ಲಾರಿಗಳ ಕಳವು ಪ್ರಕರಣ : ಆರೋಪಿಗಳ ಸಹಿತ ವಾಹನ ಪತ್ತೆ

ಮಂಜೇಶ್ವರ: ಮಿಯಾಪದವು ಪರಿಸರದಲ್ಲಿ ಎರಡು ಲಾರಿಗಳನ್ನು ಬಂದೂಕು ತೋರಿಸಿ ಅಪಹರಿಸಿದ ಅರೋಪಿಗಳನ್ನು ಹಾಗೂಕಳವು ವಾಹನಗಳನ್ನು ಮಂಜೇಶ್ವರ ಪೊಲೀಸ್ರು ವಶಕ್ಕೆ ತೆಗೆದಿದ್ದಾರೆ.

ಒಂದು ಆಲ್ಟೋ ಕಾರು ಹಾಗೂ ಬೈಕಿನಲ್ಲಿ ಆಗಮಿಸಿದ ತಂಡ ಈ ಕೃತ್ಯಗೈದಿದೆ. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸ್ರು ಸ್ಥಳೀಯರ ಮಾಹಿತಿ ಆಧಾರದಲ್ಲಿ ಕುರುಡಪದವು ಕೊಮ್ಮಂಗಳ ತನಕ ಅಪರಾಧಿಗಳನ್ನು ಹಿಂಬಾಲಿಸಿದ್ದಾರೆ. ಕುರುಡ ಪದವು ಕೊಮ್ಮಂಗಳಕ್ಕೆ ಪೊಲೀಸ್ರು ತಲುಪುತಿದ್ದಂತೆಯೇ ಕಾರಿನಿಂದಿಳಿದ ತಂಡ ಪೊಲೀಸ್ರಿಗೆ ಬಂದೂಕು ತೋರಿಸಿದ್ದಾರೆ. ಈ ಸಂದರ್ಭ ಸಾಹಸಮಯವಾದ ರೀತಿಯಲ್ಲಿ ಪೊಲೀಸ್ರು ಇಬ್ಬರು ಅಪರಾಧಿಗಳನ್ನು ಸೆರೆ ಹಿಡಿದಿದ್ದಾರೆ. ಇವರಿಂದ ಬಂದೂಕು ಹಾಗೂ ಗುಂಡುಗಳನ್ನು ವಶಪಡಿಸಲಾಗಿದೆ. ಜೊತೆಯಾಗಿ ಅಪಹರಿಸಲಾದ ಎರಡು ಲಾರಿ ಅಪರಾಧಿಗಳು ಉಪಯೋಗಿಸಿದ ಕಾರು ವಶಕ್ಕೆ ತೆಗೆಯಲಾಗಿದೆ.

ಸಪ್ವಾನ್ ಹಾಗೂ ರಾಕೇಶ್ ಕಿಶೋರ್ ಬಂಧಿತ ಆರೋಪಿಗಳು. ರಾಕೇಶ್ ಕಿಶೋರ್ ವಿರುದ್ಧ ಆರ್ಮ್ಸ್ ಆಕ್ಟ್ ಪ್ರಕರಣಗಳಲ್ಲಿ ಕರ್ನಾಟಕ ಹಾಗೂ ಕೇರಳದಲ್ಲಿ ಆರೋಪಿಯೆನ್ನಲಾಗಿದೆ. ಈ ಕೃತ್ಯದ ಹಿಂದೆ ಅಂತರಾಜ್ಯ ಕ್ರಿಮಿನಲ್ ಗಳ ಕೈವಾಡವಿರುವ ಬಗ್ಗೆ ಪೊಲೀಸ್ರು ಶಂಕೆ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.