾದವರು. ಗಾಯಾಳುವನ್ನು ಗಂಭೀರ ಸ್ಥಿತಿಯಲ್ಲಿ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಎಂಬವರು ಇನ್ನಿಬ್ಬರನ್ನು ಸೇರಿಸಿಕೊಂಡು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಇಬ್ಬರಿಗಾಗಿ

ಕಿನ್ನಿಗೋಳಿ : ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಹಗಲು ದರೋಡೆ

ಕಿನ್ನಿಗೋಳಿ: ಕಿನ್ನಿಗೋಳಿ ಸುತ್ತಮುತ್ತ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಹಗಲು ದರೋಡೆಗಿಳಿಯುವ ತಂಡ ಕಾರ್ಯಾಚರಿಸುತ್ತಿದೆ. ಮನೆ ಮನೆಗೆ ಭೇಟಿ ನೀಡುತ್ತಿರುವ ಯುವಕನೋರ್ವ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಒಡವೆಗಳನ್ನು ಪಡೆದು, ತನ್ನ ಬಳಿ ಇರುವ ಪುಡಿಯೊಂದರಲ್ಲಿ ತನ್ನ ಪಾತ್ರೆಯಲ್ಲಿರುವ ನೀರಿನಲ್ಲಿ ತೊಳೆಯುತ್ತಾನೆ ಚಿನ್ನದ ಒಡವೆಗಳಿಗೆ ಹೊಳಪು ಬರುತ್ತದೆ ಅದರೆ ಒಡವೆಯ ಸುಮಾರು 25% ಕರಗಿ ಅವರಲ್ಲಿರುವ ನೀರಿನಲ್ಲಿರುತ್ತದೆ. ಅದನ್ನು ಆ ಯುವಕ

ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ವಿರುದ್ಧ ಪೂರ್ವ ದ್ವೇಷದ ದೂರು : ಆರೋಪ

ಮಹಿಳಾ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಶ್ರೀಲತಾ ಅವರ ವಿರುದ್ಧ ಫಾಸಿಮ್‌ ನೌಶಿಫ್‌ ಎಂಬವರು ಪೊಲೀಸ್‌ ಕಮಿಷನರ್‌ ಅವರಿಗೆ ಪೂರ್ವದ್ವೇಷದಲ್ಲಿ ಸುಳ್ಳು ದೂರು ನೀಡಿದ್ದಾರೆ. 2020 ನೇ ಸಾಲಿನಲ್ಲಿ ಮಹಿಳಾ ಠಾಣೆಯಲ್ಲಿ ನಪಿಸತ್ ಅಸ್ಮಾರ ನೀಡಿದ ದೂರಿನ ಆಧಾರದಲ್ಲಿ ವರದಕ್ಷಿಣ ಕಿರುಕುಳ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಮುನ್ನ ಫಾಸಿಮ್‌ ನೌಶಿಫ್‌ ಮೇಲೆ (2020ರಲ್ಲಿಯೇ ) ಎಂಡಿಎಂ ಮಾದಕ ದ್ರವ್ಯ ಅಕ್ರಮ ಸಾಗಾಟ ಪ್ರಕರಣ ದಾಖಲಾಗಿ, ಬಂಧಿತನಾಗಿದ್ದ. ಈ

ವಿಟ್ಲ: ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಪತಿಯ ಕೊಲೆ

ವಿಟ್ಲ: ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಅವರನ್ನು ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢ ಪಟ್ಟಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರವಿಂದ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್‌ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳಾಗಿದ್ದಾರೆ. ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳಿಂದ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್‌ ಕೆಲಸವನ್ನು ಯೋಗೀಶ

ಪಡುಬಿದ್ರಿ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ : ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ

ಗೃಹಿಣಿಯೊರ್ವರು ತನ್ನ ವಾಸದ ಮನೆಯ ಅಡುಗೆ ಕೋಣೆಯಲ್ಲಿ ಶಾಲಿನಿಂದ ನೇಣು ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನ್ಯಾಯಾಲಯ ಆರೋಪಿ ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆತ್ಮಹತ್ಯೆಗೆ ಶರಣಾದ ಗೃಹಿಣಿ ಪಡುಬಿದ್ರಿ ಕೆಳಗಿನ ಪೇಟೆ ನಿವಾಸಿ ಚೇತನ್ ಎಂಬಾತನ ಪತ್ನಿ ಮಮತ(43), ಎಂಟು ವರ್ಷದ ಒಂದು ಹೆಣ್ಣು ಮಗು ಹಾಗೂ ಹನ್ನೆರಡು ವರ್ಷದ ಗಂಡು ಮಗನನ್ನು ಹೊಂದಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದ್ದು, ಬಳಿಕ ಪೊಲೀಸ್

ಲಾರಿಗಳ ಕಳವು ಪ್ರಕರಣ : ಆರೋಪಿಗಳ ಸಹಿತ ವಾಹನ ಪತ್ತೆ

ಮಂಜೇಶ್ವರ: ಮಿಯಾಪದವು ಪರಿಸರದಲ್ಲಿ ಎರಡು ಲಾರಿಗಳನ್ನು ಬಂದೂಕು ತೋರಿಸಿ ಅಪಹರಿಸಿದ ಅರೋಪಿಗಳನ್ನು ಹಾಗೂಕಳವು ವಾಹನಗಳನ್ನು ಮಂಜೇಶ್ವರ ಪೊಲೀಸ್ರು ವಶಕ್ಕೆ ತೆಗೆದಿದ್ದಾರೆ. ಒಂದು ಆಲ್ಟೋ ಕಾರು ಹಾಗೂ ಬೈಕಿನಲ್ಲಿ ಆಗಮಿಸಿದ ತಂಡ ಈ ಕೃತ್ಯಗೈದಿದೆ. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸ್ರು ಸ್ಥಳೀಯರ ಮಾಹಿತಿ ಆಧಾರದಲ್ಲಿ ಕುರುಡಪದವು ಕೊಮ್ಮಂಗಳ ತನಕ ಅಪರಾಧಿಗಳನ್ನು ಹಿಂಬಾಲಿಸಿದ್ದಾರೆ. ಕುರುಡ ಪದವು ಕೊಮ್ಮಂಗಳಕ್ಕೆ ಪೊಲೀಸ್ರು ತಲುಪುತಿದ್ದಂತೆಯೇ

ಕೆಟ್ಟು ನಿಂತ ಲಾರಿಗೆ ಸ್ಕೂಟರ್ ಢಿಕ್ಕಿ: ಸ್ಕೂಟರ್ ಚಾಲಕ ಮೃತ್ಯು : ಸಹ ಸವಾರನಿಗೆ ಗಾಯ

ಉಳ್ಳಾಲ: ಕೆಟ್ಟು ನಿಂತ ಲಾರಿಗೆ ಎರಡು ಸ್ಕೂಟರ್ ಗಳು ಢಿಕ್ಕಿ ಹೊಡೆದು ಒಂದು ಸ್ಕೂಟರಿನಲ್ಲಿದ್ದ ಸವಾರ ಸಾವನ್ನಪ್ಪಿ ಸಹಸವಾರ ಗಂಭೀರ ಗಾಯಗೊಂಡು, ಇನ್ನೊಂದು ಸ್ಕೂಟರಿನಲ್ಲಿದ್ದ ಸವಾರ ಗಾಯಗೊಂಡ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.ಅಂಗರಗುಂಡಿ ನಿವಾಸಿ ಮೊಹಮ್ಮದ್ ನೌಫಾಲ್ (26) ಸಾವನ್ನಪ್ಪಿ ದವರು. ಸಹಸವಾರ ಉಮ್ಮರ್ ಫಾರುಕ್ ಎಂಬವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಇನ್ನೊಂದು ಸ್ಕೂಟರಿನಲ್ಲಿದ್ದ ಗಾಯಾಳುಗಳ ವಿವರ

ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿ

ವಿಟ್ಲ: ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ವೇಳೆ ಕಾರು ಪಲ್ಟಿಯಾದ ಘಟನೆ ವಿಟ್ಲ ಕಂಬಳಬೆಟ್ಟು ಮಸೀದಿ ಬಳಿ ನಡೆದಿದೆ.ಕಾರೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದು, ಈ ವೇಳೆ ಕಾರು ಪಲ್ಟಿಯಾಗಿದೆ. ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ