ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ
ಉತ್ತರ ಕರ್ನಾಟಕ ಮೂಲದ ಬೆಂಗಳೂರು ನಿವಾಸಿ ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ಸುಧಾ ಮೂರ್ತಿಯವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.
ಈ ಬಗೆಗೆ ಪ್ರಧಾನಿ ಮೋದಿಯವರು ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿ, ರಾಷ್ಟ್ರಪತಿಯವರು ತಮ್ಮನ್ನು ನೇಮಿಸಿರುವುದು ಆನಂದ ತಂದಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಮ ನಿರ್ದೇಶನ ಮಾಡಿದ್ದಾರೆ. ಇದರಿಂದ ನಾರೀ ಶಕ್ತಿಗೆ ಬಲ ಬಂದಂತಾಗಿದೆ ಎಂದೂ ಹೇಳಲಾಗಿದೆ.