ಗಜರಾತಿನ ವಡೋದರದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದ ಹಾಲಿ ಸಂಸದೆ ರಂಜನಾ ಭಟ್ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿಯವರು ಎರಡು ಕಡೆ ಸ್ಪರ್ಧಿಸಿದ್ದರಿಂದ ವಡೋದರಕ್ಕೆ ಮರು ಚುನಾವಣೆ ನಡೆದಿತ್ತು. ಆಗ ಗೆದ್ದಿದ್ದ ರಂಜನಾ ಭಟ್ 2019ರಲ್ಲೂ ಗೆದ್ದಿದ್ದರು ಮತ್ತು ಈ ಬಾರಿಯೂ ಟಿಕೆಟ್ ಪಡೆದಿದ್ದರು.
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಅನುಮತಿ ನೀಡಿದೆ.ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ. ಈ ಕುರಿತಂತೆ
ಇಸ್ರೋದವರು ತಯಾರಿಸಿದ ಆರ್‌ಎಲ್‌ವಿ ಪುಷ್ಪಕ್ ಮರುಬಳಕೆ ಉಡ್ಡಯನ ವಾಹನದ ಪರೀಕ್ಷೆಯು ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಇದು ಆರ್‌ಎಲ್‌ವಿ ಮೂರನೆಯ ಪ್ರಯೋಗ ವಾಹನವಾಗಿದೆ.ಚಳ್ಳಕೆರೆಯಲ್ಲಿರುವ ಪರೀಕ್ಷಾ ರನ್‌ವೇಯಿಂದ ಇಂದು ಪ್ರಯೋಗ ಪರೀಕ್ಷೆ ಯಶಸ್ಸು ಕಂಡಿತು. 2016ರಲ್ಲಿ ಮೊದಲ ಪ್ರಯೋಗ ನಡಸಲಾಗಿತ್ತು. 2023ರಲ್ಲಿ ಎರಡನೇ ಪ್ರಯೋಗ ಯಶಸ್ವಿಯಾದ ಬೆನ್ನಿಗೇ ಮೂರನೆಯ ಪ್ರಯೋಗಕ್ಕೆ ಕೈ ಹಾಕಲಾಗಿತ್ತು. ವಾಯು ಪಡೆಯ ಹೆಲಿಕಾಪ್ಟರ್ ಮೂಲಕ ಉಡ್ಡಯಣ ವಾಹನವನ್ನು ನಾಲ್ಕೂವರೆ
ಬಿಹಾರದ ಸುಪೌಲ್ ಎಂಬಲ್ಲಿ ಕಟ್ಟುತ್ತಿದ್ದ ಸೇತುವೆ ಕುಸಿದುದರಿಂದ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಇನ್ನೂ ಅವಶೇಷಗಳಡಿ ಹಲವರು ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಕೋಸಿ ನದಿಗೆ 984 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ಕಟ್ಟಲಾಗುತ್ತಿದೆ. ಇತ್ತೀಚೆಗೆ ಬಾಗಲ್ಪುರದಲ್ಲೂ ಕಟ್ಟುತ್ತಿದ್ದ ಸೇತುವೆಯೊಂದು ಹೀಗೇ ಕುಸಿದು ಅನಾಹುತವಾಗಿತ್ತು. ಬಿಜೆಪಿ- ಜೆಡಿಎಸ್ ಭ್ರಷ್ಟಾಚಾರದ ಫಲ ಇದು ಎಂದು ಪ್ರತಿಪಕ್ಷಗಳು ಟೀಕಿಸಿವೆ. ಸುಪೌಲ್
ಸಿಕ್ಕಿಂ ಸರಕಾರಕ್ಕೆ ರೂ. 4,500 ಕೋಟಿ ವಂಚಿಸಿರುವನು ಎನ್ನಲಾದ ಕೊಯಮತ್ತೂರು ಮೂಲದ ಸ್ಯಾಂಟಿಯಾಗೋ ಮಾರ್ಟಿನ್ ಮ್ಯಾನ್ಮಾರ್‌ನಲ್ಲಿ ಕೆಲಸ ಮಾಡಿ ಭಾರತಕ್ಕೆ ಹಿಂತಿರುಗಿದವನು. ನಾನಾ ದಾರಿಯಿಂದ ಲಾಟರಿ ರಾಜ ಎನಿಸಿ, ಫ್ಯೂಚರ್ ಗೇಮಿಂಗ್ ಹಾಗೂ ಹೋಟೆಲ್‌ಗಳ ಮಾಲಕನಾಗಿರುವನು. 1,368 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಕೊಂಡಿರುವ ಈತ ರಾಜಕೀಯ ಪಕ್ಷಗಳಿಗೆ ತನ್ನ ಇಷ್ಟಾನುಸಾರವಾಗಿ ಹಂಚಿಕೆ ಮಾಡಿದ್ದಾನೆ. ಮಾರ್ಟಿನ್ ಸಾಮ್ರಾಜ್ಯವು ಮಹಾರಾಷ್ಟ್ರ, ಸಿಕ್ಕಿಂ, ಪಂಜಾಬ್, ಪಡುವಣ
ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕನಿಷ್ಠ ಎಂಟು ಹಾಲಿ ಸಂಸದರನ್ನು ಕೈಬಿಟ್ಟಿದೆ ಮತ್ತು ಮಾಜಿ ಕ್ರಿಕೆಟಿಗರಾದ ಯೂಸುಫ್ ಪಠಾಣ್ ಮತ್ತು ಕೀರ್ತಿ ಆಜಾದ್ ಅವರಂತಹ ಹಲವು ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಪಕ್ಷವು 16 ಹಾಲಿ ಸಂಸದರನ್ನು ಮತ್ತು 12 ಮಹಿಳೆಯರನ್ನು ಕಣಕ್ಕಿಳಿಸಿದೆ. ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಬಹರಂಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ ದ್ದಾರೆ,
ಪ್ರಧಾನಿ ಮೋದಿಯವರು ಅರುಣಾಚಲ ಪ್ರದೇಶದಲ್ಲಿ ಸುರಂಗ ಮಾರ್ಗ ಉದ್ಘಾಟಿಸಿದರು. ಈ ಸುರಂಗ ಮಾರ್ಗವು ಗಡಿ ಉದ್ದಕ್ಕೂ ಹಬ್ಬುವ ರಸ್ತಗೆ ಪ್ರಮುಖ ಸಂಪರ್ಕವಾಗಿದೆ. ಅರ್ಧ ಕಿಲೋಮೀಟರಿಗಿಂತಲೂ ಚಿಕ್ಕದಾದರೂ ಈ ಸುರಂಗವು ಚೀನಾದ ಗಡಿಯ ಆ ಕಡೆಯ ರಸ್ತೆಗೆ ಸಮಾನಾಂತರ ರಸ್ತೆ ಜಾಲ ಹೊಂದುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾದ ಗಡಿಯ ಹತೋಟಿ ರೇಖೆಯು 3,488 ಕಿಲೋಮೀಟರ್ ಇದ್ದು, ಅರುಣಾಚಲ ಪ್ರದೇಶದ ಗಡಿ ತುಂಬ ಸೂಕ್ಷ್ಮ ಪ್ರದೇಶವೆನಿಸಿದೆ.
ಕೇರಳದ ಮುಖ್ಯಮಂತ್ರಿಯಾಗಿದ್ದ ಎ. ಕೆ. ಕರುಣಾಕರ್ ಮಕ್ಕಳು ಎರಡು ದಾರಿ ಹಿಡಿದಿದ್ದರೂ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳದೆ ಮುರಳೀಧರನ್‌ರಿಗೆ ಟಿಕೆಟ್ ನೀಡಿದೆ. ಮರಳೀಧರನ್‌ರು ಸದ್ಯ ವಡಕ್ಕರ ಸಂಸದರು. ಆದರೆ ಅವರಿಗೆ ಈಗ ತ್ರಿಶೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ತ್ರಿಶೂರು ಕರುಣಾಕರನ್‌ರ ಮೂಲ ನೆಲೆ. ಪದ್ಮಜಾರು ಬಿಜೆಪಿಗೆ ಸೇರಿರುವುದರಿಂದ ಮುರಳೀಧರನ್‌ರಿಗೆ ಕ್ಷೇತ್ರ ಬದಲಿಸಿ ಟಿಕೆಟ್ ನೀಡಲಾಗಿದೆ. ತ್ರಿಶೂರ್‌ನಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಕರುಣಾಕರನ್
ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ಕರಾಳ ದಿನ ಎಂದು ಕರೆದದ್ದು ತಪ್ಪಲ್ಲ. ಅದು ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಸರಕಾರದ ಕ್ರಮಗಳನ್ನು ಟೀಕಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಪ್ರಜೆಗೆ ಇದೆ ಎಂದೂ ಅದು ಹೇಳಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಸಹ ಸುಪ್ರೀಂ ಕೋರ್ಟು ಹೇಳಿದೆ. ಪಾಕಿಸ್ತಾನಕ್ಕೆ ಯಾರಾದರೂ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದರೆ ಅದು ಅಪರಾಧ ಆಗುವುದಿಲ್ಲ. ಅದು ಸ್ನೇಹ ಸೂಚಕ
ಉತ್ತರ ಕರ್ನಾಟಕ ಮೂಲದ ಬೆಂಗಳೂರು ನಿವಾಸಿ ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ಸುಧಾ ಮೂರ್ತಿಯವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಬಗೆಗೆ ಪ್ರಧಾನಿ ಮೋದಿಯವರು ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿ, ರಾಷ್ಟ್ರಪತಿಯವರು ತಮ್ಮನ್ನು ನೇಮಿಸಿರುವುದು ಆನಂದ ತಂದಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಮ ನಿರ್ದೇಶನ ಮಾಡಿದ್ದಾರೆ. ಇದರಿಂದ ನಾರೀ ಶಕ್ತಿಗೆ ಬಲ ಬಂದಂತಾಗಿದೆ ಎಂದೂ ಹೇಳಲಾಗಿದೆ.




























